Thursday, December 22, 2022

* ರೈತ ಭರಮಣ್ಣ *



ಎಳ್ಳು ಹೋಳಿಗೆ ಮಾಡಿ
ಬಳ್ಳ ತುಂಬಾ ಜೋಳ ಬೆಳೆದು 
ಕಳ್ಳು ಬಳ್ಳಿಯ ಕರೆದು 
ಒಳ್ಳೆಯ ಭಾವದಿ  ಅನ್ನ ನೀಡಿ 
ಸಂಸ್ಕಾರದ ಗಣಿಯಾದ  
ಹಳ್ಳಿಯ ಈ ರೈತ ಭರಮಣ್ಣ

ಹಂಡ ಹೋರಿ ಮೇಯಿಸಿ 
ತುಂಡು ಭೂಮಿಯಲ್ಲಿ ಕರ್ಮ.
ಗಂಡು ಹೋರಿಗಳು ರಾಮ ಲಕ್ಷಣ 
ಬಂಡೆಯಂತ ಭೂಮಿ ತುಂಡು 
ತಂಡಾಗಿ ಸೀಳಿ ಮಾಡಿದ ಪುಂಡಿಪಲ್ಲೆ. 
ಪುಂಡನಂತಾದ ಈ ರೈತ ಭರಮಣ್ಣ 

ಕರಿಯ ಹೊಲದಲ್ಲಿ ಬಿಳಿಯ 
ಜೋಳದ ಬೀಜ ಬಿತ್ತಿ 
ಹಸಿರು ಸೀರೆಯುನುಡಿಸಿ 
ಭೂದೇವಿ ಆಗಿಹಳು ಮುತೈದಿ 
ಬೀಗರಾಗಿ ಬಂದಾವು ಕಬ್ಬಕ್ಕಿ 
ಬೆಳಸಿಗೆ ಮುತ್ತಿಕ್ಕಿ ನೆನೆದರು ಭರಮಣ್ಣ.

ದೇಶಕ್ಕೆ ಅನ್ನ ನೀಡಿ ಆದ ದಾಸ
ಕೋಶ ಓದಿದವನಾದ ಈಗ ಈಶ
ಬಾಸೆ ಕೊಡದೆ ಬಾಗಿ ನಡೆದು  
ಸರ್ವರಿಗೆ ಅನ್ನ ನೀಡಿ ಅನ್ನದಾತ
ಬೆನ್ನು ಮುರಿದರು ನನ್ನವರೆಂಬ 
ಭಾವದಿ ಮುನ್ನುಗ್ಗಿದ ಭರಮಣ್ಣ.

ಉಡಿಯ ತುಂಬಿ ಎಡಿ ಹಿಡಿದು 
ಓಡಾಡಿದ ಹೊಲದ ತುಂಬಾ 
ಹುಲ್ಲುಲಿಗೋ ಚಲ್ಲಾಂಬರಿಗೋ
ಜೀವರಾಶಿಯ ಉದರ ತುಂಬಲು
ಚರಗ ನೀಡಿ ಆದ ಅನ್ನದಾತ
ಇವನೆ ನಮ್ಮ ರೈತ ಭರಮಣ್ಣ

ಎಳ್ಳು ಅಮವಾಸ್ಯೆಯ ಹಾರ್ದಿಕ ಶುಭಾಶಯಗಳು🙏🙏🌹🌹

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...