Saturday, May 29, 2021

* ತಲೆ ತಲಾಂತರ *

ತಲೆಮಾರು ಬೆಳೆದು ಬಂತು, ನಿಂತು 
ನೆಲದ ಹಿಡಿಮಣ್ಣಿನ ಚಂದದ ಬೇರಿಂದ 
ತಲೆಯಲ್ಲಿ ಚಿಗುರಲಿಲ್ಲ ಅಪ್ಪ ಅಜ್ಜನಿಗೆ
ಕುಲವೆ ಧರಿಯಲ್ಲಿ ಸಕಲವೂ ಎಂದು//

ಮಗನ ತಲೆಯಲ್ಲಿ ಆಸೆಯ ಚಿಗುರೆಲೆ
ಬಾಗಿನಡೆವ ಭಾವನೆ ಮಾಡಿದ ಕೊಲೆ
ಸಾಗಿನೆಡೆದ ಕಾಣಲಿಲ್ಲ ಸಾಗರದ ಅಲೆ
ಸುತ್ತವರಿದಾಗ ಕಡಲಿವನಿಗೆ ಜ್ವಾಲೆ//

ಶರಧಿಯ ಸರಿಸುವ ಹರಸಾಹಸ
ಕೊರಕಲು ಕಂಡಾಗ ತಲೆಯ ಬಿರುಕು
ಗೊರಕೆ ಹೊಡೆದವರಿಗೆ ಈಗ ಮರುಕ
ಬೇರು ಭದ್ರಪಡಿಸ ನಿಂತ ತಲೆ ತಿರುಕ//

ಕಾಲ ಕಳೆಯುವ ಮುನ್ನ ಸಾಲಿಗೇರಲಿ
ಶೂಲವದು ಸಕಲವು ತನಗಾಗೆಂದಲಿ
ಬಾಲಕಳದು ಬೆಳದು ಬೆಳಕಾಗು ಜಗದಿ
ಛಲವಿರಲಿ ಕಟ್ಟುವೆ ಕಾಡಿನ ನಾಡನು//

ಬಸನಗೌಡ ಗೌಡರ 


    


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...