Thursday, December 26, 2024

ನುಡಿ ನಮನ



ಅನುದಿನವೂ ಮಾತಾಡಿ ಹೊಣೆಯರಿಯದ 
ನಮ್ಮೊಳಗೆ 
ಮೌನದೊಳು ಮುಕುಟವಾಗುವ ಕಲೆ
ಕಲೆ ಕಲಿಸದ ಕಲೆಗಾರ
ಇವರೆ ನಮ್ಮ ಮನಮೋಹನ॥

ಹುಟ್ಟಿದ್ದು ಪಾಕಿಸ್ತಾನ ಬೆಳೆದದ್ದು ಭಾರತ 
ಅರಳಿದ್ಡು ಜಗದಗಲ ಮುಗಿಲಗಲ
ಪಶ್ಚಿಮದ ಆಕ್ಸ್ಫರ್ಡ್ ಕ್ಯಾಂಬ್ರಿಡ್ಜ್  
ಮೇರು ವಿಶ್ವ ವಿದ್ಯಾಲಯದಲ್ಲರಳಿದ
ಪ್ರತಿಭೆ ನೀವು,॥

ಹರಡಿದಿರಿ ಭಾರತದ ತುಂಬಾ ಪ್ರಭಾವಲಯ 
ಒಂದೆ ಎರಡೆ, ಆರ್ಥಶಾಸ್ತ ದ ಪ್ರಾಧ್ಯಾಪಕ 
ರಿಜರ್ವಬ್ಯಾಂಕ ಗೌರ್ನರ ,ಯುಜಿಸಿ ಅಧ್ಯಕ್ಷ 
ಎಲ್ಲ ದರಲ್ಲಿಯೂ ಆದೇ ದಕ್ಷತೆಯ ಹೆಗಲು ನೀವು ॥

ಪ್ರಧಾನ ಮಂತ್ರಿಯ ಆರ್ಥಿಕ ಸಲಹೆಗಾರ ,
ಒಂದಲ್ಲ ಎರಡು ಅವಧಿಯ ಪ್ರಧಾನಿ
ಆರಿಸಿದವರು ನಾವಲ್ಲ ಹೊರೆಸಿದೆವು 
ಸವಾಲಿನ ಸಾಲಿನ ಆರ್ಥಿಕ ಮಾಂತ್ರಿಕ ಪ್ರಧಾನಿ
ಬಂಗಾರ ಅಡವಿಟ್ಟು ಬುಡ ಸೇರಿದ ಅರ್ಥವ್ಯವಸ್ಥೆಯ
ಜಡಬಿಡಿಸಿದ ಗಾರುಡಿಗ ನೀವು॥

ಬಡತನದ ಬುಡ ಕೀಳಲು 
ನರೇಗಾ,ಮಾಹಿತಿ ಹಕ್ಕು ಕಾಯ್ದೆ,
ಆಹಾರ ಭದ್ರತಾ ಕಾಯ್ದೆ, ಉಚಿತ ಹಾಗೂ ಕಡ್ಡಾಯ 
ಶಿಕ್ಷಣ ಕಾಯ್ದೆ ಗಳಿಗೆ ಜೀವ ನೀಡಿದವರು ನೀವು॥

ಆರ್ಥಿಕ ಮಾಂತ್ರಿಕನ ಕಳೆದುಕೊಂಡು 
ಬಡವಾದ ಭಾರತದ ಪ್ರೀತಿಯ ನುಡಿ ನಮನ.🙏🙏

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...