ನಾವು ತಲೆಯತ್ತಿ ನಡೆಯಲು
ತಲೆಯನ್ನೆ ನೀಡಿದ
ಓ ವೀರ ಪುತ್ರರೆ !
ನೀವು ನಡೆದ ಪುಣ್ಯ ಭೂಮಿ
ತಂದಿದೆ ನಮಗಿಂದು
ಸ್ವರ್ಗದ ದಾರಿ ಹತ್ತಿರ. //
ಸಮಾನತೆ, ಸ್ವಾತಂತ್ರ್ಯ
ಬಂಧುತ್ವ, ಸಾಮಾಜಿಕ ನ್ಯಾಯ
ಹಾಗೆ ಬಂದುವಲ್ಲ ಹೇ ಪುತ್ರ
ನೆನಪುಗಳು ನೆನೆಯದ ಉತ್ತರ
ಬರಿ ತಿಂದು ತೇಗಲು ಬಂದ
ಹರಾಮಿ ಧರ್ಮ ಛತ್ರ .//
ಕ್ಷಣ ಗಡಿಯ ಕಡೆ ನೋಡು
ಇಂದೂ ಒಣಗಿವೆ ಜೀವ kkm
ಉರುಳುತಿವೆ ಹಿಮ ರಕ್ಕಸ/
ದಿನವೆಲ್ಲ ಕಾಡುತಿವೆ ಒಳಗೂ
ಹೊರಗೂ ಉಳಿಯದ
ಕುದಿಯುವ ಬಿಸಿ ನೆತ್ತರ//
ನಿಂತ ನೆಲ ಅಲುಗಾಡಿದೆ
ಅನಂತ ಸ್ವಾರ್ಥದ ಬಾರ
ಅರಿಯದೆ ವಿರಮಿಸಿದರೆ
ಹೊರೆ ಭಾರತ/
ತರು ಲತೆ ಬೆಳೆಗಲಾದರೂ
ಹರಡಲಿ ನಿನ್ನೊಲಮೆಯ
ಚುರುಕಿನ ಹೊಸ ಚಿತ್ರ//
ಭಾವಗಳ ಹೊಸೆದು ಜೀವಗಳ ಸೇರಿಸಿ
ಹೊಸ ಧ್ವಜವ ಹೆಣೆಯೋಣ
ಮನಸುಗಳ ಮನೆ ಮನಗಳಲಿ
ಮೌನ ಮಹಡಿಯ ಕಟ್ಟೋಣ /
ಸ್ವಾಭಿಮಾನದ ಬಣ್ಣ ಹಚ್ಚಿ
ತ್ಯಾಗದ ಬಾವುಟ ತಲೆ ಎತ್ತಿ
ಧರ್ಮದ ದಾರ ಎಳೆಯೋಣ ಒತ್ತಿ ಒತ್ತಿ//
No comments:
Post a Comment