Thursday, December 8, 2022

ತನಗಗಳು

ತನಗಗಳು

ಮಳೆಗಾಲ ಹೊರಳಿ
ಚಳಿಗಾಲ ಮರಳಿ 
ಕಂಬಳಿಗೂ ಬಂತಲ್ಲ
ಸಂಬಳದಂತ ಪ್ರೀತಿ.

ಕೋಳಿಗಳ ಕಾವಿಗೆ
ಅರಳಿದಂತೆ ಪಿಳ್ಳೆ
ನೀ ಮಂದೆ ಸುಳಿದರೆ
ಚಳಿ,ಬಂಗಾರ ಬೆಳ್ಳಿ.

ಕೈ ಹಿಡಿದ ಮಡದಿ
ಕಣ್ಸನ್ನೆ ಮಾಡಿದಳು
ಕರೆದಳೆನ್ನ ನೋಡಿ
ಸರಿದಳಲ್ಲಾ ಕೋಡಿ.

ಮಾಗಿಯ ಚಳಿಯಲ್ಲಿ
ನೀ ಯಾಕ ತವರಿಗೆ
ಮಾಗಿದ ಮನಸೆಲ್ಲ
ಬಾಡುತಿದೆ ಮುದುಡಿ.

   🖋 ಬಸನಗೌಡ ಗೌಡರ

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...