Tuesday, October 25, 2022

* ಹಿಂಗ್ಯಾಕ ಕುಳತಿ *

* ಹಿಂಗ್ಯಾಕ ಕುಳತಿ *

ತಡಯಾಕ ನೀ ಮಾಡತಿ 
ಹಿಡದೈತಿ ನಿನಗ ಸಾಡೆಸಾತಿ.|
ತಡ ಮಾಡಿ ವಯಸ್ಸು ಕಳಕೋತಿ
ಹಿಡಿ ಶಿವನ ಪಾದ ಉಳಕೋತಿ॥

ಮುಗಜೋಳ ಬರಿ ಬೀಸತಿ
ಹಗೆದಾಗ ನಿನ್ನ ಕಾಳ ಕೊಳಸತಿ|
ನಗುವಾಗ ಮೂಗ ತೂರಸತಿ
ಸಿಗುವಾಗ ಪಡೆಯದೆ ಆಳತಿ॥

ಶಿಸ್ತಿನಲ್ಲೆ ಸದಾ ಇರಬೇಕಂತಿ 
ಸುಸ್ತಾಗಿ ನಿಯಮ ಸಡಿಲಿಸುತ್ತಿ|
ಕುಸ್ತಿ ಬಿದ್ದಾಂಗ ನೀ ನಟಿಸುತಿ
ಕುಸಿದು ಬಿದ್ದಾಗ ಎಚ್ಚರಾಗುತಿ॥

ಬಿಳಿ ಕೂದಲಿಗೆ ಕರಿ ಬಣ್ಣಹಚ್ಚತಿ
ಕರಿ ಚರ್ಮಕ ಬಿಳಿ ಬಣ್ಣ ಬಳೀತಿ|
ತಿರಗಮುರಗಾ ಮಾಡುದರಾಗೇನೈತಿ
ಹರೆಯ ಏನ ನಿನಗ ಚಿಗತ ಬರತೈತಿ॥

ಅರಳ ಹುರದಂಗ ಮಾತಾಡತಿ
ಹೊರಳಿ ನೊಡಿದರ ಕಾಲಿ ಮಾಡತಿ|
ಇರುಳಿನ ದೀಪ ಕುಂದಿಸಿ ಗುಟಗರಸತಿ
ಮಳ್ಳ ಹಿಡದ ಬೀದ್ಯಾಗ ಓಲಾಡತಿ॥





No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...