Sunday, August 7, 2022

ನಾನು ನಾನಾಗಿರಲು ಬಿಡಿ

ನಾನು ನಾನಾಗಿರಲು ಬಿಡಿ 
ನನ್ನವರೆ ನಾನು ನಾನಾಗಿರಲು ಬಿಡಿ !
ನನ್ನತನವಿದೆ ಹಾಕಬೇಡಿ 
ಮನಸ್ಸಿನಂಗಳಕೆ ಬೇಡಿ. 
ಹಿಡಿದಿಡುವ ಅಧಿಕಾರಿ 
ನೀಡಿದವರಾರೊ ಕೋಡಿ ?.
ಹತ್ತಿರಕೆ ತರಬೇಡ 
ಹೀನ ಜನರ ಗಾಡಿ 
ಸುತ್ತಲೂ ತುಂಬಿಕೊಂಡಿದೆ ರಾಡಿ 
ಹೊತ್ತು ತರಬೇಡ ನೀ ಓಡಿ .
ನಾನಾವ ಜಾತಿ,ಧರ್ಮ,
ಸಂಪ್ರದಾಯದವನಿರಲಿ 
ನನ್ನಂತೆ ನಾನಿರಲು ಬಿಡಿ .
ಅನ್ನವನೆ ಉನ್ನಲಿ 
ಅಂಬಲಿಯೇ ತಿನ್ನಲಿ
ಮಿಕ್ಕಿ ಮೀನನ್ನೆ ನುಂಗಲಿ !
ನನ್ನ ನಾನಾಗಿರಲು ಬಿಡಿ
ನಾನಾಡುವ ಮಾತು ಭಾವನೆಗಳ
ಹಂಚಿಕೊಳ್ಳುವ ಧ್ವನಿಗಳು ಮಾತ್ರ
ಕನ್ನಡವೇ ಇರಲಿ 
ತೆಲುಗಾದರೂ ಇರಲಿ 
ತಗಲು ಹಾಕಿಕೊಳ್ಳದೆ 
ನಾನು ನಾನಾಗಿರಲು ಬಿಡಿ !
ಅನ್ಯರ ಬದುಕನ್ನು ನಿನ್ನದಕೆ 
ಹೋಲಿಸಿ ಭಿನ್ನ ಮಾಡಲು 
ಅಧಿಕಾರ ನೀಡಿದವರಾರೋ ಕೋಡಿ.
ನಿನ್ನದು ನಿನಗಿರಲಿ ಶ್ರೇಷ್ಠ .
ನನ್ನದು ನನಗದು ಉತ್ಕೃಷ್ಟ 
ಮಾಡಬೇಡ ಅನ್ಯರದು ಕನಿಷ್ಠ 
ನಾನು ನಾನಾಗಿಯೇ ಇರಲು ಬಿಡಿ
ನನ್ನ ತನಕೆ ಹಾಕಬೇಡ ನೀ ತಡಿ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...