Wednesday, October 20, 2021

ವಾಲ್ಮೀಕಿ ಮಹರ್ಷಿ

* ಪೂರ್ಣಿಮೆಯ ಮಹರ್ಷಿ *

ಶೀಗಿಯ ಹುಣ್ಣಿಮೆ  
ಯೋಗವ ನೋಡೊಮ್ಮೆ /
ಯೋಗಿಯ ಜನ್ಮವು 
ಭಾರತ ಪಡೆದುದೆ ಹೆಮ್ಮ/
ಆದಿ ಕವಿಯು ಮೊದಲು/
ಉದರಕಾದ ವ್ಯಾಧ/ 
ಮಡದಿಯ ಪುಣ್ಯಫಲ 
ಉತ್ತರಕ್ಕೆ ಬದಲಾದ  //
ನಾರದರ ಪ್ರಶ್ನೆಗೆ 
ರತ್ನಾಕರ ಮಹಾಕವಿಯಾದ/
ವಲ್ಮದಲ್ಲರಳಿತು ನಲ್ಮೆಯ 
ಮಹಾಕಾವ್ಯ ರಾಮಾಯಣ// 
ಅಯೋಧ್ಯೆಯ ರಾಮ ಸಹೋದರ ಲಕ್ಷ್ಮಣ
ಸೀತಾಮಾತೆಯ ಆದರ್ಶ ಗುಣ/ 
ಕಲಿಯದಿದ್ದರೆ ಅದೆ ಮರಣ/ 
ಕಲಿತು ನೀನಾಗು ಶರಣ//
ದಶರಥನ ಕಂದ ಶ್ರೀರಾಮ ಚಂದ್ರ 
ಕೈಕೆಯ ಆಸೆಗೆ ಬಲಿಯಾದ/
ರಾಮನ ನಡಿಗೆ ಕಾಡಿನ ಕಡೆಗೆ 
ಸೀತೆ ಧರಿಸಿದಳು ನಾರು ಉಡುಗೆ/
ಸರ್ವವು ತ್ಯಾಗ ಕಾಡಿಗೆ ನಡೆದ
ಸಹೋದರ ಲಕ್ಷ್ಮಣನೊಂದಿಗೆ//
ಭರತ ಬಳಲಿ ರಾಜ್ಯ ಆಳಿದ 
ಶ್ರೀರಾಮನ ಪಾದರಾಕ್ಷಿಯೊಳಗೆ/
ಕಾಡಿಗೂ ಓಡಿತು ಕರ್ಮದ ಕಷ್ಟ 
ರಾಕ್ಷಸ ರಾವಣನ ಹೆಸರಲ್ಲಿ /
ಮಾಯದ ಜಿಂಕೆಗೆ ಮರುಳಾದ ಸೀತೆ
ಮರೆತು ರಾವಣ ಜಾಲದ ಬಲೆಗೆ/
ಲಂಕೆಯ ಅಂಕೆಯಲಿ ಮಂಕಾದಳು
ಸೀತೆ ಶ್ರೀ ರಾಮನ ನಾಮದಲ್ಲಿ/
ಹನುಮನ ಜನುಮದ ಒಲುಮೆಯ
ಗಮನ ರಾವಣ ನಿರ್ಣಾಮ// 
ದುಷ್ಟ ಸಂಹಾರ ಶಿಷ್ಟ ರಕ್ಷಣೆ 
ರಾಮರಾಜ್ಯದ ಕಥೆ ವಾಲ್ಮೀಕಿ 
ಬರೆದ ಇತಿಹಾಸ ಪುರಾಣ//

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...