Sunday, October 10, 2021

ಬಾಗಿದ ಸ್ವಾಗತ

ಬಾಗಿದ ಸ್ವಾಗತ

ತೊಗರಿಯ ಹೊಲದಾಗ 
ಹಗುರಾಯಿತು ಭಾವ ಹಗೆತನವಿಲ್ಲ 
ಹರಿಪ್ರೇಮದ ಭೋಗವೆಲ್ಲ//

ನಗರದ ಬಿಗುಮಾನ 
ನಾನು ಎಂಬುದು ಕಳೆದು 
ನಮ್ಮದೆ ರಾಜ್ಯ ಇಲ್ಲೆಲ್ಲ //

ದುಂಬಿಗಳ ಕಾರುಬಾರು 
ನಂಬಿದವರಿಗೆ ನವರಾತ್ರಿ 
ಸೊಂಬೇರಿಗಳಿಗಲ್ಲ ಸೋಬಾನ// 

ತುಂಬಿ ಬರತಾವು ತಮ್ಮ 
ಹರುಷದ ದಿನಮಾನ 
ನಂಬಿ ದುಡಿದರೆ ನಾಕವು ಜಗವೆಲ್ಲ //

ಬಾರವಾದ ಮನಕೆ 
ಬೋರಾದ ದೇಹಕ್ಕೆ 
ಬಾಗಿದ ಸ್ವಾಗತವಿಲ್ಲಿ //

ಬಂಗಾರ ಬನದ ತೊಗರಿ 
ಗಂಗಾಳ ತೂರಿದರಾಚೆ ಪಾರು
ಅಂಗಕ್ಕೆ ಸಿಂಗಾರದ ಹೂವು ಮಾಲೆ//  

ಚಟ್ಟೆಯ ಕಾಯಿಗೆ ಪುಟ್ಟ ಪಾತರಗಿತ್ತಿ 
ಕಾವಲು ಇಟ್ಟವರು ಯಾರಿಲ್ಲಿ 
ನಾ ಬಿಟ್ಟ ಉಸಿರು ಹಸಿರಾಗಿ 
ನಂದಗೋಕುಲವಿಲ್ಲಿ  //

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...