Friday, December 23, 2022

* ಕಲಿಸೋ ಗುರುವೆ ನೀ ಕಲಿಸು *

* ಕಲಿಸೋ ಗುರುವೆ ನೀ ಕಲಿಸು *

ಕಲಿಸೋ ಗುರುವೆ ನೀ ಕಲಿಸೋ   
ನಾ ಜಾಣನೆಂಬ ಅಜ್ಞಾನದ ಚಳಿ ಬಿಡಿಸಿ.
ಹೃದಯ ಶ್ರೀಮಂತಿಕೆ ಕಲಿಸು 
ಸತ್ಪ್ರಜೆಗಳ ಸಮಾಜ ನೀ ಬೆಳೆಸೋ॥

ಶಿರಬಾಗಿ ನಡೆಯುವುದು ಕಲಿಸು
ಅರಿ ಚಿಗುರಿ ಶರ ಬಿಟ್ಟಾಗ 
ಗುರಿಯಿಟ್ಟು ಹೊಡೆಯುವುದು ಕಲಿಸು
ಅರಿವಿನ ದಾರಿಗೆ ಮುನ್ನುಡಿ ಬಾರಿಸೋ।।

ಅಕ್ಷರ ಕಲಿತ ಅತಿ ಬುದ್ಧಿವಂತರಿಗಿಂತ 
ಅನಕ್ಷರನಾದರೂ ಹೃದಯವಂತನು 
ಮೇಲೆಂಬುದು ಕಲಿಸಿ ಮರ್ದಿಸು
ಸಂಸ್ಕಾರದ ಸಮಾಜ ನೀ ಉಳಿಸೋ॥

ದುಡಿದು ತಿನ್ನುವ ಅಂಬಲಿ
ದುಡಿಯದೆ ತಿನ್ನುವ ಪಿಜ್ಜಾ 
ಬರ್ಗರಗಿಂತ ಮೇಲೆಂಬುದು ಕಲಿಸು 
ಊಟದಲ್ಲೆ ಆರೋಗ್ಯವೆಂಬುದು ನೀ ತಿಳಿಸು. ॥

ಕಾಫಿ ಮಾಡಿ ಪಾಸಾಗುವದಕ್ಕಿಂತ 
ಫೇಲಾಗಿ ಅನುಭವ ಪಡೆವ ನೈತಿಕತೆ 
ಮೇಲೆಂಬುದು ಕಲಿಸು ಕಲಿತದ್ದಕ್ಕಿಂತ 
ಪಡೆದ ಅನುಭವ ಮೇಲೆಂಬುದು ನೀ ತಿಳಿಸು॥

ಕಲಿಯುವುದು ಕೆಲಸಕ್ಕಲ್ಲ
ನುಲಿಯುವದು ನರ್ತನವಲ್ಲ
ಮಾತಾಡಿ ಕಳೆದುಕೊಳ್ಳುವುದಿಕ್ಕಿಂತ 
ಮೌನವಾಗಿರುವುದೆ ಲೇಶೆಂದು ನೀ ಕಲಿಸು।।

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...