ನಾ ಕಂಡ ಇವತ್ತಿನ ಅದ್ಭುತವಾದ ಚಿತ್ರ,! ಇದಕ್ಕೆ ಪ್ರಶಸ್ತಿಯೂ ಬಂದಿದೆಯಂತೆ,ಬರಬೇಕಾಗಿದ್ದೆ ಪ್ರಬಲರ ಮುಂದೆ ದುರ್ಬಲರು ಆಹಾರದಂತೆ ? ಚಿರತೆ ವದನವನ್ನೊಮ್ಮೆ ನೋಡಿ " ನಿಶ್ಚಲ ಭಾವ" ಇಲ್ಲಿ ನ್ಯಾಯ ಅನ್ಯಾಯದ ಪ್ರಶ್ನೆ ಬರುವುದಿಲ್ಲ ಬದುಕು ಒಂದೆ ಮುಖ್ಯ ನ್ಯಾಯ. ಏನು ಅರಿಯದ ಕಂದಮ್ಮ ನ ಸಾವಿನೊಂದಿಗಿನ ಪ್ರೀತಿಯ ಸಹಜೀವನ.ಅರಿಯದ ನಂಬುಗೆಯೇ ಅಪ್ಯಾಯಮಾನ ಸ್ಥಿತಿ. ದಡತಲುಪಿಸುವ ತಾಯಿಯ ಮೇಲಿನ ದೃಡ ಪ್ರೀತಿಯ ಭಾವ,ಎಂತಹವರನ್ನೂ ಕ್ಷಣ ಕಣ್ಣರಳಿಸಿ ಮತ್ತೆ ಮತ್ತೆ ನೋಡುವಂತೆ ಮಾಡುತ್ತಿದೆ. ಇದು ಬರಿ ಪ್ರಾಣಿಗಳಲ್ಲಾಗಿದ್ದರೆ ಸರಿ ಎನ್ನಬಹುದಿತ್ತೇನೋ ? ಇಂದು ಮನುಷ್ಯ ಕುಲದಲ್ಲಿ ಸಹ ಅರಳಿ ಹೂವಾಗಿ ಕಂಗೊಳಿಸುತ್ತಿರುವುದು ವಿಷಾದನೀಯ.ಅಂದರೆ ಮಾನವ ಇನ್ನೊಂದು ಮಾನವನ ಭೌತಿಕ ದೇಹವನ್ನೆ ತಿನ್ನಬೇಕೆಂದೇನೂ ಇಲ್ಲ .ಒಂದು ಕಡೆ ಪೌಷ್ಟಿಕ ಆಹಾರ ಮತ್ತು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗುವ,ಸೂಕ್ತ ವೈದ್ಯಕೀಯ ಸೌಲಭ್ಯ ಸಿಗದೆ ಶಿವನ ಪಾದ ಸೇರವ ವರ್ಗ.ಇನ್ನೊಂದು ಕಡೆ ಪ್ರಭಲರ ಬಾಯಲ್ಲಿ .ಜೀವವಿದ್ದು ಶವದಂತೆ ಆಹಾರವಾದ ದುರ್ಬಲ ಜೀವಗಳು ದಯನೀಯ ಸ್ಥಿತಿ (ನಮ್ಮನಾಳುವ ಸರಕಾರಗಳು ಸರಿಪಡಿಸಿಲ್ಲ ಎಂದರ್ಥವಲ್ಲ )ಮಾಡಿದ ಕಾರ್ಯ ಬಕಾಸುರನಿಗೆ ಆರು ಕಾಸಿನ ಮಜ್ಜಿಗೆಯಾಗಿದೆ. ಇನ್ನೊಂದು ಕಡೆಗೆ ಬಡಗಿ ಹಿಡಿದು ತಿನಿಸುವ ಮತ್ತು ಬಾಲವಾಡಿ ಶಿಕ್ಷಣಕ್ಕೆ ಆರಂಕಿಯ ಪೀ ಹಣ ಕಟ್ಟಿ ಹೆಮ್ಮೆಯಿಂದ ಬೀಗುವ ವರ್ಗ. ಅವರೆಲ್ಲರ ನಿರೀಕ್ಷೆ ತಮ್ಮ ಮಗ/ಮಗಳು ಮುಂದಿನ ವೈದ್ಯರೊ ಇಲ್ಲ ಇಂಜಿನಿಯರ್ ರೆ ಆಗಬೇಕು.ಅದಕ್ಕಾಗಿ ಯಾವ ಮಾರ್ಗವಾದರೂ ಸರಿ ಅಂದರೆ ಅರಣ್ಯ ನ್ಯಾಯವಾದರು ಸರಿ. ನಾವೆಲ್ಲಾ ಪ್ರಸನ್ನರೆ.ಉಳಿಯುವವರಾರು ? ಇಂದು 32 ಲಕ್ಷ ಎಂಭತ್ತೆರಡು ಸಾವಿರ ಎರಡು ನೂರಾ ಅರವತ್ಮೂರು ಚ.ಕಿ.ಮೀ ಭೂಮಿಯಿದ್ದರೂ ನಶಿಸುವ ಸಂತತಿ ಯಾವುದು ? ಉಳಿಸಲು ಇನ್ನೊಂದು ಕಡೆಯಿಂದ ಚೇತಾಗಳನ್ನು ತರಬೇಕಾಗಿದೆಯಲ್ಲವೆ ? ಆಹಾರವಾದ ಪ್ರಾಣಿಗಳ ಸಂತತಿ ಏನಿಗಿದೆ ? ಅರ್ಥವಾಗಿರಬಹುದು ಪ್ರಕೃತಿ ನಿಯಮವೆ ವಿಸ್ಮಯ. ಪ್ರಭಲ ಪ್ರಭೇದಗಳನ್ನು ಹಣಿಯಲು ಇನ್ನೊಂದು ಪ್ರೇಭೇದ ಇದ್ದೆ ಇದೆ ಎನ್ನುವ ತರ್ಕ ಮನುಕುಲಕ್ಕೆ ಬಾರದೆ ಹೋದರೆ ? ಎದೆಗೊರಗಿದ ನಿಷ್ಕ ಲ್ಮಶ ಪಾಪು ಬದುಕಿರೂ ಬದುಕೀತು ಸವಾರಿ ಪ್ರಭೇಧ ಅಳಿದೀತು ಎನ್ನುವ ಸತ್ಯ ನಮ್ಮಲ್ಲಿ ಜಾಗೃತಿಯಾಗಬೇಕಾಗಿದೆ ಪ್ಪಕೃತಿ ನಿಯಮವೆ ಪರಮ ನಿಯಮ.ಎನ್ನುವ ನನ್ನ ಅರಿವು ವಾಯುವಿಹಾರದಲ್ಲಿ ಸಿಡಿಯಿತು.ಇದೇ ರೀತಿಯ ಇನ್ನೂಂದು ಚಿತ್ರವನ್ನು ನಾನು ನೋಡಿದ್ದ ನೆನಪು ಅದುವೇ ‘ದಿ ವಲ್ಚರ್ ಆಂಡ್ ದಿ ಲಿಟ್ಟಲ್ ಗರ್ಲ್’ ಹೆಸರಿನ ಈ ಫೋಟೋವನ್ನು 1993ರಲ್ಲಿ ಸುಡಾನಿನಲ್ಲಿ ಭೀಕರ ಬರಗಾಲದ ಸಮಯದಲ್ಲಿ ಸೌತ್ ಆಫ್ರಿಕಾದ ಖ್ಯಾತ ಫೋಟೋ ಜರ್ನಲಿಸ್ಟ್ ಕೆವಿನ್ ಕಾರ್ಟರ್ ಅವರು ಸೆರೆಹಿಡಿದಿದ್ದರು.ಫೋಟೋದಲ್ಲಿ ಕಾಣುವ ಆ ಆಫ್ರಿಕನ್ ಬಾಲಕಿ ಹಸಿವನ್ನು ತಾಳಲಾರದೆ ಸಮೀಪದಲ್ಲೇ ವಿಶ್ವಸಂಸ್ಥೆ ಸ್ಥಾಪಿಸಿದ ಗಂಜಿ ಕೇಂದ್ರಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಳು. ಆದರೆ ಬಹಳ ದಿನಗಳಿಂದ ಆಹಾರವಿಲ್ಲದೆ ಕಾಲುಗಳಲ್ಲಿಯ ಚಲನೆಯ ಶಕ್ತಿಯೇ ನಶಿಸಿ ಆ ಪುಟ್ಟ ಮಗು ತೆವಳಿಕೊಂಡು ಹೋಗಲು ಪ್ರಯತ್ನಿಸುತ್ತಿತ್ತು. ಆದರೆ ಆ ಮಗು ಅಂದು ಗಂಜಿ ಕೇಂದ್ರವನ್ನು ತಲುಪಿತಾ? ಅಥವಾ ಅಲ್ಲೇ ಸತ್ತು ರಣ ಹದ್ದುವಿಗೆ ಆಹಾರವಾಯಿತಾ? ಎಂಬುದು ಇವತ್ತಿಗೂ ಪ್ರಶ್ನೆಯಾಗಿಯೇ ಉಳಿದಿದೆ.
ಹಾಗಾಗಿ ಒಂದೆರೆಡು ಸಾಲು ಬರೆಯಲು ನನ್ನ ಕೈಬೆರಳು ಹೆಣಗಾಡಿದವು.
ತಮ್ಮ ಸಮಯ ಕೊಂದ ಬರವಣಿಗೆಗೆ ಕ್ಷಮೆಯಿರಲಿ.
ನಮಸ್ಕಾರಗಳು.🙏🙏
No comments:
Post a Comment