Tuesday, December 13, 2022

* ಗತವೈಭವದ ಸುತ್ತ *

ಮನದ ದುಗುಡ ಮರೆಯಲು
ಬರೆದಾ ಭಾವನೆಗಳ ಸುತ್ತ 
ದೊರೆಯಾಗಲಿದು ಬೇಕಿತ್ತಾ
ಹರಿ ನಾಮ ಪಠಿಸದೆ ಸತ್ತಾ।

ಇರಿದು ಹುರಿದು ಮುಕ್ಕಿ ನೆಕ್ಕಿದವು
ಸಾಕಿ ಸಲುಹಿದ ಶುನಕಗಳು 
ಇವನ ಸತ್ತ ಶವದ ಸುತ್ತ 
ಅವುಗಳಿಗೊಂದೆ ಚಿತ್ತ, ಹಸಿವಿನತ್ತ.।

ಏನು ಮಾಡುವದು ಕಾಣದಂತೆ 
ಒಳಗೊಳಗೆ ಹೊತ್ತಿ ಉರಿದು 
ಬೆಂಕಿ ಹೊರ ಚಿಮ್ಮುತಿದೆ 
ಬೂದಿ ಮುಚ್ಚಿದ ಕೆಂಡ   ।

ಬೇಸಿಗೆಯಿಂದ ಹಸಿದ ಭುವಿಗೆ
ಬೀಸಿ ಬಂತು ಸುಂಟರ ಗಾಳಿ
ತಂತು ಮಳೆ ಗುಡುಗು ಮಿಶ್ರಿತ 
ನಿಂತ ಮೇಲೆ ಆಗುವದೆ ಶಾಂತ ।

ಬುಗ್ಗೆಯಲ್ಲರಳಿದ ಗಾಜು ಮನೆ 
ಸುಗ್ಗಿಯಂತೆ ತರಬಹುದೇ ರಸದೌತನ 
ಹೊಸತೇನಿದೆ ಬರಿ ಪ್ರವಾಹ 
ಬಂದು ಹರಿದ ಮೇಲೆ ರೋಧನ ।

ಅವಡುಗಚ್ಚಿ ಕಿವುಡರಂತೆ 
ತಡೆಹಿಡಿದಾ ನೂರು ಬಾಣ 
ಬಾರ ಬೆಟ್ಟ, ತಾಳ್ಮೆ ಅಲುಗಾಡಲಿಲ್ಲ 
ಹೊರ ಬಂತು ಸ್ವಯಂವರ।

ಯೋಧನಂತೆ ಮೆರೆದಾ ಕಲಿ 
ಜಾದೂ ಮಾಡಿ ಆಗಲಿಲ್ಲ ಹುಲಿ 
ಬಡಿದು ಮಾಡಿದಾ ಹತಾರ 
ಉರಳಿಸಿದಾ ಹೆಣ ಆ ಒಂದು ದಿನ ।

ನರಿ ನಾಯಿ ಕೆರೆಯ ಮೇಲೆ 
ಏರಿ ನಿಂತು ಏರು ಧ್ವನಿಯಲಿ 
ಊಳಿಟ್ಟು ದಾರಿ ಕೇಳುತಿವೆ 
ಹಸಿದ  ಹೊಟ್ಟೆಗೆ ಬಾನ ಈ ದಿನ.।
.

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...