Thursday, December 15, 2022

* ತನಗಗಳು *



ಪ್ರೀತಿಯ ಬೆನ್ನು ಹತ್ತಿ
ಬಿತ್ತು ಪಾತರಗಿತ್ತಿ
ತಿಳಿಯಲಿಲ್ಲ ಭಿತ್ತಿ
ಬೆಂಕಿಯೊಳಗ ಸತ್ತ

ತಡಿ ಹಾಕಿ ನೀನಡೆ 
ಸುಡು ಅರಿಷಡ್ವರ್ಗ 
ಹಿಡಿ ತಡಮಾಡದೆ
ಪದಕ ನಿನ್ನ ಕಡೆ .

ಹೂವು ಕಿತ್ತು ಕಟ್ಟಿದ
ಹೆರಳಿಗಾಭರಣ 
ಬೆಳದ ರೈತಗ್ಯಾಕ
ಅಕಾಲದ ಮರಣ.

ಸೂಳಿಯ ಸಂಗ ಕಟ್ಟಿ
ಬಾಳ್ವಂತ ಮಗ ಕೆಟ್ಟ  
ಗಾಳಿಯ ಮಾತು ನಂಬಿ, 
ಸೋಮಾರಿ ಮಗ ದೊಂಬಿ.

🖋.ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...