ಇಂದು ವಿಶ್ವ ವಿದ್ಯಾರ್ಥಿಗಳ ದಿನ ಈ ದಿನವನ್ನು ವಿಶ್ವಸಂಸ್ಥೆ ಡಾ/ಎ ಪಿ ಜೆ ಅಬ್ದುಲ್ ಕಲಾಮ್ ರವರ ಜಯಂತಿ ಪ್ರಯುಕ್ತ ಘೋಷಿಸಿದೆ ಅದರಂಗವಾಗ ಶ್ರೇಷ್ಠ ವ್ಯಕ್ತಿ ತ್ವಕ್ಕೆ ನನ್ನದೊಂದು ನಮನ
ನಾ ಕಂಡ ವಿರಳ ಶ್ರೇಷ್ಠರಲ್ಲಿ
ನಾ ತಲೆ ಬಾಗುವೆ ಇಂದು
ನಮ್ಮವರೆ ಆದ ನಮ್ಮನ್ನು
ಅರಿವಿನ ದಾರಿಗೆ ತಳ್ಳಿದ ಶಿಕ್ಷಕ
ರಸ ಋಷಿ ಕಲಾಮರಿಗೆ
ವಿಧೇಯ ವಿದ್ಯಾರ್ಥಿಯಾಗಿ
ನಾ ತಲೆಬಾಗುವೆನಿಂದು//
ವಿಶ್ವ ವಿದ್ಯಾರ್ಥಿ ದಿನದಂದು
ವಿಶ್ವವೆ ತಲೆಬಾಗಿತು ಇಂದು
ವಿಜ್ಞಾನಿಯಾಗಿ ವಿಜಯಿಯಾದರೂ
ವಿಧೇಯ ವಿದ್ಯಾರ್ಥಿಯಾಗಿ
ವಿವರಿಸುವ ಶಿಕ್ಷಕನಾಗಿ
ವಿನಯಶಾಲಿ ರಾಷ್ಟ್ರಪತಿಯಾಗಿ
ನಮಗೆಲ್ಲ ಸಂಸ್ಕಾರ ನೀಡಿದ ಸಂತನಿಗೆ
ನಾ ತಲೆಬಾಗುವೆನಿಂದು//
ಕನಸುಗಳ ಸರದಾರ
ಮಲಗಿಸದೆ ಕಾಡಿದರೆ
ಮುತ್ತಿಕ್ಕಿಎತ್ತರಕ್ಕೇರಿದ
ಭಾರತದ ಜೊತೆಗಾರ
ಏರಿದ ಏಣಿಯಲಿ ಗುರತನವ
ಬಿಡದ ಸರ್ವಕಾಲಿಕ ಶಿಕ್ಷಕನಿಗೆ
ನಾ ತಲೆಬಾಗುವೆನಿಂದು//
ತನ್ನವರಿಗಾಗಿ ಹೊನ್ನು
ಹೊಂದಿಸಿದವರ ಕಂಡೆ
ತನ್ನೇಳಿಗೆಗೆ ಬೆನ್ನಿಗೆ ಚೂರಿ
ಇರಿದವರ ಕಂಡೆ
ತನಗಾಗಿ ಏನು ಬಯಸದ
ತನುವಿಗಾಗಿ ಜಗದಳುವಿಗಾಗಿ
ಮಿಡಿದ ಮಿಸೈಲ್ ಮನುಜಗೆ
ನಾ ತಲೆಬಾಗುವೆನಿಂದು//
No comments:
Post a Comment