Sunday, June 20, 2021

*ಅಪ್ಪನೆಂಬ ಆಲದ ಮರ *

ಅಪ್ಪನೆಂಬ ಆಲದ ಮರ 
ಅದೆಷ್ಟು ಕಷ್ಟ ಕಾರ್ಪಣ್ಯಗಳನ್ನು        
ತಲೆಯಲ್ಲಿ ತುಂಬಿ ತುಂಬು ಕುಟುಂಬ            
ನಡೆಸಿದ ಅರಿವವಾಗಲಿಲ್ಲ ನನಗಂದು.
ಅಗ ಕಂಡದ್ದು ಬರಿ ಕೋಪದಿಂದ ಕೂಡಿದ,                    ಸಿಡುಕಿನೊಳಗೆ ಪ್ರೀತಿಯ ಲಾವಾರಸ ತುಂಬಿದ ಜ್ವಾಲಾಮುಖಿ. ಅಗಾಗ ಹೊರಹೊಮ್ಮುವ            
ಅಕ್ಕರೆಯ ಕಾರಂಜಿ ......
ಅರಿತು ನಡೆಯಲಾಗದೆ ಸಿಲುಕುತ್ತಿದ್ದೆ 
ನಾ ಒಮ್ಮೊಮ್ಮೆ  ಗೊಂದಲದ ಗೊಡಾಗಿ...!
ತಿದ್ಧಿ ತೀಡಿದ ತತ್ವಜ್ಞಾನಿ. ಕುಕ್ಕುಲುತನದಿಂದ 
ಕಥೆ ಹೇಳಿದ ಕಥೆಗಾರ, 
ತಪ್ಪಿ ನೆಡೆದಾಗ ದುರ್ವಾಸಮುನಿ .
ಬಡಿದ ದಿನಗಳೆ ಇಲ್ಲ ಬರಿ ಕಣ್ಣು ಕಿಸಿದೆ ಅಬ್ಬರಿಸಿ ನಿಬ್ಬೆರಗಾಗುವಂತೆ ಮಾಡಿದ ಮಾಂತ್ರಿಕ .
ನಿದ್ದೆಯಲ್ಲಿಯೂ ಸಿದ್ಧರಾಗಿರಬೇಕಿತ್ತು ಶಿಸ್ತಿನ  
ಸಿಪಾಯಿಯಾಗಿ ಹಾಗಾಗಿ ಈಗ 
ನಾನೊಬ್ಬ ಉಪಯೋಗಿ.... 
ಇಲ್ಲದಿದ್ದರೆ ಹೇಗಾಗುತ್ತಿದ್ದೆ ಯೋಗಿ ?
ಪ್ರೀತಿ, ಪ್ರೇಮ,ಕೋಪ,ತಾಪಗಳನು 
ಕಲಸಿ ಬದುಕೆಂಬ ಕುಲುಮೆಯಲ್ಲಿ ಕುಟ್ಟಿ,ತಟ್ಟಿ              ಬಂಗಾರದ ಗಟ್ಟಿ ಮಾಡಿದೆ ಅಪ್ಪ.....
ಇಂದು ನೀನಿಲ್ಲದೆ  ವಂದಿಸಲಿ ಯಾರೆಗೆ ?
ಸಂದಿಗೊಂದೊಂದು ದೇವರು 
ತಂದು  ಕೊಡಬಲ್ಲರೆ ಕರಳು ಬಳ್ಳಿಯ 
ಕಾಳಜಿಯೊಂದನು ? 
ಗುರುವಿನ ಗುಲಾಮನನ್ನಾಗಿ ನೀ ನನ್ನ  
ತಿದ್ದದಿದ್ದರೆ ಹೇಗಾಗುತ್ತಿದ್ದ ನಾ ದೊರೆ ?.
ಎಲ್ಲಾ ಇದೆ  ಆದರೆ ನೀನು ಇಲ್ಲ 
ಎನ್ನುವುದೊಂದೆ ನನ್ನ ಆನಂದಕ್ಕೆ ಬರೆ 
ನಿನ್ನ ನೆನಪು ಅಜರಾಮರ ಅದೊಂದೆ 
ಅನುದಿನದ ಸಂತೋಷಕ್ಕೆ ಆಸರೆ.
ಎಲ್ಲರಿಗೂ ವಿಶ್ವ  ಅಪ್ಪಂದಿರ ದಿನದ ಶುಭಾಶಯಗಳು
 
           ಬಸನಗೌಡ ಗೌಡರ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...