Monday, May 10, 2021

* ರಾಷ್ಟ್ರ ಪಥ *

ಕನಸೊಂದು ಕಂಡೆ ಕನ್ನಡದ ಕಂದ 
ಕವಿ ಶೈಲದ ಕುಸುಮ ನಾನಿಂದು
ಕಾವೇರಿಯಿಂದ ಗೋದಾವರಿವರೆಗೆ  
ಶ್ರೀವಿಜಯನ ಮಾತು ಮೀರಿದೆ
ಹಾಯಾಗಿ //

ವಿಂದ್ಯ ಸಾತ್ಪುಡಿ ಪರ್ವತವ ಏರಿ
ಬಯಲು ಬೆಳವಲ ನಾಗರಿಕತೆ ಹೀರಿ 
ಮರಿದುಂಬಿಯಾಗಿ ಹಿಮಪುಷ್ಪವೇರಿ
ಮನದುಂಬಿ ಹಾಡಿದೆ ಕೊಗಿಲೆಯ 
ಮರಿಯಾಗಿ//

ಸಹ್ಯಾದ್ರಿ ಮಲೆಗಳ ಚಂದನವನ
ವೈಚಾರಿಕ ಕವಿಗಳ ಕವನದ ಚರಣ 
ಪಂಪ, ಪೂನ್ನ, ಕುವೆಂಪು ಪಾದದ
ಕಂಪು ಸೂಸುವ ಮೈಸೂರು 
ಮಲ್ಲಿಗೆಯಾಗಿ//

ವಂಗನಾಡಿನ ಗಂಗೆಯ ತಟದ 
ಸುಂದರಬನದ ಬಿಳಲುಗಳ ವನ
ಅಂದದ ಹುಲಿಗಳ ಘರ್ಜನೆ ಮನ
ವಂದೆ ಮಾತರಂ ಹಾಡುವೆ
ದ್ವನಿಯಾಗಿ //

ಪಡುವಣ ನಾಡಿನ ಕಾಡಿನ ಕೇಸರಿ
ಪವಡಿಸಿದ ಗಿರ್ ಗತ್ತಿನ ಘರ್ಜನೆ  
ಸಬರಮತಿ ಸಂತನ ಶಾಂತಿ ಮಂತ್ರ 
ಸತ್ಯ ಅಹಿಂಸೆ ಸನ್ಮಾರ್ಗ ಬೆಳೆಯ 
ಫಲವಾಗಿ // 

             ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...