Wednesday, May 19, 2021

* ಸಾಧನೆಗೆ ಸಿಗದ ಅಂಗ *

ಸಾಧನೆಗೆ ಸಿಗದ ಯಾವ ದಾರಿಗಳಿಲ್ಲ
ಸಾಧಕನ ಕರಗಳಲಿ ಜೊತೆಯಾದುವಲ್ಲ
ಸಾಗರವ ಈಜಿ ಸೇರಿದರು ದೂರವೆಲ್ಲ
ಸಪ್ತ ಖಂಡಗಳನು ತಂದನು ವೃತ್ತದಲ್ಲಿ//

ನಭಕೆ ಮುಖಮಾಡಿ ಮಲಗಿರುವರಲ್ಲ
ಅಗಣಿತ ನಕ್ಷತ್ರ ಗ್ರಹ ಎಣಿಸುವರಲ್ಲ
ಎಣಿಸುವ ಕನಸು ಇನ್ನೂ ಮುಗಿದಿಲ್ಲ
ಮುಗಿಯದೆ ಬಿಡುವವರು ಇವರಲ್ಲ//

ಉಸಿರು ಬಿಗಿ ಹಿಡಿದು ದುಡಿತಾರಲ್ಲ 
ಹಸಿರುಳಿಸಲು ಹುಸಿ ಕಾಳಜಿಯೆ ಎಲ್ಲಾ
ಮೋಸ ಹೋದ ಹೊಸ ದಾಸರಿವರೆಲ್ಲ
ಯಂತ್ರದುಸಿರಿಗೆ ಹಪಹಪಿಸುವರಲ್ಲ//

ದೇಹ ಸೀಳಬಲ್ಲ, ಸ್ಟೀಲ್ ಸೇರಿಸಬಲ್ಲ
ಸಿರಾಮಿಕ್ ಸೇರಸಿ ಗಟ್ಟಿಮಾಡಬಲ್ಲ
ತನಗೆ ಬೇಕೆಂದ ತಳಿ ತಯಾರಿಸಬಲ್ಲ
ತಳಿಗಳೆ ಇವನಳಿದಾಗ ಸನಿಹಕಿಲ್ಲ//

ಮಂಗನಂಗಳಕೆ ಚಂಗನೆ ಹಾರಬಲ್ಲ
ಸಂಘಟನೆಗೆ ಇವನಲ್ಲಿ ಕೊರತೆ ಇಲ್ಲ  
ಅಂಗಳದ ಗೆಳೆಯನ ಚಿಂತೆ ಇವನಿಗಿಲ್ಲ
ಅಂಗವುಳಿಸಲು ಹರಸಾಹಸ ನಿಂತಿಲ್ಲ //


             ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...