Saturday, October 29, 2022

* ಕನ್ನಡದ ಮಾಣಿಕ್ಯ*

ಕನ್ನಡಿಗರಪ್ಪಿದ ಕಣ್ಮಣಿ ದೊಡ್ಮನೆಯ ಪೋರ 
ತನ್ನೊಲವ ತೋರಿ ತಾನಿರುವ 
ನೆಲಮೀರಿ ತೆರಳಿದನು ಅಂದು.  
ತ್ವರೆ ಮಾಡುವದೇನಿತ್ತು ದೊರೆಯೆ ?
ಉರಿ ತುಂಬಿದೆ ನಿನ್ನವರ ಎದೆಯಲ್ಲಿ... 
ತರವಲ್ಲವಿದು ಮರೆಯಾಗಿ ಮಣ
ಬಾರದ ಕಣ್ಮೀರು ಹೇರಿ ಸರಿದಿದ್ದು ಸರಿಯೇ ? .
ನೀ ನೀಡಿದ ಚಿತ್ರಗಳು ಅವು ಸಂಸ್ಕಾರದ ಪತ್ರಗಳು 
ಓದುತ್ತಾ ಮರೆಯಲೆ ?ಪುಟ ತೆರೆಯುತ್ತಾ ಇರಲೆ..
ಅಪ್ಪ ರಾಜನ.... ಮುತ್ತಿನ ವದನ 
ಅಪ್ಪುವಿನಲ್ಲಿ ಕಂಡು ಪುಣಿತನಾಗುವ ಮುನ್ನ 
ತಪ್ಪಿ ಹೋಯ್ತು ತಬರರ ಪುಣ್ಯ,
ಕನ್ನಡದ ಮಾಸ ಅರಳುವ ಮುನ್ನ
ನಿನ್ನಯ ಅಗಲಿಕೆ ತಂದಿತ್ತು ಗುನ್ನ
ಎನ್ನಯ ಹರಕೆಯು ನಿನ್ನ ಆತ್ಮಕ್ಕೆ ತಲುಪೀತೆ ಚಿನ್ನ!
ಸಣ್ಣವನು ನಾನು ಇನ್ನೇನು ಹೇಳಲಿ,
ಕನ್ನಡದ ಕರೋಡಪತಿ .ಅಲ್ಲಲ್ಲ..
ಕನ್ನಡಿಗರ ಪ್ರೀತಿಯ ಅಧಿಪತಿ.
ಬನ್ನಿ ಬಾಂದವರೆ ಕನ್ನಡದ 
ಅಪ್ಪುವಿನ ಸಿರಿಗನ್ನಡದ ಸಂಸ್ಕಾರವಪ್ಪಿ 
ಉಪ್ಪರಿಗೆಗೇರಿಸೋಣ ಪ್ರೀತಿ.

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...