Friday, May 21, 2021

* ಕ್ಷಮಿಸು ನೀ ತಂದೆ *

ಧರಣಿಯ ಒಡೆಯ ಕರುಣೆ ತೋರು
ಶರಣು ದೇವರೆ ನಿನ್ನಯ ಚರಣಕೆ/
ಕೊರೋನಾ ಎಂಬ ಕತ್ತಿಯ ಹಿಡಿದು
ಕೊಲ್ಲಬೇಡ ನಾವೆಲ್ಲಾ ಹರೋಹರ//

ಮನುಕುಲದ ಹಿತವ ಮೇಲೆ ಮಾಡಿ
ಜೀವಸಂಕುಲ ಮರೆತೆ ನಾವೆ ಕೋಡಿ/
ದಿನವು ನರಳುತಿರುವೆ ಪಾಪ ನೋಡಿ
ನಿಲ್ಲಿಸೆಮ್ಮ ದೀನ ಬದುಕು ಕಾಪಾಡಿ //

ಕಾಡು ಕಡಿದು ನಾಡು ಕಟ್ಟಿದ ನರರ
ನದಿ ನಿಲ್ಲಿಸಿ ಕೊಳೆ ಮಾಡಿದ ಕೂಳರ/
ಧರಣಿ ಒಡಲು ಬಕ್ಷಿಸಿದ ಬಕಾಸುರರ
ಮರೆತು ದಯತೋರು ಕರುಣಾಕರ //

ನೆಲಮುಗಿಲ ಜಯಸಿದೆನೆಂಬ ಮದವು
ನರನ ನೆತ್ತಿಗೇರಿದ ಸ್ವಾರ್ಥದ ಫಲವು/
ನಿನ್ನ ಮಕ್ಕಳೊಮ್ಮೆ ಬಿದ್ದು ಬೇಡುವೆವು
ನರಕದಿಂದೆಮ್ಮ ಸಂರಕ್ಷಿಸು ದೇವಾ//

ಧರ್ಮವೆಂದರೆ ಲಾಂಛನವೆಂದು
ದಿನವಿಡಿ ಹೊಡೆದಾಡಿದೆವು ನೊಂದು/ 
ದಯವೆ ಧರ್ಮ, ಅರಿವಾಯಿತಿಂದು
ದಾರಿ ಹಿಡಿಯಲು ಕ್ಷಮಿಸು ನೀ ತಂದೆ//

                  ಬಸನಗೌಡ ಗೌಡರ 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...