Saturday, December 3, 2022

ತನಗ

ಹಿರಿಯ ಕವಿ ಸಿದ್ಧಲಿಂಗಪ್ಪ ಬೀಳಗಿಯವರ ತನಗದ ವಿವರಣೆಯಿಂದ ಪ್ರೇರೇಣೆ ಪಡೆದು ನಾಲ್ಕು  ತನಗ ಬರೆದೆ ಸರಿ ಇದ್ದರೆ ಸರಿ ಅನ್ನಿ ಇಲ್ಲದಿದ್ದರೆ ಇಲ್ಲ ಅನ್ನಿ ಏನೂ ಅನ್ನದಿದ್ದರೆ ಶನಿವಿವಾರದ ಅರ್ಧ ಬಿಡುವಿನ ತಲೆನೋವು ಅನ್ನಿ ಅಂತೂ ಅನಿಸಿಕೆಗಳನ್ನು ಹೊರಹಾಕಿದೆ.

ಬಣ್ಣದ ಬೆನ್ನು ಹತ್ತಿ 
ತನ್ನವರೆನ್ನುವುದು 
ಮರೆತು ಓಡುತಿವೆ
ಸ್ವಾರ್ಥ  ಕುದುರೆಗಳು
 
ಎದುರು ಮನೆಯಲ್ಲಿ 
ಬೆದರಿಸವ ಬೊಂಬೆ
ಬಣ್ಣ ಮಾತ್ರ ಕರಿದು
ಗೆರೆ ಬಿಳಿದೇ ಬೇಕು

ಕಣ್ಣಿಗೆ ಪಟ್ಟಿ ಕಟ್ಟಿ
ಹುಡುಕುವರು ಬಿಟ್ಟಿ 
ಸಿಗುವುದೇನು ರೊಟ್ಟಿ
ಉಪವಾಸವೆ ಗಟ್ಟಿ

ಬೀಗಬೇಕೆಂದಿಹರು 
ಸಾಲವ ಮಾಡಿ ತಂದು 
ಸಾಗಹಾಕಲಾದೀತೆ
ಸಾಲಗಾರರ ಶೂಲ

ಬಸನಗೌಡ ಗೌಡರ 
ಉಪನ್ಯಾಸಕರ ಗುಳೇದಗುಡ್ಡ

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...