Monday, May 10, 2021

* ಸಾಕು ಧಾವಂತ *

ಮಾತು ಕರಗಿ ಮೌನವೇರುವ ಕಾಲ
ದಿನ ಬೆಳಗಾದರೆ ಕಠೋರ ಕರ್ಕಶ 
ಬೀಭತ್ಸ ಮರಣ ಮೃದಂಗಳ ಅಲೆ
ಬಂದು ಬೀಸಿದೆ ಕಾಣದ ಜೀವ ಜ್ವಾಲೆ//

ಕಿವಿ ತಮಟೆ ಸೀಳುವ ಶುದ್ದಿಗಳು
ಒಗಟಾಗಿ ಕಾಡುವವು ಮನ ದಿನವೆಲ್ಲ 
ಜಾಗಟಿ ಹೊಡೆದರು ಅದೆ ಮೊಂಡತನ
ಹೇಳಿದ್ದೆ ಹೇಳಿದ್ದು ಕೇಳಾಗಿದೆ ಸಿನಿಕತನ//

ಕಾಲನ ಕೈಗಳ ಬೇರುಗಳರಿಯದ ಜನ
ಕಾಣುವ ಸತ್ಯವ ಬೆನ್ನು ಹತ್ತವರು ದಿನ
ಕಾಣದ ಸತ್ಯ ವೂ ಉಂಟು,ಲೆಕ್ಕವಿದೆ
ಕರ್ತಾರನ ಸಂಬಳ ತಪ್ಪದೆ ಬರುವುದು//

ಹಗಲಿರಳು ಮನುಕುಲದ ವೇದನೆಗೆ 
ಹೆಗಲು ಕೊಡುವ ಸಂವೇದನಾಶೀಲರ
ಹೃದಯಗಳಿಗೆ ಇಲ್ಲ ನಮ್ಮಲ್ಲಿ ಕೊರತೆ  
ಹಣಕ್ಕೆ ಹೇಸಿಗೆ ತುಳಿದವರದೇಕೆ ಚಿಂತೆ//

ತಾಳಿದ ಬಾಳು ತೆವಳಿ ತಲುಪುವುದು
ತಡಮಾಡದೆ ಓಡಿ ತಲುಪುವದೆಲ್ಲೆಗೆ?
ಕಳೆದದ್ದು ಸಾಕು ದಿನನಿತ್ಯ ಧಾವಂತ 
ಈಗಲಾದರೂ ಇರಲಿ ಮನ ಶಾಂತ//

           ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...