Sunday, January 19, 2025

ಬಯಲು ದಾರಿ

ಬಯಲು ದಾರಿಯಲ್ಲಿ 
ಉರಿವ ಬಿಸಿಲು ಮೀರಿ 
ಸಪ್ತ ಸಾಗರ ದಾಟಲು
ಸತ್ಯ ವೊಂದೆ ಹೊತ್ತು ಸಾಗವ 
ಸಂಪತ್ತಿನಂತಹ ಆಸರೆ ।

ತಗ್ಗು ದಿನ್ನೆ ಗಳರುವ  ದಾರಿ
ಬಗ್ಗಿ ನಡೆದು ಸುಗ್ಗಿ ಕಾಣಲು  
ಗೆಳೆಯರ ಹಿತನುಡಿಗಳೆ 
ಗಿಡಮರಗಳಂತೆ ನೆರಳು 
ಬೆರಳು ತೋರಿಸಲಾಸರೆ ॥

ಬಡತನವೆಂಬ ಭೂತ 
ಸಿಗದ ಪ್ರೀತಿ,ಎಲ್ಲ ನನ್ನದೆಂಬ ಭ್ರಾಂತಿ
ಉರಿವ ಕೆಂಡದಲ್ಲೂ ಬದುಕಲು,
ಸಾಕ್ಷಿಪ್ರಜ್ಞೆಯೊಂದೆ ಜಲದಂತೆ 
ಬದುಕಿಗಾಸರೆ ॥

ವಿಶಾದವೂ ವಿನೋದವೊ 
ಬಿರುಗಾಳಿಗೆ ಸಿಕ್ಕು ಓಲುವಾಗ
ಸಿಗುವ ಭ್ರಾತೃ ಭಾವನೆ 
ದಡಸೇರಿಸುವ ಭರವಸೆಯೇ 
ಜೀವಕಾಸರೆ ॥
 
ಉಕ್ಕಿ ಹರಿವ ನದಿಗಳು
ದಿಕ್ಕು ಕಾಣದಂತೆ ಸುರಿವ ಮಳೆಯಲಿ
ಸಿಕ್ಕ  ಸಹಕಾರದ ಹನಿಗಳು
ಹೊಕ್ಕು ತುಂಬಲು ಶೆಲೆಗಳು
ಒರತೆ ಗಾಸರೆ  ॥

No comments:

Post a Comment

ಪ್ರಶ್ನೆಗಳು

          ಪ್ರತಿಭೆಯ ಪ್ರಭೆಯರಳಲು ಪ್ರಶ್ನೆಗಳೆ ಅಸ್ತ್ರಗಳು ಪ್ರಶ್ನಿಸದ ಗುರು, ಇಲ್ಲವೆ ಶಿಷ್ಯ ಅಪೂರ್ಣ. ಅದು ಸತತವಾಗಿ ನಡೆಯುವ ಪ್ರಕ್ರಿಯೆ ಅದಿಲ್ಲದಿದ್ದರೆ ಶಿಕ್ಷಣದ ಉ...