Wednesday, August 23, 2023

* ಚಂದ್ರ ನಂಗಳಕೆ *



ಚಂದಿರನ ಚುಂಬಿಸಲು 
ನಂಬಿ ಬಂದವರು ನೂರಾರು ।
ನಮ್ಮವರೂ ಬಂದಿಹರು 
ವಿಕ್ರಮ್ ನ ಕಳುಹಿಸಿಹರು
ಸಕ್ರಮಕೆ ಕಾದು ನಿಂತಿಹರು॥

ಅಂಬರದಿ ಅಲೆಯುವ 
ಕಂದಮ್ಮಗಳು ನೂರು ಜನ।
ಹೆಡೆ ಎತ್ತಿ ಓಡಾಡುವರು
ನಡೆಯುತ್ತಾ ಉರುಳುವರು
ತೊಡೆ ತಟ್ಪಿ ನಿಲ್ಲುವರು ಕೆಲವರು॥

ಹಿಡಿಮಣ್ಣು ಪಡೆದು 
ಹಿಗ್ಗಲು ಬಂದವರು ನನ್ನ ಜನ ।
ಕಡೆಯದೆಂಬುದಿಲ್ಲ ಈ ದಿನ
ಪಡೆದು ಬೀಗ ಬೇಕಾಗಿದೆ 
ಮೊದಲು ನಾವಿಂದು ॥

ಸಂಬಂಧ ಬೆಳೆಸಲು 
ಅಂಬೆಗಾಲಿನ ನಡೆ ನಮ್ಮದು।
ಆಲಿಂಗನಕೆ ತಡಮಾಡದಿರು  
ಅಂಗುಲಿಮಾಲನ ಅವತಾರವೆಂದು  
ನುಂಗದಿರು ನನ್ನವರನು.॥

ಕಳುಹಿಸಿದ ಕಂದಮ್ಮಗಳ 
ಆಯು ಒಂದು ದಿನ ।
ಅದು ನಿನಗೆ ಹದಿನಾಲ್ಕು ದಿನ 
ತಡೆದರದು ತಂಪಿನ ಕತ್ತಲೆಯ ದಿನ
ಕಾಯ್ದು ಕಳೆಸೆಮ್ಮ ನಮ್ಮಯ ಜನ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...