ಸೇವಾ ನಿವೃತ್ತಿಗೆ ಪ್ರೀತಿಯ ಸನ್ಮಾನ
ಹಾಗೂ
ಶುಭ ಕೋರುವ ಸಮಾರಂಭ
ಸರಕಾರಿ ಸೇವೆಗೆ ಸೇರಿದ ಮೇಲೆ ಸರ್ವ ನೌಕರರಿಗೆ ಸೇವೆಯಿಂದ ನಿವೃತ್ತಿ ಇದ್ದದ್ದೆ, ಆದರೆ ಪ್ರವೃತ್ತಿಗೆಲ್ಲಿದೆ ನಿವೃತ್ತಿ. ವೃತ್ತಿ ಜೀವನದಲ್ಲಿ ಅಳವಡಿಸಿಕೊಂಡ ಒಳ್ಳೆಯ ಪ್ರವೃತ್ತಿಗಳು ಅವು ಬಾಕಿ ಉಳಿದ ಬದುಕಿನ ಬುತ್ತಿಗಳು ಸಂತೋಷದ ಬದುಕಿನ ಸೋಪಾನಗಳು ನಾವು ಗಳಿಸಿದ ಹಣ, ಆಸ್ತಿ ಸಂಪತ್ತು ನಮ್ಮನ್ನು ಸಂತಸದಿಂದ ಇಡಲಾರವು. ಬಹುಶಃ ಈ ಮಾತನ್ನು ಬಹುತೇಕರು ನಂಬಲಾರರು ಏಕೆಂದರೆ ಹಣವಿದ್ದರೆ ಮಾತ್ರ ಸಂಬಂಧಿಕರ ಪ್ರೀತಿ, ಆಸ್ಪತ್ರೆಗಳ ಆರೈಕೆ ಸಿಗಬಹುದು ಎನ್ನುವುದು ಅವರ ತರ್ಕ ? ಅದು ಅರ್ಧ ಸತ್ಯ ವಾಗಿರಲು ಸಾಕು ! ಅದರಾಚೆ ಇರುವ ಸತ್ಯವೆ ಬೇರೆ ಇದೆ.ನಾವು ಅಳವಡಿಸಿಚೊಂಡಿರವ ಪ್ರವೃತ್ತಿ ಗಳು ನಮ್ಮ ಬದುಕಿನ ದಿಕ್ಕುನ್ನು ಬದಲಿಸಿ ಸಂತೃಪ್ತಿ ಜೀವನದ ಮೆಟ್ಟಲುಗಳಾಗುವದರಲ್ಲಿ ಯಾವುದೆ ಸಂಶಯವಿಲ್ಲ ....ಪ್ರವೃತ್ತಿ ಗಳು ಎಂದರೇನು? ಯಾವಾಗಲೂ ಧನಾತ್ಮಕ ಚಿಂತನೆಗಳು ಅಳವಡಿಸಿಕೊಂಡಿರುವುದು ಪ್ರವೃತ್ತಿ ಯಲ್ಲದೆ ಇನ್ನೇನನ್ನಲು ಸಾಧ್ಯ ? ಇಲ್ಲಿಯವರೆಗೆ ಪೀಠಿಕೆ ಹಾಕಿದ ಉದ್ದೇಶವೇನೆಂದರೆ ನಮ್ಮದೆ ಸಂಸ್ಥೆಯಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ, ಸರಕಾರಿ ಸೇವೆಯಿಂದ ನಿವೃತ್ತಿ ಯಾಗಲಿರುವ ಶ್ರೀ ಸದಾಶಿವ ಸೂಳಿಭಾವಿಯವರ ಕುರಿತು ಎರಡು ಮಾತು ಬರೆಯಬೇಕೆನಿಸಿತು ಹಾಗಾಗಿ ಮೊಬೈಲ್ ಕೈಯಲ್ಲಿ ಹಿಡಿದೆ. ಅವರು ನಮ್ಮ ಸಂಸ್ಥೆಯಲ್ಲಿ ಏಳೇ ತಿಂಗಳು ಸೇವೆ ಸಲ್ಲಿಸಿ ನಿವೃತ್ತಿ ಯಾಗುತ್ತಿದ್ದರೂ ಭಾವಿ ನೌಕರರ ಭವಿಷ್ಯದ ಬದುಕಿನ ಸಂತೃಪ್ತಿಯ ಕರ್ತವ್ಯದ ಮಾರ್ಗ ಸೂಚಿ. ಅವರ ಬದುಕು, ಕರ್ತವ್ಯ ನಿಷ್ಠೆ, ತಾಳ್ಮೆ, ಸಹಕಾರ ಗುಣ ಎಲ್ಲರನ್ನೂ ಜೊತೆಯಾಗಿ ಕರೆದುಕೊಂಡು ಹೋಗುವ ಗುಣ ನಮ್ಮ ನ್ನೆಲ್ಲ ಒಂದು ಕ್ಷಣ ವಿಚಲಿತರನ್ನಾಗಿ ಮಾಡಿತು . ಇನ್ನೊಂದಿಷ್ಟು ದಿನ ನಮ್ಮ ಜೊತೆ ಇದ್ದರೆ ? ಹಿರಿಯಣ್ಣನಂತೆ ಮಾರ್ಗ ದರ್ಶನ ಪಡೆಯುತ್ತಿದ್ದೆವು ಅಂತಲ್ಲವೆ ? ಸರಕಾರದ ನಿಯಮಗಳು ಪಾಲಿಸಲೇಬೇಕು.ಇರಲಿ ತಾವು ಕಲಿತ ಸಂಸ್ಥೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆಯಿಂದ ನಿವೃತ್ತಿಯಾಗುತ್ತಿರುವುದು ಕೆಲವೆ ಕೆಲವು ಪುಣ್ಯ ವಂತರಿಗೆ ಸಿಗುವ ಸೌಭಾಗ್ಯ ಗಳಲ್ಲಿ ಒಂದು. ಅದು ಶ್ರೀ ಸದಾಶಿವ ಸೂಳಿಭಾವಿಯವರಿಗೆ ಸಿಕ್ಕಿದೆ. ಬಹುಶಹ ಇದು ಒಂದು ಅಪರೂಪದ ಘಟನೆ,ಅದನ್ನು ಕಣ್ಣು ತುಂಬಿ ಕೊಳ್ಳುವ ಸೌಭಾಗ್ಯ ನಮ್ಮದು. ನಾವು ಇವತ್ತಿನ ದಿವಸ ಸೇವೆಯನ್ನು ಪೂರ್ತಿಯಾಗಿ ಮುಗಿಸುವದೆ ಒಂದು ಸಾಧನೆಯಾಗಿದೆ ಅಲ್ಲವೆ? , 60 ವರ್ಷಗಳ ವರೆಗೆ ಸೇವೆ ಸಲ್ಲಿಸಲು ಆರೋಗ್ಯ ಚನ್ನಾಗಿ ಇರಬೇಕು,!ಅಂತಹ ಆರೋಗ್ಯ ಅವರಿಗಿದೆ . ಚನ್ನಾಗಿದ್ದರೆ ಸಾಲದು, ಉದ್ಯೋಗ ಮಾಡಲು ಅವಾಕಾಶ ಚೆನ್ನಾಗಿ ಇರಬೇಕು, ಅಂತಹ ಅವಕಾಶವೂ ಅವರಿಗೆ ಸಿಕ್ಕಿದೆ. ಇದೆ ಸಂಸ್ಥೆಯಲ್ಲಿ ಓದಿದ, ಬದ್ದತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ , ಕಾಯಕ ಯೋಗಿಗಳಿರುವ, ಸಹೋದ್ಯೋಗಿಗಳು ನಮ್ಮ ಸಂಸ್ಥೆಯಲ್ಲಿ ಅವರಿಗೆ ಸಿಕ್ಕಿದ್ದಾರೆ. ಹಾಗೆಯೇ ಒಂದು ಮಾತಿದೆ ಪ್ರತಿ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಅಂತಾ,ಸುಖ ದುಃಖ ಗಳಲ್ಲಿ ಭಾಗಿಯಾಗಿ ಪ್ರಗತಿಗೆ ಊರುಗೋಲಾಗಿರುವಂತಹ ಸಹ ಧರ್ಮಿನಿಯೂ ಅವರಿಗೆ ಸಿಕ್ಕಿದ್ದಾಳೆ.ಹೀಗಾಗಿಯೇ ಅವರಿಗೆ ಸಾಧನೆ ಮಾಡಲು ಸಾಧ್ಯ ವಾಗಿದೆ. ಪ್ರೌಢಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಪ್ರಾಚಾರ್ಯರಾಗಿ ನಿವೃತ್ತಿಯಾಗುವುದು ಸಣ್ಣ ವಿಷಯವೇನಲ್ಲ ಪ್ರಾಚಾರ್ಯರ ಹುದ್ದೆ, ಅಂದರೆ ಪ್ರಧಾನ ಆಚಾರ್ಯ ,ಅಲ್ಲವೆ ! ಆಡಳಿತದಲ್ಲಿ ನ್ಯಾಯಾಧೀಶನ, ಅಸಿಸ್ಟೆಂಟ್ ಕಮೀಷನರ್ ಹುದ್ದೆಗೆ ಸಮಾನ ಹುದ್ದೆ, ಆ ಹಂತದ ವರಿಗೆ ಬಂದು ತಲುಪಲು ಅವರು ತುಳಿದ ದಾರಿ ಅದು ಹೂವಿನ ಹಾಸಿಗೆಯೇನಲ್ಲ .ಏಕೆಂದರೆ ಅವರೆ ಹೇಳಿದ ಹಾಗೆ ಗುಳೇದಗುಡ್ಡದ ಪಕ್ಕದ ಊರಾದ ಶಿರೂರಿನಿಂದ ಕಾಲುದಾರಿಯಲ್ಲಿ ಗುಡ್ಡ ಏರಿ, ಗುಡ್ಡ ಇಳಿದು ಮಠದಲ್ಲೂ ,ಯಾವುದೇ ಸಣ್ಣ ಮನೆಗಳಲ್ಲೊ, ಕಟಗ ರೊಟ್ಟಿ ಚಟ್ನಿ, ತಂಗಳ ಊಟ ಮಾಡಿ ಕಲಿಸಿದ ಗುರುಗಳಗೆ ,,ಹಡೆದ ತಂದೆ ತಾಯಿಗೆ ಊರಿಗೆ ಹೆಸರು ತಂದ ಸಾಧಕನ ಸಾಧನೆ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಿಗೆ ಒಂದು ಮಾದರಿಯೇ ಸರಿ.ಆ ಕಾರಣ ಈ ವರ್ಷ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭಕ್ಕೆ ಬಡತನದಲ್ಲಿ ನೊಂದು ಬೆಂದು ಕನ್ನಡ ಆಸ್ತಿ ಯೆ ಆಗಿ ಬೆಳೆಯುತ್ತಿರುವ ಗುಳೇದಗುಡ್ಡದ ಬಂಡಾರಿ ಕಾಲೇಜಿನ ಹೆಮ್ಮೆಯ ವಿದ್ಯಾರ್ಥಿ...ಸದ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ!! ವಾಯ್ ಎಮ್ ಯಾಕೊಳ್ಳಿಯವರನ್ನು ಅತಿಥಿಗಳಾಗಿ ಕರೆಯಿಸಿ ಸಾಧಕರನ್ನು ಮಾತುಗಳಲ್ಲಿ ಹೇಳದೆ ಕೃತಿಯಾಗಿ ಪರಿಚಯಿಸಿದ ಅವರ ಹೃದಯವಂತಿಕೆಯನ್ನು ಶಬ್ದಗಳಿಂದ ಸೆರೆಹಿಡಿಯಲು ಸಾಧ್ಯವಿಲ್ಲ. ಅವರಿಗೆ ಶುಭಕೋರುವ ಸಮಾರಂಭಕ್ಕೆ ತಮ್ಮೆಲ್ಲರ ಹಾರೈಕೆ ಇರಲಿ ಶುಭ ರಾತ್ರಿ 🙏🙏
No comments:
Post a Comment