Sunday, June 13, 2021

* ಜೀವನ ಜೋಕಾಲಿ *

ಜೀವನದ ಜೋಕಾಲಿ ಜೀಕುವೆನು 
ಯಾವ ಗಿಡವಾದರೇನು 
ನೀ ಜೊತೆಯಿರಲು //

ಹಿತವಾಗಿ ಹಾಡುತಾ ನಲಿಯುವೆನು
ನಿನ್ನ ಸ್ಮರಣೆಯೊಂದು ಸಾಕು
ಬೆಳಕು ಬರಲು//

ಹರುಷದಿ ವರುಷ ಕಳೆಯುವೆನು 
ವಿರಸವು ಬೇಕು ನಮಗೆ 
ಸವಿ ತಿಳಿಯಲು //

ಮೇಲೇರಿ ಇಳಿದೇರುವೆನು
ಛಲದ ನಿನ್ನ ಪ್ರೀತಿಯು ಸಾಕು
ವಲವು ತುಂಬಿ ಬರಲು//

ಬಯಕೆಯ ಬದುಕು ಬೆಸಯುವೆನು
ನಿಯತವಾಗಿ ಜೀಕು ಸುಮ್ಮನೆ 
ನೀ ನನ್ನವಳಿರಲು//

ಹಗ್ಗ ಟೊಂಗೆ ಸೇರಿ ಬಿಗಿಯುವೆನು
ಜಗ್ಗಿ ಜೀಕಿದರೆ ಬಗ್ಗವುದೆ ಸಗ್ಗ
ಹಿಗ್ಗಿ ನೂಕುತಿರಲು//

ಹಾದಿ ಬೀದಿಯ ಜನ ಹಳಿದರೇನು
ಓದಿ ತಿಳಿದ ಮಾತಿನ ಜಾಣೆ
ನಿನ್ನ ನಿಜ ಭಾವವಿರಲು//

              ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...