Tuesday, September 20, 2022

*ಮಹಾತ್ಮನಾದ ಗಾಂಧಿ*

ಸತ್ಯ ,ಅಹಿಂಸೆ,ಸತ್ಯಾಗ್ರಹ. 
ಸಪ್ತಖಂಡಕೆ ಆತ್ಮೀಯ ಗಾಂಧಿ,
ಹುತಾತ್ಮನಾದ ಗಾಂಧಿ 
ಮಹಾತ್ಮಾನಾದ ಗಾಂಧಿ॥

ಸಪ್ತ ಪಾತಕ ಸಂಹಾರ ಮಾಡಲು 
ಸನ್ಮಾರ್ಗ ತೋರಿದಾ ಗಾಂಧಿ, 
ಸಂತನಾದ ಗಾಂಧಿ 
ಮಹಾತ್ಮಾನಾದ ಗಾಂಧಿ॥

ಮೂಲ ಶಿಕ್ಷಣಕೆ ನೂಲು ತಗೆದ 
ಕರ, ಶಿರ ಹೃದಯ ತರಬೇತಿಯ
ಶೀಲವೇ ಶಿಕ್ಷಣವೆಂದ ಗಾಂಧಿ
ಮಹಾತ್ಮಾನಾದ ಗಾಂಧಿ ॥

ಶೋಷಣೆಗೆ ಸತ್ಯದ ಸವಾಲು
ಅಹವಾಲುಗಳಿಂದಲೆ ಅರುಹಿ 
ತಾಳ್ಮೆಯಿಂದಲೆ ಬಾಳಿದ ಗಾಂಧಿ
ಮಹಾತ್ಮಾನಾದ ಗಾಂಧಿ ||

ಗುರು ಗೋಖಲೆಯ ದಾರಿ
ಆಹಿಂಸೆಯ ಮಾಲೆ ಆಂಗ್ಲರ   
ಅಧಿಕಾರ ಪ್ರಶ್ನಿಸಿದ ಗಾಂಧಿ
ಮಹಾತ್ಮಾನಾದ ಗಾಂಧಿ ||

ಅರೆಬೆತ್ತಲೆಯ ಪಕೀರ 
ಕತ್ತಲೆ ಕಳೆದ, ಸತ್ಯ ದಾರಿ ತುಳಿದ
ಮಿತ್ಯ ಜನರ ಹತ್ಯೆಗೆ ಬಲಿಯಾದ
ಹುತಾತ್ಮನಾದ ಗಾಂಧಿ॥

🖋 .ಬಸನಗೌಡ ಗೌಡರ 
ಉಪನ್ಯಾಸಕರು ಗುಳೇದಗುಡ್ಡ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...