Saturday, April 22, 2023

* ಬಂತು ಫಲಿತಾಂಶ *



ಬೀಗಬೇಡ ಬಾಗಲೂಬೇಡ 
ಅಂಕ ಒಂದೇ ಅಂತಿಮವಲ್ಲ
ಅಂಕ ಮುಗಿದ ಮೇಲೆ 
ಚಿಂತೆ ಮಾಡಿ ಫಲವಿಲ್ಲ॥।

ಅನುದಿನವೂ ಓದಬೇಕು 
ಮನದಿ ಮನನ ಮಾಡಬೇಕು 
ಕೊನೆದಿನದ.ಫಲಕೆ ಇವಾಗ
ಶ್ಯಾನೆ ಚಿಂತೆ ಯಾಕೆ ಬೇಕು ।।

ದುಡಿದುದರ ಫಲವಿದು
ಬಂದಿದೆ ಪೂರ್ವ ದಿನದ ಲೆಕ್ಕ
ಮಾಡಿಹರು ಈಗ ಚೊಕ್ಕ,
ಕುಳಿತು ಚಿಂತೆ ಯಾಕೆ ಬೇಕು ।।

ಮುಂದಿದೆ ಮೂರು ಸಾವಿರ ಮೈಲು 
ಬಂದಿರುವೆ ಬರಿ ಆರು ಮೈಲು 
ಬೆಂದು ಸಾಗಿದರೆ ಬಹು ದೂರ 
ನೊಂದುಕೊಳ್ಳುವುದೇಕೆ ಬೇಕು॥

ಗೆದ್ದವರು ನಿದ್ದೆಗೆ ಜಾರಬೇಡಿ
ಎದ್ದು ನಿಂತು ಮರೆಯಬೇಡಿ 
ಸದ್ದು ಮಾಡಿ ಕೆರಳಿಸಬೇಡಿ
ಬಿದ್ದರೆ ಕಲ್ಲು ಬೀಸಲಿದ್ದಾರೆ ಜೋಕೆ॥


Friday, April 21, 2023

ನನ್ನ ರಜಾ ಮಜಾ

ಚಂದ್ರಗೌಡ ಕುಲಕರ್ಣಿ
 *ಅಕ್ಷರದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಬೆಂಗಳೂರು*   
   
*ರಾಜ್ಯ ಮಟ್ಟದ ಕವನ ಸ್ಪರ್ಧೆಗಾಗಿ*

ವಿಷಯ:ನನ್ನ ಬಾಲ್ಯದ ಬೇಸಿಗೆ ರಜೆ. 

* ಬಾಲ್ಯದ ರಜಾ ಮಜಾ *

ಎಲ್ಲರೂ ಮರೆಯದ ಬೆಲ್ಲದಂತಹ ಬಾಲ್ಯ. 
ಎಲ್ಲಿ ಕಳೆದೊಯಿತು ಗೆಳೆಯ। 
ಕ್ಷಣ ನೆನೆದರೂ ಸಾಕು ನೂರು ವರುಷಗಳ 
ಆಯು ನಮಗೆಲ್ಲಾ॥

ಗೋಲಿ ಗಜಗದ ಗಮ್ಮತ್ತು 
ಶಾಲೆಯ ಶಿಸ್ತು ಮರೆಸಿತ್ತು।
ಮೂಲೆಯ ತುಂಬಾ ನಮ್ಮದೆ ಸಂಪತ್ತು ।
ಅಪ್ಪ ಅಮ್ಮ ಬೀದಿಗೆ ಒಗೆದಾಗ 
ಜೀವವೆ ಹೋಗಿತ್ತು।
ರಂಗ,ನಿಂಗ,ಬಸಲಿಂಗನ
ತಂಡವೇ ನಮಗೆಲ್ಲಾ ಜಗತ್ತು॥
ಗುರುಗಳೆ ನೀಡಿದ ಬಿಡುವು 
ದೊರೆಯಂತಹ ಮಜಾ ತರಿಸಿತ್ತು।  
ಕೆರೆ ಬಾವಿಗಳೆ ಸುರಪಾನ
ಮಾವಿನ ಮರವೆ ನಮ್ಮಬಾರು 
ಬೇವಿನ ಗಿಡವೆ ನಮ್ಮ ತವರೂರು
ತುಡುಗಿಲೆ ಕಲ್ಲು ಹೊಡೆದೆವು।
ಕುಡಿಮಾವು ಕಿತ್ತು ಕುಣಿದೆವು
ಮಾಲಕನ ಸಿಟ್ಟಿಗೆ ಮುದುಡಿ
ಹೊಲದ ತುಂಬಾ ಓಡಿದೆವು
ಬಿರುಬಿಸಿಲು ಬೆಗೆಯು 
ಹೊರೆ ಯಾಗದಿರಲೆಂದು 
ಹೂಗಾರ ಹಳೆ ಬಾವಿ  ಹಾರಿದೆವು ।
ತಳ ಮುಟ್ಟಿ,ಸ್ವರ್ಗ ಕಂಡಂತೆ ಬೀಗಿದೆವು
ಹಾದಿಹೋಕರು ಬಂದು ಬೈದಾಗ 
ಚಡ್ಡಿ ಹಾಕದೆ ನಾವೆಲ್ಲಾ ಓಡಿದೆವು।।
ಅಜ್ಜ ಅಮ್ಮನ ಮನೆಯು
ಹೆಜ್ಜೇನಿನಂತ ಸವಿ ಬಿಡು
ಹೆಜ್ಜೆ ಹೆಜ್ಜೆಗೂ ಪ್ರೀತಿ ನೀಡಿ 
ಸಜ್ಜಕ ತುಪ್ಪ ಸುರಿದರು
ಹೊಲದಾಗ ತಿರುಗಾಡಿಸಿ
ಹೊಳೆಯಾಗ ಮೈಯುಜ್ಜಿ
ಅಳುವಾಗ ಗಲ್ಲಕ ತಿವಿದರು 
ಮೈಮಣ್ಣ ಕೂಡಿಸಿದರ ಬಸವಣ್ಣ 
ಅಂತ ಮೊಸಡಿಗೆ ಬಿಗಿದರು.।।

🖋ಶ್ರೀ ಬಸನಗೌಡ ಯ ಗೌಡರ
        ಉಪನ್ಯಾಸಕರು
ಬಾಲಕರ ಸರಕಾರಿ ಪ.ಪೂ.ಕಾಲೇಜು ಗುಳೇದಗುಡ್ಡ
ಜಿಲ್ಲಾ: ಬಾಗಲಕೋಟೆ
             9489385494

Wednesday, April 19, 2023

ತನಗಗಳು

ತನಗಗಳು

ನಾ ನೆಚ್ಚುವಾ ಹುಡುಗಿ
ಹಚ್ಚಬಾರ್ದು ಅಡುಗೆ.
ಇರಬೇಕು ಬೆಡಗಿ
ತಿಕ್ಕಬೇಕು ಗಡಗಿ.

ಬಿಸಿಲಿನ ಸಿಡುಕು
ಗಾಳಿಯದು ಸೆಡುವು.
ಬಸವಳಿದು ಬಂದೆ
ಗಿಡ ಬಾಗಿ ಸ್ವಾಗತ 

ನೆಂಟರ ಕಣ್ಣುಗಳು
ಗಂಟಿನ ಸುತ್ತ ಇತ್ತು.
ತುಂಟರ ಕಣ್ಣುಗಳು 
ಗಂಟೆಯ ಮೇಲೆ ಇತ್ತು.

ಬಣ್ಣದ ಮಾತಿನಿಂದ
ಕೊಳ್ಳೆ ಹೊಡದ ಮತ
ಎಣ್ಣೆ ಹೊಡೆದಾಗಿನ 
ಮಾತು ಸುಣ್ಣದ ನೀರು.

🖋️ಬಸನಗೌಡ ಗೌಡರ

Saturday, April 15, 2023

* ಮಾಡು ಮತದಾನ *



ಮರೆಯದೆ ಮಾಡು ನೀ ಮತದಾನ 
ಹೊರೆ ಎಂದು ದೂರ ಸರಿದರೆ, ಸಂಹಾರ 
ಸರಿದಾರಿಯಲ್ಲಿರುವವರ ಒರೆಗೆ ಹಚ್ಚುವ ದಿನ
ಜಾರಿದರೆ ನಮಗದು ಐದು ವರುಷದ ಬರ ॥

ಬೆರಗಾಗಬೇಡ, ಬಣ್ಣದ ಮಾತುಗಳಿಗೆ,  
ಕಿರುನಗೆಯ ಬೀರಿ, ಬಾರು ಬೀರು ತೋರಿ
ಬೋರಿ ಭೋಜನ ನೀಡಿ ಕೊಡುವರು ಮಾರಿಗೆ
ಮಾರದಿರು ಅಮೂಲ್ಯವಾದ ನಿನ್ನ ವರ॥

ಉಳಿಸು ಗಣತಂತ್ರ ಬೆಳೆಸು ಪ್ರಜಾತಂತ್ರ 
ದೊರೆಯ ಆಯ್ಕೆಯೇ ಹೊರೆಯಾಗದಿರಲಿ
ಸತ್ಯದ ಸೌಧ ಹೊತ್ತು ನಡೆಯಲು, ನೀ 
ಒತ್ತು ನೀತಿವಂತರಿಗೆ ಅಮೂಲ್ಯ ಮತ॥

ಮತದಾನ, ಬಲಿದಾನಗೈದವರ ಭಿಕ್ಷೆ
ಮರೆತು ಸಾಗಿದರೆ ಆಗುವುದು ಶಿಕ್ಷೆ
ಗತವೂಮ್ಮೆ ಮೆಲಕು ಹಾಕು,ನಿನಗೆ ಶ್ರೀರಕ್ಷೆ
ಜೊತೆಯಾಗಿ ನಡೆದರೆ ಜಗವೆಲ್ಲ ಸುಭಿಕ್ಷೆ॥

ಇದು ನನ್ನ ಅಭಿಮತ ಬೇಡ ಭಿನ್ನಮತ
ಸಾಲು ನಿಲ್ಲಲು ಸೋಲದಿರು ಗೆಳೆಯ 
ಗೆಲವು ಕಾಣಲು ನಿಲ್ಲು ನೀ ತೀರ್ಪುಗಾರ
ಬಲ ತುಂಬು ಅದು ನ್ಯಾಯ ಮಂದಿರ॥














 
 

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...