Tuesday, May 4, 2021

*ಮಾಸ್ಕ ಹಾಕಿ , ಕೈತೊಳೆದಾಗು ದೇವರು*

ಮಲಗಿ ಮಗ್ಗಲು ಬದಲಿಸಿ ನುಜ್ಜು 
ಗುಜ್ಜಾದೆ ಮಹೇಶ್ವರ, ನಿನ್ನ ಮಹಿಮೆ  
ಎಷ್ಟಂತ ನೋಡಲಿ ಹಾಸಿದ ಕೌದಿ 
ಮನೆಯಲಿ ನಾನಾಗಿರುವೆ ಖೈದಿ /

ರಜೆಯಿದ್ದು ಮಜವಿಲ್ಲದಾಗಿದೆ, ಸಜಾ 
ನಿಟ್ಟುಸಿರೊಂದೆ ಹರಿಯುತಿದೆ, ತಾಜಾ 
ಮುಗಿಯದ ಗೋಳು ಒಂದು, ಎರಡು.
ಸಾಲುಗಟ್ಟಿವೆಯಂತೆ ಮೂರು ನಾಲ್ಕು!

ತಿಂದುಂಡು ಆಗಿರುವೆ ದಂಡ ಪಿಂಡ
ತಿರಿದು ತಿನ್ನಲು ಯಾರಿಗಿಲ್ಲ ಸ್ವಾತಂತ್ರ್ಯ
ಮಾನವನಿಗೆ ಬಂತೀಗ ಪಾರತಂತ್ರ್ಯ
ಕೊರೋನಾದಿಂದಾಗಿಹನು ಅತಂತ್ರ /

ಆರೈಕೆ ಅಂಗಳದಲ್ಲಿ ಅಂಗಲಾಚುವಿಕೆ.
ಸಂಬಂಧಗಳಿಗೆ ಉಳಿಸುವ ಚಡಪಡಿಕೆ
ಸತ್ತ ಹೆಣದ ಮೇಲೆ ಸಂಪಾದನೆ ಸಾಕು
ನಿತ್ಯ ದುಡಿಯುವ ನಿಸ್ವಾರ್ಥ ಬೇಕು /

ವೈದ್ಯ ದಾದಿಯರೆ ನಮ್ಮ ನಿಜ ದೇವರು
ಲಾಟಿ ಬೀಸಿದ ಕರುಣೆ ಕೈಗಳೆ ದೇವರು
ಅಂತರ ಕಾಪಾಡಿದವರೆ ನಿಜ ಸಂತರು
ಮಾಸ್ಕ ಹಾಕಿ ಕೈತೊಳೆದಾಗು ದೇವರು/


No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...