ಬೆಳಗುವ ಆಗಸದ ಮಿನಗುವ
ತಾರೆಗಳು ಇವು ಸ್ವರ್ಗದ ಬಾಗಿಲುಗಳು
ನಮ್ಮ ಮನೆ ಸೇರಿದ ಚಿಲಿಪಿಲಿ ಹಕ್ಕಿಗಳು
ಮಿರಿ ಮಿರಿ ಮಿನುಗುವ ನಕ್ಷತ್ರಗಳು॥
ಹಳಬರ ಹಣೆಬರಹ ಬರೆಯುವ
ಮನಬಾರ ಕಳೆವ ಅಶ್ವಿನಿದೇವತೆಗಳು
ಓಡಿದರೆ ನಿಲ್ಲಿಸುವ ನಿಂತರೆ ಓಡಿಸುವ
ಕುಡಿನೋಟದ ಕಿಂದರ ಜೋಗಿಗಳು॥
ಚಿಂತೆಯಿಂದುರುವ ಸಂತೆಯಲ್ಲಿ
ಸಂತೈಯಿಸುವ ನಿಜ ಸಂತರುಗಳು
ಹೊಗಳಿದರೆ ಅರಳುವ ತೆಗಳಿದರೆ ಮುದುಡುವ
ತುಂಬಿದ ತೋಟದ ಸುಂದರ ಹೊವುಗಳು ॥
ಧನಿದು ಮುನಿದರೆ ಮನದಲಿ ಮಿನುಗುವ
ನಗೆ ಹೊನಲುಕ್ಕಿಸುವ ಕಿರು ಬುಗ್ಗೆಗಳು
ಹಗಲಿರುಳು ದುಡಿವ ಜಗವೆಲ್ಲ ತೊಳೆವ
ಜಂಜಡದ ಬದುಕಿಗೆ ಜಪಮಾಲೆಗಳು ॥
ಮಾಲಿಗಳ ನೆರಳಲ್ಲಿ ಹದವಾಗಿ ಬೆಳೆವ
ಸಾಲಿನಲ್ಲಿ ಸೇರದೆ ಸೋಗಿನ ಸೋಕಿಗಳು
ಕಣ್ಣುಗಳ ಮಿಟುಕಿಸಿ ಸನ್ನೆಯ ಮಾಡುವ
ತಿನ್ನದೇ ಚಪ್ಪರಿಸುವ ರಸಗುಲ್ಲಗಳು॥
ಬಸನಗೌಡ ಗೌಡರ
ಉಪನ್ಯಾಸಕರು ಗುಳೇದಗುಡ್ಡ
No comments:
Post a Comment