Friday, February 25, 2022

* ವರ್ತಮಾನದ ಗಾಡಿ *

* ವರ್ತಮಾನದ ಗಾಡಿ *

ಇದು ಕರ್ತಾರನ ವರ್ತಮಾನದ
ಗಾಡಿ,ಇದಕ್ಕೆ ಜೋಡಿಸಿದರು
ಸಿಲಿಕಾನ್ ಚಕ್ರದ ಗಾಲಿ
ನಡೆಸಿವರು ಸುಡುಗಾಡ ದಾರಿ !  
ಕಡಿವಾಣ ವಿಲ್ಲದ ಕುದುರೆ
ಓಡುತಿದೆ ಕಣ್ಣಿಗೆ ಪಟ್ಟಿಯ ಕಟ್ಟಿ 
ಕಾಲನ ಕತ್ತಿ, ಮೇಲೆ ಭಿತ್ತಿ  /
ಯಾರ ಕುತ್ತಿಗೆಗೆ ಸುತ್ತುವುದು
ಯಾರು ಬಲ್ಲ ,ಅರಿಯದೆ ತಿರುಗಿದೆ
ಗಿರಗಿರನೆ ಮೇಲೆ ಕೆಳಗೆ,
ಕ್ರಮಿಸುವುದು ದೂರ....
ಮೇಲೆ ಹೋದರೆ ಕೆಳಗೆ ಇಳಿಯುವಾಶೆ
ಕೆಳಗಿಳಿದರೆ ಮೇಲೇರುವಾಶೆ //
ಬಯಕೆಗಳು ಹೊದ್ದು ಮಲಗಿವೆ
ನಿದ್ದೆ ಮಾಡಲು ಇಲ್ಲಿ ಇಲ್ಲ ಪುರಸೊತ್ತು 
ಮುಂದೆ ಹೋಗುವುದೇ ಎಲ್ಲರ ಚಿತ್ತ /
ಅರೆಗುಂಜಿ ಹೀರುವ ಇರುವೆಗೂ
ಹಿರಿಯಾಶೆ ಆರು ತಿಂಗಳ ಅನ್ನ
ತನ್ನದಾಗಿಸುವಾಸೆ, ಮೂರೆ  ತಿಂಗಳಿಗೆ
ಮುಗಿಯುವುದು ಅದರ ಸಂತೆ //
ಹೆಕ್ಕಿ ಕಟ್ಟುವ ಹುತ್ತ ಹೆರವರದು.
ಹತ್ತಿ ಹತ್ತಿ ನೋಡುವುದೆ
ಅದರ ಭ್ರಮಣದ ಸಂಭ್ರಮ/
ಹಾವುಗಳು ವಾಸಮಾಡುವವು
ಎನ್ನುವುದು ಅದಕೇನು ಗೊತ್ತು  //
ಹಾರುವ ಹಕ್ಕಿಗಳ ಮೇಲೆ
ಉರಿಯುವ ಅಸ್ತ್ರಗಳು,
ಯಾರ ದೀಪ ಆರಿದರೇನು ?
ದಾರಿ ನನ್ನದೆ ಆಗಬೇಕು !
ನಿನ್ನ ದಾರಿ ಕತ್ತಲಾದ ಮೇಲೆಯೇ
ಗೊತ್ತಾಗುವುದು ಕರ್ತಾರನ
ವರ್ತಮಾನದ ಗಾಡಿ  // 

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...