Monday, July 31, 2023

* ಓಡಿದ ಮಳೆರಾಯ*


ಹೆದರಿದನಾ ಮಳೆರಾಯ
ಕಾದಿರುವೆ ಪೂರ್ತಿ ದಿನ। 
ಹೋದವನು ಬರದಿರುವನೆ  
ಕಾದಿರುವೆ ಇದು ಶಬರಿಯ ವನ ॥
ಮೂರಡಿಯು ಇಡದಂತೆ 
ಹಾಕಿದನು ಕಡಿವಾಣ ।
ಆಡಲು ಬಿಡಲೊಲ್ಲ,ಓಡಲು ಬಿಡಲೊಲ್ಲ. 
ಕಾಡಿದನು ಕರಡಿಯಾಡಿಸುವವ
ಮನೆಬಿಡದೆ ಕುಣಿಸಿದಂತೆ
ರಾಡಿಯಾದರೆ ಏನು ,?
ಕದ್ದು ಹೋಗದೆ ನಾನೂ ಬಿಡೆ॥ 
ಅಮ್ಮನದೂ ಅದೆ ಹಾಡು 
ಮಾಡಿಕೊಳ್ಳದಿರು ರಾಡಿ! ಇದ್ದದ್ದೆ ತಡೆ.। 
ಒಮ್ಮೆ ಜಿಟಿ, ಜಿಟಿ, ಇನ್ನೂಮ್ಮೆ ರಪ ರಫಾ, 
ಅಪ್ಪನದೂ ಅದೆ ರಾಗ ತಂದೀತು ಕಫಾ। 
ಕಟ್ಟಿಹಾಕಲು ಕೊಟ್ಟ, ಬಿಟ್ಟಿ ಹುಕಂ,। 
ಸೋಲುವವರಾರು ?
ಕಾಲು ಓಣಿಯ ಪಾಲು
ಅಂಗಿ ದೋಬಿಯ ಪಾಲು ।
ಸೋತದ್ದು ಅಪ್ಪ ,ಅಮ್ಮನಿಗೆ ...ಅಲ್ಲಲ್ಲ ....
ನಮ್ಮ ಮನೆಗೂ ಬಂತು 
ರಂಗು ರಂಗಿನ ಛತ್ರಿ ।
ಅಣ್ಣನಿಗೊಂದು ಅವ್ವನಿಗೂಂದು
ಸವಾಲು ಹಾಕಲು ನನಗೊಂದು।
ನಿನ್ನೆಯಿಂದ ಕಾದದ್ದೆ ಕಾದದ್ದು .
ಮಳೆ ರಾಯ ಹೆದರಿ
ಹಿಡಿದಿರಬೇಕು ಯಾತ್ರೆ . ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...