Saturday, March 8, 2025

ಮಹಿಳಾ ದಿನಾಚರಣೆ

ನಿಸರ್ಗ ಮೀರಿ ನಡೆದವರುಂಟೆ ಜಗದಲಿ
ಮಾರ್ಗ ಒಂದೇ ಹೆಣ್ಣು ಗಂಡು ತಿಳಿದಲ್ಲಿ 
ಸಾಗಿ ನಡೆವ ಬದುಕಿನ ಮರ್ಮ ಚಂದ 
ಬಾಗಿ ನಡೆದವರ ಬಂಡಿ ತಾ ಮುಂದೆ

ಮಹಿಳೆ ತಾ ಏಳುವಳು ಎಲ್ಲರಿಗಿಂತ ಮುಂದೆ
ಮಲಗುವಳು ಹಿಂದೆ, ಪ್ರೀತಿ ನೀಡಲಿವಳು ತಂದೆ
ಗಂಜಿ ನೀಡುವಳು ಎಂಜಲೆತ್ತುವಳು
ಸಂಜೆಗೆ ದೀಪ, ಸತಿ ತರುವಳು ಸ್ವರ್ಗ ಮುಂದೆ

ಸಂತತಿಯ ಪೋಷಕ ಮಂತ್ರಿ
ನಿತ್ಯ ಆರೋಗ್ಯ ಸಚಿವೆ, ಮತ್ತೆ 
ಸಾಂಸ್ಕೃತಿಕ ಮಂತ್ರಿ, ಹಿತಕಾಯುವ
ಬದಲಾಗದ ಮುಖ್ಯ ಮಂತ್ರಿ ಇವಳು.

ಸಂಬಳವಿಲ್ಲದ ಶಿಕ್ಷಕಿ ನಂಬಿ ಬರುವ 
ಅಸಾಹಯಕರಿಗೆ ಮಾರ್ಗ ದರ್ಶಕಳು
ಕೆಲಸವೆಲ್ಲ ಕುಟುಂಬದ ಪರಿಚಾರಿಕೆ
ಹೆಸರಿಲ್ಲದ ಪ್ರತಿ ಮನೆಯ ಮಾಲಿಕಳು

ಮಾರ್ಚ ಎಂಟು, ಕಾಯಬೇಕಿಲ್ಲ ನಂಟು
ಅನುದಿನವೂ ಮಹಿಳಾ ನೆನಪಿನ ದಿನ 
ಅವಳಿಲ್ಲಿದ ದಿನ ಅದು ನರಕದ ದಿನ 
ಅರಿತು ನಡೆದಾಗದು ಸನ್ಮಾನದ ದಿನ















No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...