Sunday, May 30, 2021

* ಬೇಕು ನಿಸರ್ಗದ ನರ *

ಕರವಲ್ಲವಿದು ಸೃಷ್ಟಿಯ ವರ 
ಬೆರುಳು ಬಂಧನದಿ ಅರಳಿದೆ ವನ/
ಸೆರಗೊಡ್ಡಿ ಬೇಡುವೆ ಸ್ಮಶಾನ ಶಿವನ
ಮರದ ರೂಪದಲ್ಲಿ ತೋರು ವದನ //

ಅಂದು ಪಶುಪತಿ ಸಿಂಧೂ ಕೊಳ್ಳದ
ಇಂದು ಹರ, ಹೆಸರಿಗೇನು ಇಲ್ಲ ಬರ/
ತಂದು ನಮಿಸಿ ಬೇಡುವೆವು ವರ
ತುಂಬಿ ಹರಡಲಿ ಶ್ರೀಗಂಧದ ಪ್ರವರ//

ಹಸಿದು ಮುಕ್ಕುವ ಕಾಡು ಹೆಬ್ಬುಲಿಯ  
ಹೊಸಿಕಿ ಹಾಕುವ ಭಯವ ಕಳೆದು /
ಹರಣಿ ತಾ ಸ್ವಚ್ಛಂದವಾಗಿ ಬೆಳೆದು 
ಹೊಸ ಸಂದೇಶ ಹಾಡಿದೆ ಜಗದಲಿ//

ಪಶು ಪಕ್ಷಿಗಳಿಗೆ ಸ್ವಚ್ಛಂದ ಕನಸು
ಯಶ ಕಂಡು ಹಾರುವವು ನಭ ಏರಿ
ಪಾಶವಿ ಕೃತ್ಯ ಎಸಗುವರಿಲ್ಲ ಈ ಬಾರಿ  
ನಿಸರ್ಗದ ನರನ ಸೃಷ್ಟಿಸು ಮುರಾರಿ //


                ಬಸನಗೌಡ ಗೌಡರ

                  ಗುಳೇದಗುಡ್ಡ 


No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...