Tuesday, December 6, 2022

ಜಾಕೀಟು ಸುತ್ತ..

ಜಾಕೀಟು ಸುತ್ತ..  

ಬರೆಯಬೇಕೆಂದಿರುವೆ 
ಬಡಿವಾರದ ಬದುಕೆಂಬ ಆದರ್ಶ 
ಬಿಡದೆ ಪಾಲಿಸಲು ಓದುವವರಾರು ? 
ಕಡೆಗೆಲ್ಲರೂ ನಡೆವರು ಕಿರಿ ದಾರಿ ಸುತ್ತ.॥

ಓದಬೇಕೆಂದಿರುವೆ ಸದಾ
ಹದವಾದ ನೊಂದವರ ಪತ್ರ 
ಅದು ಬರೆಯದೆ ಓಡುವ ಸತ್ಯ 
ಪದ ಜೋಡಿಸಿದರೆ ಸಿಗುದು ಪಾತ್ರ॥

ತುಳಿಯದ ದಾರಿ ಸೇರುವದೆಲ್ಲಿಗೆ ?
ತಿಳಿಯವಲ್ಲದು ಕುಣಿಯುತಿದೆ ಮಿತ್ಯ 
ಆದರೂ ಆಗಾಗ ಬರೆಯುತ್ತಿರುವೆನು 
ಸದಾ ತರಹೇವಾರಿ ತಿಳಿದ ಉತ್ತರ ॥

ಅಂಕ ನೀಡುವವನೆ ಮಾಯ 
ಸುಂಕ ಕೇಳುವರು ಮಾತ್ರ ಪ್ರತ್ಯಕ್ಷ
ಅಂಕ ಮುಗಿಯುತ್ತಾ ಬಂತು 
ಅಂಕಣಗಳಾದವು ದೂರದ ನಕ್ಷತ್ರ॥

ನಾನೇ ಓದಬೇಕು ತಿರಗಮುರಗಾ
ತಿಳಿದಂತೆ ನಟಿಸುವ ತಬರನಂತೆ
ಏಕೆಂದರೆ ಪುರಸೊತ್ತಿಲ್ಲ ಇವರಿಗೆ
ಬರೆಯುವದೇ  ಮುಗಿದಿಲ್ಲವಂತೆ॥

ಓದಲೆಲ್ಲಿದೆ ಇವರಿಗೆ ಪುರಸೊತ್ತು
ಬೋಧನೆಗೆ ನಡೆದಿದೆ ಕಸರತ್ತು
ಬೆಂದು ಬರೆದದ್ದು ಬಿಕರಿಯಾಗುತ್ತಿದೆ
ತಂಗಳಾದರೂ ಮಂಗಳಕರವಂತೆ॥

ನಾನೂ ಬರೆದೆ ಆಗಾಗ ಹರಿದೆ 
ಚುರಮುರಿ ಕಟ್ಟಲೂ ಬರಲಿಲ್ಲ 
ಅಮ್ಮ ಒಲೆಯಲ್ಲಿಟ್ಟು ಬೀಗಿದಳು
ಒಲೆ ಹತ್ತಲಿಲ್ಲವಂತೆ ! ಬಿಸಿ ನೀರಿಗೆ.॥

ಜಾಕೀಟು ಹೊಲಿಸಿದ್ದೆ ನೀಟಾಗಿ
ಸಮ್ಮೇಳನ ಬರಬಹುದೆಂದು 
ನನ್ನಾಕೆ ಕೇಳಿದಳು ಚಳಿಗಾಲವೇ ?
ಗಿರಕೆ ಹೊಡೆಯುತ್ತಿದೆ ಜಾಕೀಟು ಸುತ್ತ॥

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...