Saturday, June 28, 2025

ಕಾರ್ಗಿಲ್ ವೀರರ ಕವನ ಸ್ಫರ್ಧೆ

ಅನು ದಿನವು ಮಾತಾಡಿ ಅರಕ್ಷಣವೂ ಓದದೆ ಅದೆಂತು ಲಭಿಸಿವುದು ಜಾಣ್ಮೆ ಅದಕ್ಕೂ ಬೇಕು ತಾಳ್ಮೆ . ಬರೆಯುವುದು  ನನ್ನ ಹವ್ಯಾಸ ಬೆನ್ನು ಬೀಳುವುದಿಲ್ಲ ಬೆಕೆಂದು ಸಾಹಿತ್ಯದ ಪಟ್ಟ ಆದರೆ ಕೊಟ್ಟರೇನು ಮಾಡುವುದು ?  ಬರಹಗಾರನಿಗೆ ನೀಡುವಂತೆ ನನಗೂ ನೀಡಿದರೆ ಇ-ಪ್ರಮಾಣಪತ್ರದ ಹೂಗುಚ್ಚ 
ಬಿಟ್ಟು ಇರಲಾದೀತೆ.... ಹಂಚಿಕೊಳ್ಳುವ ತವಕ !.
ಅದು ಶಿಕ್ಷಕರ ಪರಿಷತ್, ಕಲಿಸುವ ಕರಗಳಿಗೆ 
ಕನ್ನಡ ಕಟ್ಟುವ ಕೆಲಸ, ಮೇಲೆ ರಾಷ್ಟ್ರದ ಭಕ್ತಿಯ ಪ್ರೀತಿ . ಬರೆಯದೆ ಇರಲಾದೀತೆ ಚಿತ್ರ ಕವನ ಸ್ಪರ್ಧೆ ! 
ಬರೆದೆ ...ಕಾರ್ಗಿಲ್ ಕದನ ವೀರರ ಕ್ಷಾತ್ರ ತೇಜಸ್ಸು,
ಸ್ಥಾನ ಯಾವುದಾದರೇನು ? ನೂರಾರು ಕವನಗಳ ವೀರ ಸೈನಿಕರ ಗುಣಗಾಣ ಅದರಲ್ಲಿ ನನದೊಂದು ಅಳಿಲು ಸೇವೆ ಮೂರು ಹತ್ತುಗಳಲ್ಲಿ ಮುತ್ತಾಗಿ ಬಂದರೆ ಪ್ರೀತಿಯಿಂದ ಎತ್ತಿಕೊಳ್ಳದೆ ಇರಲಾದೀತೆ ...ಹೆತ್ತವರಿಗೆ ಹೆಗ್ಗಣವೂ ಮುದ್ದು ಮತ್ತೆ ಮತ್ತೆ ಬರೆಯಲು ಪ್ರೇರಿಪಿಸಿದ ಶಿಕ್ಷಕ ಸಂಘಟನೆಯ ಬಳಗಕ್ಕೆ ನೂರೊಂದು ನಮನಗಳು.

No comments:

Post a Comment

ಹಾಲಹಂಡೆ

ಬಂಡೆಗಳ ನಾಡಲ್ಲಿ ಬೆಳೆದು ನಿಂತಿಹಳು ಹಾನಾಪೂರದ ಹಾಲಹಂಡೆ  ಕಂಡು ಸಂತಸ ಪಡು ನೀ ಮಳೆಗಾಲದಂದು ಫೀ ಇಲ್ಲ, ಪೇ ಮಾಡಬೇಕಿಲ್ಲ ಪಳಾರದ ಹಂಗಿಲ್ಲ  ನಿಷ್ಕಲ್ಮಷ  ಮನ...