ತನಗ
ದುಂಡು ಮಲ್ಲಿಗೆಯಂತ
ಮುಖವಿದ್ದರೆ ಏನು?
ಮಂದಹಾಸ ವಿಲ್ಲದ
ಮುಖ ಕೆಂಡದ ಕುಂಡ.
ಪರರ ಇಡಿ ಗಂಟು
ಹೊತ್ತರೆ ಹೆಣಬಾರ
ಬಿತ್ತಿದರೆ ಸತ್ಸಂಗ
ನಿತ್ಯವೂ ಅದು ಸ್ವರ್ಗ.
ನನಗಂಟಿದ ಆಶೆ
ನಾ ನೋಯಿಸಿದ ಭಾಷೆ
ನನ್ನಲ್ಲಿಯ ಹತಾಶೆ
ನನಗಾಗಿದೆ ಪಾಶ.
ಬಂಗಾರ, ಹಣವಿಲ್ಲ
ಹೊಣೆಯರಿತು ಬದ್ರ
ಬಡಿವಾರ ಹೊದ್ದವ
ತಂದುಕೊಂಡ ದರಿದ್ರ.
🖋. ಬಸನಗೌಡ ಗೌಡರ
No comments:
Post a Comment