ಹೊಸ ಗೂಡಲ್ಲರಳಿದ
ಹಳೆಯ ಗೆಳೆಯರ ಬಳಗ.
ಪ್ರೀತಿಯ ಆಹ್ವಾನಕೆ ಸೋತು
ಹಾರಿ ಬಂದಿತ್ತು, ಹತ್ತಿರ ಹತ್ತಿರ.
ಬೋಜನದ ಸವಿಗೂ ಮೀರಿದ
ಭಾವಗಳ ಸಂಗಮ..
ಭಾಷೆಗೂ ನಿಲುಕದ ಪ್ರೀತಿಯ
ನಿಶೆಯಲ್ಲಿ ತೇಲಾಡಿ ಓಲಾಡಿ
ಹರಟಿದೆವು ನಾವೆಲ್ಲಾ....
ಅದೂ ಹುಡುಗರ ಭಾಷೆಯಲ್ಲಿ.........
ದಾಟಿದ್ದು ಐವತ್ತರ ಗಡಿ
ದಾಟಿಲ್ಲ ವಿನ್ನೂ ಚೇಷ್ಠೆ
ಹತ್ತು ಹನ್ನೊಂದರ ಗಡಿ.
ಅದರಲ್ಲೂ ಖುಷಿಯಿತ್ತು
ಗೆಳೆತನ ಗಟ್ಟಿ ಗೂಳಿಸಬೇಕಿತ್ತು
ನಾಯ್ಕರನ ಬಳಗಕ್ಕೆ ನಲಿಯಲು
ನೆವವೊಂದೆ ಸಾಕಾಗಿತ್ತು
ಭಾವಗಳ ಬೆಸೆದು ಬಂಗಾರದ
ಹೊಳಪು ಕಾಣಬೇಕಿತ್ತು.
ನೂರ್ಕಾಲ ಬಾಳುವ ಚೈತನ್ಯ
ಸ್ನೇಹಿತರ ಬಳಗದಲ್ಲಿ ಪುಟಿದೆದ್ದಿತ್ತು
ಗೃಹಪ್ರವೇಶಕ್ಕೆ ಆಹ್ವಾನಿಸಿ
ಸಂತೋಷ ಪಡಿಸಿದ ನಾಯ್ಕರ ಬಂಧುಗಳಿಗೆ
ಸ್ನೇಹಿತರ ಬಳಗದಿಂದ ಹಾರ್ದಿಕ ಶುಭಾಶಯಗಳು
🌹🌹🌹🌹🌹🙏🙏🙏🙏🙏
No comments:
Post a Comment