Sunday, June 6, 2021

* ಭಾವನೆಗಳರಳಿ ಜನಮಂದಿರವಾಗಿ *

ಏಳು ಬೀಳಿನ ನಡುವೆ ನಡೆದಿದೆ 
ತಾಳ ಮದ್ದಲೆ, ಬೀಳನು ತುಳಿದು 
ಏಳುವುದು ಸಹಜವಾಗಲಿ ಗೆಳೆಯ 
ತುಳಿದ ಕಾಲು ಸುತ್ತಿ ಏಳು ಬಳ್ಳಿಯಾಗಿ/

ಕಾಳಸಂತೆಯಲಿ ಖರೀದಿಸಿ ಖೂಳರಿಗೆ 
ಬಾಳು ನೀಡುವ ಕರ್ಮವ ತೊರೆದು
ಬಳಿ ಬಂದ ವ್ಯಾಪಾರಿಗಾಗು ಗೆಳೆಯ 
ಕೊಳತೆ ರಾಡಿ ಬಳಸು ಗೊಬ್ಬರವಾಗಿ/

ಬೇವಿನ ಬೀಜಕ್ಕೆ ಬೆಲ್ಲದ ಬೆರಣಿ ಮೆತ್ತಿ
ಸಾವಿರುವ ದೇಹ ವ್ಯಾಮೋಹ ಕಳೆದು 
ಭವಕೆ ಬಗ್ಗುವ ಬದುಕಾಗಲಿ ಗೆಳೆಯ 
ಭಾವನೆಗಳರಲಿ ಜನ ಮಂದಿರವಾಗಿ/

ಉಚ್ಚರೆನ್ನುವ ಹುಚ್ಚರ ಹೆಚ್ಚುಗಾರಿಕೆ
ಹೆಚ್ಚು ದಿನ ನಡೆಯದಂತೆ ಹರಿದು
ನೀಚರೂ ಸಚ್ಚಾರಿತ್ರ್ಯರಾಗಲಿ ಗೆಳೆಯ 
ಇಚ್ಛಿಯಂತೆ ನಡೆ ನೆಚ್ಚಿನ ಬಂಧುವಾಗಿ/

ತನ್ನದೆ ಸರಿ ಎನ್ನುವ ತತ್ವ ಭಿನ್ನರ ಕಣ್ಣು 
ಹೊನ್ನಿಗೆ ಬಣ್ಣ ಬದಲಿಸಿದರೆ ಸರಿದು
ತನ್ನತನ ಉಳಿಸಿಕೊಳ್ಳುಬೇಕು ಗೆಳೆಯ 
ತನ್ನಂತೆ ಪರರ ಬಗೆ ಹರ ಗುರುವಾಗಿ /

                        ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...