Saturday, January 15, 2022

* ಎಚ್ಚರದಿಂದ ಇರೋಣ *

ಭಾರತೀಯತೆ ಒಂದು ದೇಹ, 
ಬಿಡಿಯಾಗಿ ನೋಡ ಬಾರದಣ್ಣ 
ಇಡಿಯಾಗಿ ನೋಡಿದರೆ 
ಉಳಿಗಾಲ ಇಲ್ಲ ಅಳಿಗಾಲ !
ರೋಗ ಸಾಮಾನ್ಯ 
ಔಷಧಿಯೂ  ಯುಂಟು 
ವಾಸಿಯಾಗದ್ದೇನಲ್ಲ 
ಜಾತೀಯತೆ ,ಕೋಮುವಾದ  
ಪ್ರಾದೇಶಿಕತೆ ಪಟ್ಟಿ ಏನೆ ಇರಲಿ 
ಸುಟ್ಟು ಹಾಕಬಹುದು
ಪ್ರೀತಿ ಸಹನೆ ಎಂಬ ಔಷದದಿಂದ.
ಮೂಗಿಗೆ ನೆಗಡಿ ಬಂದರೆ 
ಮೂಗು ಕೊಯ್ದವರುಂಟೆ? 
ಶುಂಟಿ ಪುಡಿಯಿಂದ  
ವಾಸಿಮಾಡಿದವರುಂಟು.
ವೈದ್ಯರೂ ಉಂಟು...
ಆಯ್ಕೆ ಅವರವರಿಗೆ...
ವಾಸಿಮಾಡದ್ದೇನಲ್ಲ !
ತಲೆಯುಂಟು ಅದರ 
ನೋವು ಉಂಟು !
ತಲೆ ತಗೆದವರುಂಟೆ ?
ತಲೆಯಿಂದ ದ್ವೇಷ ಅಸೂಯೆ 
ತೆಗೆದರೆ ಮನಶ್ಶಾಂತಿ 
ಇಲ್ಲದಿದ್ದರೆ ಬರಿ ವಾಂತಿ.
ಕೃಶವಾದ ಮರಕೆ ಪೆಟ್ಟು 
ನೀಡುವವರ ಪಟ್ಟಿಯೂ ಇದೆ
ಇದು ಹೊಸದೇನು ಅಲ್ಲ . 
ನಿಂತವರ ಚಿಂತೆ ಬಿಡಿ..... 
ನಿಲ್ಲದೆ ಸದಾ ನಡೆಯುತ್ತಾ ಇರೋಣ 
ನಡೆದವನಿಗೆ ರೋಗ ಕಡಿಮೆ 
ನಿಂತವನು ರೋಗದ ಸಂತೆ.
ಭಾರತವೆಂಬುದು ಬರಿ 
ಬಡಿವಾರದ ಮಾತಲ್ಲ 
ಸಾವಿರ ವರುಷದ ಸತ್ವಪೂರ್ಣ 
ಇತಿಹಾಸ ಹೊಂದಿದ ಅಸ್ಮಿತೆಯ ಭಾವ,
ನರನಾಡಿಗಳು ಪುಟಿದೇಳುವ 
ಅನನ್ಯ ಭಾವ .
ಇಲ್ಲಿ ಸಲ್ಲುವವರು 
ಎಲ್ಲಾ ಕಡೆ ಸಲ್ಲುವರು. 
ಇಲ್ಲಿಂದಲೆ ಜ್ಞಾನ ಕಲಿತು, 
ಕಲಿಸಿದಂತೆ ನಟನೆ ಮಾಡಿದರು.
ಚರಿತ್ರೆಯ ಪುಟವೊಮ್ಮೆ ನೋಡಿ 
ಇಲ್ಲದಿದ್ದರೆ ಮತ್ತೆ ಕಲಿಸಲು 
ಅವರೆ ಬರಬೇಕಾದೀತು.

1 comment:

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...