Monday, September 19, 2022

ಜೀವನವೆಂದರೆ ಇಷ್ಟೆ!

ಅದೆಷ್ಟು ದೇಹಗಳು ಮುದುಡಿ 
ಮಣ್ಣೊಳಗೆ ಮೃತ್ಯುವಿಗೆ ಶರಣಾದಾಗ 
ಮೂರು ಹಿಡಿ ಮಣ್ಣಿಟ್ಟು 
ಕೈ ಮುಗಿದಿಲ್ಲ  ನಾನು !
ಅದೆಷ್ಟು ದೇಹಗಳು ಬೇಸರದಿ ಬೆಂದು 
ಬೆಂಕಿಗೆ ಬಾಡುವಾಗ 
ಪತ್ರಿ ಎಸೆದಿಲ್ಲ ನಾನು ! 
ಸಾಲು ಸಾಲು ಆಕ್ರಂದನಗಳು ...
ಬಂಧುಗಳೆ ಇವರೆಲ್ಲ  .
ಬಂಧನದಿ ಬಿಡಿಸಿಕೊಂಡವನಿಗೊಂದು 
ಭಾವಪೂರ್ಣ ರೋಧನ  
ಅವನಿಗಾಗಿ ಅಲ್ಲ .
ಅವರಿಗಾಗಿ ಅವರ ಮಕ್ಕಳಿಗಾಗಿ  
ಅವರ ಭವಿಷ್ಯದ ಬೇತಾಳಕೆ 
ಹೆದರಿ ಚೀರುವರು ಇವರೆಲ್ಲ.
ಮಗಳ ಬಡಿವಾರಕ್ಕೆ ಬೇಕಿತ್ತು 
ಮಣ ಬಂಗಾರ .
ಮಗನೂ ಮಡದಿಯೊಂದಗೆ 
ಮಲಗಲು ಬೇಕಿತ್ತು
ಮಹಲು.. ಮಂದಿರ !
ಮಡದಿಯು ಬಿಡದೆ ರುಬ್ಬಿದಳು 
ಕೈಕಾಲುಗಳಲ್ಲಿ ಶಕ್ತಿ ಇದ್ದಾಗ
ಪಡೆದ ಅವಕಾಶಗಳಿಗೆ ಲೆಕ್ಕವಿಲ್ಲ
ಹಿಡಿ ಶಾಪ ಹಾಕುತಿಹಳು 
ಶಿವನಿಗೆ !
ಇನ್ನಷ್ಟು ಬೇಕಿತ್ತು ಅವಳಿಗೆ, 
ಅವನಿಗಾಗಿ ಅಲ್ಲ 
ತನಗಾಗಿ ದುಡಿಯಬೇಕಿತ್ತಿವನು.
ತಿಳಿಯಲಿಲ್ಲ ಇವನಿಗೆ
ನನ್ನದೆನ್ನವುದು ಬರಿ ಭ್ರಾಂತಿ 
ತಿಳಿಯಲು ಸಾಕಾಗಲಿಲ್ಲ ಕಾಲ
ಈಗ ನಿಶ್ಚಿಂತೆ ...ಶಾಂತಿ
ಜೀವನವೆಂದರೆ ಇಷ್ಟೇನಾ ?

    🖋 ಅಂತರ್ಮುಖಿ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...