Thursday, May 6, 2021

* ಪಳಗಿಸು ನೀ ದೇಹ ಮನಸ್ಸು *

ಗೋಲಿ ಆಡುವ ಬಾಲನ ಬೆರಳಿಗೆ 
ಚೀಲದ ಕಸಿಗಳೇರಿಸಿ ಕಳಿಸಿದೆ ಶಾಲೆಗೆ 
ಆಟದ ಬಯಲುಗಳಾದವು ಬಿಕೋ..  
ಕನಸೊಂದೆ ನೀ ವೈದ್ಯನಾಗು ಸಾಕೋ !//

ಸದೃಡ ಯವಕರು, ಸದೃಡ ಸಮಾಜ 
ದೃತಿಗೆಡದೆ ಓಡಬೇಕು ಅಲ್ಲಿ ನಿರಂತರ
ಬೊಜ್ಜು ಬೆಳೆಸಿ ಹೆಜ್ಜೆ ಹಾಕಿದರೆ ಹೇಗೆ?
ಗುಜರಿಗೆ ಬೀಳುವದು ಒಂದೆ ಆಯ್ಕೆ//
 
ರಾಷ್ಟ್ರವೆಂದರೆ ಕಲ್ಲು ಗಾರೆ ಕಟ್ಟಡವಲ್ಲ 
ಕಟ್ಟಬೇಕು ಜನರ ದೇಹ ಮನಸ್ಸಿನಲ್ಲಿ  
ಗಟ್ಟಿಯಾಗಿ ನಿಲ್ಲುವ ದಿಟ್ಟ ಯುವಕರ
ಪಟ್ಟಿ ದೊಡ್ಡದಿದೆ ನೂರಲ್ಲ ಸಾವಿರ //

ಜವಾನನಿಂದ ದಿವಾನನವರೆಗೂ 
ಸರ್ವರಿಗೂ ಬೇಕು ಅನ್ನ ಹಾಕಲು ರೈತ
ಎತ್ತಿ ಇಳಿಸಲು ಬೇಕೆ ಬೇಕು ಕಾರ್ಮಿಕ 
ಎಲ್ಲರೂ ಕೇಳುವುದೊಂದೆ ಮಾಲಕ//

ಬಯಲುಗಳಿಲ್ಲದೆ ಬೆಳೆದವು ಶಾಲೆ 
ಬಾಯಿಪಾಠ ಮಾಡುವದೊಂದೆ ಕಲೆ
ಬರುವದೊಂದೆ ಪುಸ್ತಕ ಮಸ್ತಕದ ನೆಲೆ
ಬಹುಮುಖ ಪ್ರತಿಭೆಗೆ ಯಾವಾಗ ಬೆಲೆ//

ರೋಗಗಳೆಂದರೆ ವೈರಿಗಳೇನೋ ಸರಿ
ಪರಿಹಾರಕ್ಕೆ ವೈದ್ಯರ ಕಾಣುವುದೆ ದಾರಿ
ಇದೊಂದೆ ಪರಿಹಾರವೆಂದರೆ ನೀ ವೈರಿ
ದೇಹ ಮನಸ್ಸು ಪಳಗಿಸು ಶಕ್ತಿ ಮೀರಿ//

            ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...