ಹೊಂಗೆಯ ಹೊವಿನ ರಂಗಿನ ಚಿತ್ತಾರ
ಭೃಂಗದ ಜೇಂಕಾರ ಎನ್ನಂಗಳದಲ್ಲಿ
ಮೊಡಲರಮನೆಯ ನೇಸರ ಮುತ್ತಿಕ್ಕಲು,
ಬಂಗಾರ ಕಿರಣ ಹೊಂಬೆಳಕಿನ ಚರಣ
ಮುತ್ತಿನ ಮಳೆಯು ನಯನ ಮನೋಹರ //
ಕತ್ತಲೆಯೊಳಗೆ ಮನೆ ಮಾಳಿಗೆ ಸುತ್ತಿ
ಕಳ್ಳ ತನದಲ್ಲಿ ಕಟ್ಟಿಗೆ ತುಂಡು ಗಳನೆತ್ತಿ
ಕೆಕೆ ಹಾಕಿದ ಪಡ್ಡೆಗಳಿಗೆ ಯುದ್ಧ ಸಂಭ್ರಮ !
ಸಾಧನೆಯ ಶಿಖರದ ಬೂದಿಯಲಿ ಹೂರಳಾಡಿ
ಹಲಗಿಯ ಹೊಡೆದರು ಗೆಳೆಯರು ಕೂಡಿ //
ಸಲುಗೆಯ ಬಾಳಿನ ನಲುಮೆ ಹೋಳಿಯಾಡಿ.
ಸಂಹರಿಸಿದ ಬೆಂಕಿಯಲ್ಲಿ ಹುರಗಡಲಿ ಮಾಡಿ
ಬಾಯಿ ಕೈಗೆ ಹೊಡೆದಾಟ ಲಬೋ.. ಲಬೋ ..
ಹೋಳಿಯ ಸಂಭ್ರಮ ಗಲ್ಲಿಗಲ್ಲಿಗಳಲ್ಲಿ.
ಹುಡುಗರ ಕೈಯಲ್ಲಿ ಬಣ್ಣದ ಚೊಂಬು//
ಬಣ್ಣ ಬಳಿಯಲು ಬರುವರು ಓಡೋಡಿ
ಅಜ್ಜಿಯ ಬಾಯಿಯಲ್ಲಾಗುವರು ಬಿಡಾಡಿ.
ಹೂತಿಟ್ಟ ಭಾವಗಳ ಹೊರಹಾಕಿ, ಕಾಡಿ
ಹರುಷದ ಹೊನಲಿನಲ್ಲಿ ತೇಲಾಡಿ ಓಲಾಡಿ ತಿರುಗುವರಿವರು ಬಲೆ ಕಿಲಾಡಿ //
ಬೆಂಕಿಯ ಎತ್ತಲು ಹೆಂಗಳೆಯರ ಹೋರಾಟ
ಹೊತ್ತಿಸಿದ ಬೆಂಕಿಯಲ್ಲಿ ಹೋಳಿಗೆ ಊಟ ಉಂಡು ತೇಗಿದ ಮನೆಮಂದಿ ಹಾರಾಟ
ಮತ್ತೆ ಸೇರಿತು ಜನ ಸಾಲು ಓನಿಯಲ್ಲಿ
ಚಟ್ಟದ ಮೇಲೊಂದು ಕಂಡೆ ದಿಟ್ಟ ಹೆಣ //
ಅಟ್ಟಕ್ಕೇರಿಸಿದರು ತುಟಿ ಬಿಡದ ಗಟ್ಟಿ ಮನ
ಗಟ್ಟಿ ಗಿತ್ತಿಯರು ಹಾಡಿ ಹೊಗಳಿದ ಗುಣಗಾನ
ಗರ ಬಡಿದು ಊರೆಲ್ಲ ತೇಲಿತು ನಗೆಗಡಲಲ್ಲಿ.
ಅಳುವಲ್ಲಿ ನಗುತರುವ ಹೋಳಿ ಸಂಭ್ರಮ
ಇದಕುಂಟೆ ಸರಿಸಮ ಇಳೆಯಲ್ಲಿ //
ಬಸನಗೌಡ ಗೌಡರ.
No comments:
Post a Comment