Tuesday, June 28, 2022

ಎತ್ತಿನಮವಾಸ್ಯೆ

(ಮಣ್ಣು)ಎತ್ತಿನಮವಾಸ್ಯೆ

ಬಿತ್ತಿ ಬೆಳೆಯಲೆತ್ತಾಗಿ
ಸತ್ಯ ಕಾಮನ ಜೊತೆಯಾಗಿ !
ಕಷ್ಟದಲ್ಲಿ ಬಂಡಿ ಎಳೆದು
ಇಷ್ಟಗಳ ಖಂಡೆಯಾದೆ ದೊರೆಯೆ ! 
 
ನನ್ನ ಯೋಗಿ ನೀನಿಂದು 
ಸಣ್ಣ ಮಣ್ಣಿನ ದೇವರಾದೆ !
ನೀನಿತ್ತ ಅನ್ನ ನನ್ನವರಿಗೂ ಹಾಕಿ  
ನಾ ದಾನಿ, ನನಗದು ಹೊರೆಯೆ !

ಹತ್ತಿ ಹೊಡೆದೆ ಬಿತ್ತಿ ಬೆಳೆದೆ 
ಕತ್ತು ಬಾಗಿಸಿ ನೀ ದುಡಿದೆ /
ಕತ್ತು ಹಿಸುಕಿದರೂ ಸತ್ತು ಬದುಕಿದೆ
ಸಹಿಸಿ ಸಂತಸ ನೀಡದ್ದು ಮರೆಯೆ !

ಕಡೆಗಾಳು ನೀನುಂಡು 
ಹೆಡಗಿ ಗೊಬ್ಬರ ನೀಡಿ /
ಗುಡಿ ಗೋಪುರಕ್ಕಿಂತ 
ಮಿಗಿಲಾದೆ ದೊರೆಯೆ !

ಮಣ್ಣಲ್ಲಿ  ಮಣ್ಣಾಗಿ ಹೊನ್ನಾದೆ
ಕಣ್ಣು ಕಾಣದೆ ನಾ ನಿನ್ನ ಮಾರಿದೆ /
ನನ್ನ ವರೆ ಕನ್ನ ಹಾಕಿದರೆನ್ನ ಭಾವಕ್ಕೆ  
ಇನ್ನು ಮರೆತರಿಲ್ಲ ಕ್ಷಮೆ ಜಡ ದೇಹಕ್ಕೆ!

ನೀ ಮೆರೆದ ಊರೆ ಸ್ವರ್ಗ ದಾರಿ 
ನಾ ಮರೆತರೆ ಮನವೆ ನರಕದೇರಿ/
ನನ್ನ ನಾರಿತು ಪೂಜಿಸುತಲಿರುವೆ
ಬೆಳಕು ನೀಡಿದೆನ್ನ ಪರೋಪಕಾರಿ!

No comments:

Post a Comment

ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...