Wednesday, June 22, 2022

ನನಗೂ ಕಲಿಸು ಯೋಗ

* ನನಗೂ ಕಲಿಸು ಯೋಗ *

ನಾ ಕಲಿಯಬೇಕು ಮಗುವೆ.! 
ನಗುತ ಬಾಳುವ,ನೊಗವ ಎಳೆವ
ಜಗದೊಳಗೆ ಬಾಗುವ  
ಮಗ್ದ ನಿನ್ನ ಯೋಗ ಭಾವ.!!

ನಾಳೆಗಳ ಸಂತೆ ನಿನಗಿಲ್ಲ ಚಿಂತೆ
ನಳಿನಳಿಸುವ ನೀ ಪುಷ್ಪದಂತೆ
ಬೆಳಕು ನೀಡುವ ದೀಪದಂತೆ 
ಮಳೆ ನೀಡುವ ಮೋಡದಂತೆ !!

ಹರನ ಮರೆತು ತಿರುಗಿತು ಚಿತ್ತ 
ಹರಿಯಿತು ಲೋಭ ಸಂಸಾರದ ಸುತ್ತ
ಮರಳಿ ಬರುವುದೇನು ಇವತ್ತ
ಕೆರಳಿಸಬೇಡ ಮೋಹ ಮತ್ತೆ !!
  
ಮೇಲೆ ಬರಲು ತಿರುಗಿದೆ 
ಮಾಲೆಗಳ ಸುತ್ತ ಮುತ್ತ.
ನೆಲದ ಮೇಲಿರಲಿಲ್ಲ ಚಿತ್ತ
ಮೈಮೇಲೆಳದು ನಾನು ಸತ್ತೆ.!!

ನಿಸ್ವಾರ್ಥ ನಿಗರ್ವ ನಿಶ್ಚಲ
ನೀ ನೀಡುವ ಸಂದೇಶ 
ನನಗಲ್ಲದೆ ಇನ್ನಾರಿಗೆ ಮತ್ತೆ ? 
ಬರಿ ಕೂಡಿ ಕಳೆದೆ ದಿನನಿತ್ಯ !!

ನನಗೂ ಕಲಿಸಬಾರದೆ 
ನಿನ್ನ ನಿಷ್ಕಲ್ಮಶ ಭಾವ
ನಿನಗೆ ಸರಿ ಸಮವಿಲ್ಲ 
ಇರುವನೇನು ಬೇರೆ  ದೇವ !!

ಧ್ಯಾನದಲ್ಲಿ ಮೌನ ಗಾನ 
ದಾನವನು ತಿಳಿದಾಗ ಅಭಿಯಾನ 
ತಿಳಿದು ಮಾಡಿದರೆ ಯೋಗ 
ಅರಿಯದೆ ಮಾಡಿದರೆ ರೋಗ !!

1 comment:

  1. ಗೌಡ್ರೆ ಯೋಗ ಕಾವ್ಯ ತುಂಬಾ ಚೆನ್ನಾಗಿದೆ *ಕಲಿತರೆ ಯೋಗ ಅವರಿಗಿಲ್ಲ ರೋಗ * ಎಂಬ ಪಾಠ ಅವನಿಂದ ಕಲಿತಾಂತಾಯಿತು.

    ReplyDelete

"ಹೆಮ್ಮೆಯ ಯೋಧರು ನಮ್ಮಯ ನೆಮ್ಮದಿ"

ಶಾಂತಿ ಮಂತ್ರ ಪಠಿಸುವ ಶಾಲೆಯ ಕ್ರಾಂತಿಯ ಗೀತೆಯ ಹಾಡುವ ಕಲಿಗಳು ಕೆದುಕದೆ ಕದನ ಮಾಡದ ಹುಲಿಗಳು ಭಾರತದ ಯೋಧರು ಭಾಗ್ಯವಿದಾತರು॥ ಹೆತ್ತವರ ಮಮತೆ ಮನದಲ್ಲಿ ನೆಟ್ಟು ಮಡದಿಯ ಪ್...