Saturday, October 19, 2024

ಈ ಮುನಿ ಭಾವ ಯಾನಿ

ಹೆಂಡತಿಯ ಹಿಡಿತ ತಪ್ಪಿದವನಲ್ಲ
ಜಡೆ ಬಿಟ್ಟು ಕೊಡೆ ಹಿಡಿದವನಲ್ಲ
ತೊಡೆ ತಟ್ಟಿ ತಿರುಗಿ ನಡೆದವನಲ್ಲ 
ಕಂಡುಂಡುಟ್ಟವನು ಜಗದ ಧನಿ,ದ್ವನಿ ॥

ಯಾನದಲ್ಲಿ ಮಾನ ಉಳಿಸಿಕೊಂಡವನು
ಹಣವಿದ್ದು ಗುಣವುಳಿಸಿಕೊಂಡವನು
ಧ್ವನಿ ಇದ್ದು ಮೌನಿ, ಮಾನ್ಯವಾದವನು
ಕನಿ ಕೇಳದೆ ಮನಕೇಳುವನು ಈ ಮುನಿ ॥

ಭಾವಗಳಿಗೆ ಜೀವ ತುಂಬುವವನು
ಕಾಯ ಕಮಂಡಲ, ಕರ್ಮ ರುದ್ರಾಕ್ಷಿ
ಧರ್ಮ ವೊಂದೆ ಉದರದ ಭಕ್ಷ ಭೋಜ್ಯ
ಬದುಕಿನ ಮರ್ಮ ತಿಳಿದವನು ಈ ಮುನಿ ॥

ಬಣ್ಣ ಬದಲಿಸದೆ ಉಣ್ಣುವವನು
ಕಣ್ಣೊಳಗಿದ್ದು ಹೃದಯದಿಂದೇಳುವನು
ತನ್ನವರು ಭಿನ್ನರೆಲ್ಲರೂ ಇವನಿಗೊಂದೆ
ಬೆಣ್ಣೆಯಂತೆ ಕರಗುವನು ಈ ಭಾವಯಾನಿ ॥







ಗುಳೇಗುಡ್ಡದ ಇತಿಹಾಸ

    ಪ್ರಸ್ತುತ ಗುಳೇಗುಡ್ಡ,ಬಾಗಲಕೋಟೆಯ ಜಿಲ್ಲೆಯಲ್ಲಿ ಬರುವ ಒಂದು ನೂತನ ತಾಲೂಕಾ ಕೇಂದ್ರ .ಆದರೆ ಇದು ಮೊದಲು ಬಾದಾಮಿ ತಾಲೂಕಿನ ಹೋಬಳಿಯಾಗಿತ್ತು ಈ ತಾಲೂಕು 1997 ರ ಪೂರ್ವದಲ್ಲಿ ಬಿಜಾಪುರ ಜಿಲ್ಲೆಯಲ್ಲಿರುವ ನಗರವಾಗಿತ್ತು. ಭೌಗೋಳಿಕವಾಗಿ ಗಮನಿಸುವದಾದರೆ.16.05. ಡಿಗ್ರಿ ಉತ್ತರ ಅಕ್ಷಾಂಶ ಹಾಗೂ 75.8 ಪೂರ್ವ ರೇಖಾಂಶ ದಲ್ಲಿದೆ 2011 ರ ಜನಗಣತಿಯ ಪ್ರಕಾರ ಇದರ ಜನಸಂಖ್ಯೆಯ 33,991.ಈ ನಗರದ ಸಾಕ್ಷರತೆ ಪ್ರಮಾಣ ಶೇಕಡ 76 ರಷ್ಟಿದೆ.

ಐತಿಹಾಸಿಕ ಮಹತ್ವ. 
        ಈಗಿರುವ ಗುಳೇಗುಡ್ಡ ತನ್ನ ಉತ್ತರಕ್ಕೆ ಹಬ್ಬಿರುವ  ಪೂರ್ವ ಪಶ್ಚಿಮದ ಗುಡ್ಡದ ಮೇಲಿತ್ತು ಕಾಲಾನಂತರ ಅದು ಕೆಳಗಡೆ ಬಂದಿದೆ ಎನ್ನುವುದಕ್ಕೆ ಗುಡ್ಡದ ಮೇಲೆ ಇರುವ ಬಲವಾದ ಸಾಕ್ಷಿಗಳು ಅವಶೇಷಗಳ ರೂಪದಲ್ಲಿವೆ.ಈ ಪ್ರದೇಶದ ಐತಿಹ್ಯ ಬಹು ಪುರಾತನವಾದದ್ದು. ಇದಲ್ಲದೆ ಪ್ರಾಗಿತಿಹಾಸದ ನೆಲೆಗಳು ಗುಳೇಗುಡ್ಡ ಪರಸರದಲ್ಲಿದ್ದವು ಎನ್ನುವುದಕ್ಕೆ ಪ್ರಾಚೀನ ಇತಿಹಾಸದ ಉಲ್ಲೇಖಗಳು ಸಾಕ್ಷಿ. ಈ ಪ್ರದೇಶದ ಸಮೀಪವಿರುವ ಕುಟಕನಕೇರಿ, ಲಾಯದಗುಂದಿ, ನಿಂಬಲಗುಂದಿ ಗಳು ಗುಳೇಗುಡ್ಡ ಪರಿಸರದ ಇತಿಹಾಸವನ್ನು ಪ್ರಾಗಿತಿಹಾಸ ಕಾಲಘಟ್ಟಕ್ಕೆ ತಂದು ನಿಲ್ಲಿಸುತ್ತವೆ. ತದನಂತರದ ದಿನಮಾನಗಳಲ್ಲಿ ಗುಳೇಗುಡ್ಡ ನಗರ ಗುಡ್ಡದ ಮೇಲೆಯೇ ವಿಕಸನವಾಗಲು ಕಾರಣವೆಂದರೆ ದಾಳಿಕೋರರಿಂದ ರಕ್ಷಣೆ ಪಡೆಯಲು ಊರುಗಳನ್ನು ಗುಡ್ಡದ ಮೇಲೆ ನಿರ್ಮಾಣ ಮಾಡುತ್ತಿದ್ದರು. ಮಧ್ಯ ಕಾಲಿನ ಭಾರತದ ಇತಿಹಾಸದಲ್ಲಿನ ಬೀಕರ ದಾಳಿಗಳು ಈ ಮಾತನ್ನು ಇನ್ನಷ್ಟು ರುಜುವಾತುಪಡಿಸುತ್ತವೆ.
              ದೇಹಲಿ ಸುಲ್ತಾನರ ಖಿಲ್ಜಿವಂಶದ ಅಲ್ಲಾವುದ್ದೀನ ಖಿಲ್ಜಿ ದಕ್ಷಿಣ ಭಾರತದ ಮೇಲೆ ಬಹು ಬೀಕರವಾಗಿ ದಾಳಿ ಮಾಡಿದ, ಸಂಪತ್ತನ್ನು ದೋಚಿದ .ಆದರೆ ದಕ್ಷಿಣದ ಆಡಳಿತದ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ.ಆದರೆ ತೊಘಲಕ ಸಂತತಿಯ ಮಹಮದ್ ಬಿನ್ ತೊಘಲಕ ದಕ್ಷಿಣದ ಜವಾಬ್ದಾರಿಯನ್ನು ಹೊರಲು ಹೋಗಿ ವಿಫಲನಾದ, ಫಲ ಶೃತಿಯಾಗಿ 1336 ರಲ್ಲಿ ವಿಜಯನಗರ 1347 ರಲ್ಲಿ ಬಹಮನಿ ಸಾಮ್ರಾಜ್ಯ ಗಳು ಉದಯವಾದವು.ಇವುಗಳ ಸಂಘರ್ಷ ದ ನಂತರ 1481ರಲ್ಲಿ ಬಹಮನಿ ಸಾಮ್ರಾಜ್ಯ ವಿಘಟನೆಯಾದರೆ 1565 ರಲ್ಲಿ ವಿಜಯನಗರದ ಪತನವಾಯಿತು ಈ ಸಂದರ್ಭದಲ್ಲಿ 1489 ರಲ್ಲಿ ಯೂಸುಫ್ ಆದಿಲ್ ಷಾ ನಿಂದ ಒಂದು ರಾಜ್ಯ ಸ್ಥಾಪನೆಯಿತು, ಈ ಮನೆತನವೇ ಬಿಜಾಪುರದ ಆದಿಲ್ ಷಾಹಿಗಳು.
           ಬಿಜಾಪುರ ಆದಿಲ್ ಷಾಹಿ ಮನೆತನದಲ್ಲಿ ಅತ್ಯಂತ ಶ್ರೇಷ್ಠ ದೊರೆಯೇ ಎರಡನೆಯ ಇಬ್ರಾಹಿಂ ಆದಿಲ್ ಷಾ ಈತ ಜಗದ್ಗುರು ಬಾದಷಾ ಎಂದು ಕರೆಯಿಸಿಕೊಂಡಿದ್ದಾನೆ ಇವನು 1580 ರಲ್ಲಿ ಗುಳೇಗುಡ್ಡ ಕೋಟೆಯನ್ನು ಕಟ್ಟಿಸದ ಎಂಬ ಉಲ್ಲೇಖವಿದೆ.ಅದು ಈಗ ಕಮಾನಿನ ಆಕಾರದ ಬಾಗಿಲು, ವಿನಾಶದ ಅಂಚಿನಲ್ಲಿರುವ ಕೋಟೆಯ ಅಳಿದುಳಿದ ಗೆರೆಗಳು  ಕೋಟೆ ಇತ್ತು  ಎನ್ನುವುದನ್ನು ಒತ್ತಿ ಹೇಳುತ್ತದೆ 1700 ರಿಂದ 1710 ರ ಸುಮಾರಿಗೆ ದಕ್ಷಿಣದ ಜಲಾಶಯ ಉತ್ತರಕ್ಕೆ ಊರು ನಿರ್ಮಾಣ ವಾಯಿತು ಎಂಬ ಉಲ್ಲೇಖವಿದೆ ಗುಳೆ ಬಂದವರ ಊರು ಗುಳೇದಗುಡ್ಡ ವಾಯಿತೆಂದು ವಾದವಿದೆ. ಇನ್ನು ಕೆಲವರು ಗೂಳಿಯಿಂದ ಈ ಹೆಸರು ಬಂತು ಎನ್ನುವವರು ಉಂಟು.
.          ವಿಜಯನಗರದ ಪತನಾನಂತರದ ಕಾಲಘಟ್ಟದಲ್ಲಿ ಕೆಳದಿ,ಚಿತ್ರದುರ್ಗ, ಮೈಸೂರು ರಾಜ್ಯಗಳು ಪ್ರವರ್ಧಮಾನಕ್ಕೆ ಬಂದರೂ ಅಂತಿಮವಾಗಿ 1761 ರಿಂದ 1799 ರ ಕಾಲಾವಧಿಯಲ್ಲಿ,ಮೈಸೂರಿನ ಆಡಳಿತಗಾರಾಗಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು  ಇವತ್ತಿನ ಕರ್ನಾಟಕದ ಬಹು ಭಾಗದ ಆಡಳಿತವನ್ನು ಮೈಸೂರ ರಾಜ್ಯ ದಿಂದ ಆಡಳಿತ ಮಾಡಿದರು, ಆಗ ಗುಳೇಗುಡ್ಡವು ಮೈಸೂರಿನ ನಿಯಂತ್ರಣಕ್ಕೆ ಬಂದಿತು ಆದರೆ ಅದು ಬಹುಕಾಲವಿರದೆ ಮರಾಠರ,ಮೈಸೂರಿನ ದಾಳಿಗೆ ಬಲಿಯಾಯಿತು 1750 ರಲ್ಲಿ ಒಮ್ಮೆ ಈ ಊರು ದಾಳಿಗೊಳಗಾದರೆ 1787 ರಲ್ಲಿ ಮರಾಠರು, ಟಿಪ್ಪು ನಡುವೆ. ಗಜೇಂದ್ರಗಡ ಒಪ್ಪಂದವಾದಾಗ ಗುಳೇಗುಡ್ಡ ಟಿಪ್ಪುವಿಗೆ ಸೇರಿತು.ಹೀಗಾಗಿ ಮರಾಠರಿಂದ ದಾಳಿಗೊಳಗಾಯಿತು.1799 ರಲ್ಲಿ ಟೀಪ್ಪುವಿನ ಮರಣದೊಂದಿಗೆ ಬ್ರಿಟಿಷರು ತಮಗೆ ಸಹಾಯ ನೀಡಿದ ನಿಜಾಮ, ಮರಾಠರಿಗೆ ಮೈಸೂರು ರಾಜ್ಯ ವನ್ನು ವಿಭಜಿಸಿ ಒಂದು ಭಾಗವನ್ನು  ಮರಾಠರ ಅಧೀನಕ್ಕೆ ನೀಡಿದರು ಆಗ ಗುಳೇಗುಡ್ಡ ಮತ್ತೆ ಮರಾಠರ ಅಧೀನಕ್ಕೆ ಬಂದಿತು.
          ಮರಾಠರು ತಮ್ಮ ಆಡಳಿತದ ಅನುಕೂಲಕ್ಕೆ ರಾಜ್ಯ ವನ್ನು ಕ್ರಮವಾಗಿ ಸ್ವರಾಜ್ಯ, ಪ್ರಾಂತ್, ಪರಗಣಗಳು, ಗ್ರಾಮಗಳಾಗಿ ವಿಂಗಡಿಸಿದ್ದರು.ಪರಗಣದ ಮುಖ್ಯ ಸ್ಥರೇ ದೇಸಾಯಿಗಳು.ಅಂತಹ ದೇಸಾಯಿಗಳಲ್ಲಿ ಕೋಟೆಕಲ್ ದೇಸಾಯಿಗಳು ಒಬ್ಬರು ಅವರು ಥಾಮಸ್ ಮನ್ರೋನ ಸಹಕಾರ ದೊಂದಿಗೆ ಗುಳೇಗುಡ್ಡ ಪಟ್ಟಣವು ಅಭಿವೃದ್ಧಿಯಾಗಲು ಕಾರಣೀಕರ್ತರಾದರು.
         ಬದಲಾದ ಕಾಲಘಟ್ಟದಲ್ಲಿ ಅಂದರೆ 1818 ರ ಸುಮಾರಿಗೆ ಮರಾಠರ ಪ್ರಾಬಲ್ಯವು ಕುಸಿಯಿತು. ಫಲಶೃತಿಯಾಗಿ ಬ್ರಿಟಿಷರು ಆಡಳಿತ ಮಾಡುತ್ತಿದ್ದ ಬಾಂಬೆ ಪ್ರಾಂತ್ಯದ ಅಡಿಯಲ್ಲಿ ಗುಳೇಗುಡ್ಡ ಬಂದಿತು.ವ್ಯಾಪಾರ ವಾಣಿಜ್ಯದ ಬೆಳವಣಿಗೆ ಗುಳೇಗುಡ್ಡ ನಗರವನ್ನು ಜನದಟ್ಟಣೆಯ ಪ್ರದೇಶವನ್ನಾಗಿ ಮಾಡಿತು. ಮಿಶನರಿಗಳು ತಂದ ಶಿಕ್ಷಣ ಹಾಗೂ ಧಾರ್ಮಿಕ ಚಟುವಟಿಕೆಗಳ ಫಲಶೃತಿ ಕ್ಯಾಥೊಲಿಕ್ ಹಾಗೂ ಪ್ರೊಟೆಸ್ಟಂಟ ಪಂಥಗಳು ಗುಳೇಗುಡ್ಡ ಪರಿಸರದಲ್ಲಿ ಸ್ಥಾಪನೆಯಾದವು.
ಗುಳೇಗುಡ್ಡ ಇತಿಹಾಸದಲ್ಲಿ ಚರ್ಚನ ಪಾತ್ರ 
      ಭಾರತದ ಆಧುನಿಕ ಶಿಕ್ಷಣದ ಇತಿಹಾಸದಲ್ಲಿ 1835 ರ ಮೇಕಾಲೆ ವರದಿ  ಮತ್ತು 1854 ರ ಚಾರ್ಲ ವುಡ್ ನ ವರದಿ ಅತ್ಯಂತ ಮಹತ್ವದ ಅಧ್ಯಾಯಗಳು.ವುಡ್ ವರದಿ ಭಾರತೀಯರ ಶಿಕ್ಷಣಕ್ಕಾಗಿ ಶಾಲಾ ಕಾಲೇಜುಗಳನ್ನು ತೆಗೆಯಲು ಅವಕಾಶ ಕಲ್ಪಿಸಿತು ಆಗ ಧಾರವಾಡ, ವಿಜಾಪುರ, ಗದಗ_ಬೆಟಗೇರಿ ಸುಮಡ್ಡಿ ಮುಸ್ಟಿಗೇರಿ ಮುಂತಾದ ಕಡೆ ಮಿಸಿನರಿಗಳು ಧರ್ಮ ಹಾಗೂ ಶಿಕ್ಷಣ ಪ್ರಚಾರ ಮಾಡಿದರು ಸಾ .ಶ.1855 ರಲ್ಲಿ ರೆವರೆಂಡ್ ರೇಜ ಹಾಗೂ ಧೂಮ ಅವರು ಆಗಮಿಸಿ ಮಿಷನರಿ ಬಂಗಲೆಯನ್ನು ಕಟ್ಟಿಸಿದರು.ಅಲ್ಲದೆ ನೇಕಾರರಿಗೆ ಮಗ್ಗಗಳ ಕೋಣೆ ಕಟ್ಟಿಸಿ ಉತ್ತೇಜನ ನೀಡಿದರು ಇದೆ ಸಂದರ್ಭ ದಲ್ಲಿಯೇ ಸಾ.ಶ.1858 ಸುಮಾರಿಗೆ  ಉತ್ತರ ಕರ್ನಾಟಕದಲ್ಲಿ ಮೊದಲು ಬಾರಿಗೆ  ಗುಳೇಗುಡ್ಡ ದಲ್ಲಿ ಬಾಸೆಲ್ ಮಿಸನ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಇದರ ಶ್ರೇಯಸ್ಸು ರೆ.ಜಿ.ಕ್ರಿಸ್ಜೆ ಮತ್ತು  ರೆ.ಸಿ.ವೈಗ್ಲೆಯವರಿಗೂ ಸಲ್ಲುತ್ತದೆ ಫಲಶೃತಿಯಾಗಿ ಆಧುನಿಕ ಶಿಕ್ಷಣದ ಗಾಳಿ ಗುಳೇಗುಡ್ಡ ಪರಿಸರದಲ್ಲಿ ಹರಿಡಿತು.ಅಲ್ಲದೆ ಕೃಪಾಲಯ ಎಂಬ ಸಂಸ್ಥೆಯ ಮೂಲಕ ಕುಷ್ಠ ರೋಗಿಗಳ ಉಪಚಾರ ಮಾಡಿದ್ದು.ಗೋಧಿನುಚ್ಚು,ಎಣ್ಣೆ ಆಳಿನ ರೂಪದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದು ಕೂಡಾ ಗುಳೇಗುಡ್ಡ ಅಭಿವೃದ್ಧಿಯ ವೇಗಕ್ಕೆ ಚೈತನ್ಯ ತುಂಬಿತು.
   ಅದೆ ರೀತಿಯಲ್ಲಿ ಕ್ಯಾಥೊಲಿಕ್ ಪಂಥವು ಕೂಡಾ ಸಾ ಶ.1867 ರಲ್ಲಿ ಫಾದರ್ ಫ್ರೆಂಕನ್ ಎಸ್ ಸೇರಾಸಟ್ ಆಗಮನವಾಯಿತು ಅವರು ಯೇಸುವಿನ ದೇವಾಲಯ ನಿರ್ಮಾಣ ಮಾಡಿದರು. ಅದೆ ಇಂದಿನ ನಿರ್ಮಲ ಮಾತಾ ದೇವಾಲಯ.ಸಾ ಶ. 1905 ರಲ್ಲಿ ಸೈಂಟ ಕ್ಸೇವಿಯರ ಸಂಸ್ಥೆಯ ಸ್ಥಾಪನೆಯಾಯಿತು ಇದು ಗುಳೇಗುಡ್ಡ  ಭಾಗದಲ್ಲಿ ಶಿಕ್ಷಣ ಹರಡಿ ಜನರನ್ನು ಸುಶಿಕ್ಷಿತರಾಗಲು ಶ್ರಮಿಸಿತು.

ಮಸ್ಜಿದ್ ಗಳ ಪಾತ್ರ 
ಗುಳೇಗುಡ್ಡ ದಲ್ಲಿ ವಿವಿಧ ಕಾಲಘಟ್ಟದಲ್ಲಿ ಸ್ಥಾಪನೆಯಾದ ಪ್ರಮುಖವಾದ ಏಳು ಮಸೀದಿಗಳಿದ್ದು, ಅವು ಬಡಿ ಮಸ್ಜಿದ್, ಜಾಮಿಯಾ ಮಸ್ಜಿದ್,ಮದಿನಲಾಲ ಮಸ್ಜಿದ್, ನಯಿಪೇಟ ಮಸ್ಜಿದ್,ಯಾಸ್ಜಿದ್ ಮಸ್ಜಿದ್,ಮಕ್ಕಾ ಮಸ್ಜೀದ್, ಬಾರಾ ಇಮಾನ ಮಸ್ಜಿದ್, ಇವುಗಳು ಮುಸ್ಲಿಮರಿಗೆ ಆಧ್ಯಾತ್ಮಿಕ  ಬದುಕು ರೂಢೀಸುವದರ ಜೊತೆಗೆ ಇತರೆ ಧರ್ಮದ ಜನರೊಂದಿಗೆ ಸಾಮರಸ್ಯ ದಿಂದ ಬದುಕಲು ಕಲಿಸುತ್ತಿವೆ.

ಮಠಗಳ ಪಾತ್ರ 
ಗುಳೇಗುಡ್ಡ ದಲ್ಲಿ ಹಲವಾರು ಜಾತಿ ಜನಾಂಗದವರು ನೆಲೆಗೊಂಡಿದ್ದಾರೆ ಅವರೆಲ್ಲರೂ "ಧರ್ಮೋ ರಕ್ಷತಿ ರಕ್ಷಿತಾಃ ಎನ್ನುವ ಸಿದ್ಧಾಂತ ದಲ್ಲಿ ನಂಬುಗೆ ಇಟ್ಟವರು ಇವರು ನಿತ್ಯ ಬೆಳಿಗ್ಗೆ ದೇವಸ್ಥಾನಗಳಿಗೆ ಹೋಗಿ ಪೂಜೆ ನೈವೇದ್ಯ ಮಾಡಿಸಿ ದೇವರ ಕೃಪೆಗೆ ಪಾತ್ರ ರಾಗುತ್ತಾರೆ.ಇಲ್ಲಿರುವ ಮಠಗಳು ಕೂಡಾ ಸಮಾಜಮುಖಿ ಕಾರ್ಯ  ಮಾಡುವದರ ಜೊತೆಗೆ ಜನರನ್ನು ಸನ್ಮಾರ್ಗದಲ್ಲಿ ನಡೆಸುತ್ತಿವೆ. ಪ್ರಮುಖ ಮಠಗಳೆಂದರೆ. 
ಮುರಗಘಾಮಠ : ಇದು ಅರಳಿ ಕಟ್ಟೆಯ ಹತ್ತಿರ ಇದ್ದು ಹನ್ನೆರಡನೆಯ ಶತಮಾನದಲ್ಲಿಯೇ ಸ್ಥಾಪನೆಯಾಗಿದೆ.  ಮಠದ ಪರಂಪರೆಯ ಶ್ರೀ ಮ.ನಿ.ಪ್ರ.ಮುರಘಿಶಾಂತವೀರ ದೇಶಿಕೇಂದ್ರ ಸ್ವಾಮಿಗಳಿಂದ ಹಿಡಿದು ಇಂದಿನ ಕಾಶಿನಾಥ ಮಹಾಸ್ವಾಮಿಗಳವರೆಗೆ ನಡೆದು ಬಂದಿದೆ. ಶ್ರೀಮುರುಘಿಶಾಂತವೀರ ದೇಶಿಕೇಂದ್ರ ಮಹಾಸ್ವಾಮಿಗಳು ಪಂಡಿತರಾಗಿದ್ದು ಹಮ್ಮೀರಕಾವ್ಯ ರಚಿಸಿದರು.ಶ್ರೀಮಠವು ಧಾರ್ಮಿಕ ಕಾರ್ಯಗಳಲ್ಲದೆ ಬಡಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆಯನ್ನು ಮಾಡಿದೆ.
ಗುರುಸಿದ್ಧೇಶ್ವರ ಮಠ : ಈ ಮಠವು ನಾಕಾದ ಹತ್ತಿರ ಉತ್ತರಾಭಿಮುಖವಾಗಿದ್ದು 1937 ಡಿಸೆಂಬರ 27 ರಂದು ಶ್ರೀ ಗುರುಸಿದ್ದ ಪಟ್ಟಾದಾರ್ಯರಿಂದ ಸ್ಥಾಪನೆಯಾಗಿದೆ.ಇವರು ಲಿಂಗೈಕ್ಯ ರಾದ ನಂತರ ಶ್ರೀ ಬಸವರಾಜ ಪಟ್ಟಾದಾರ್ಯ ಮಹಾಸ್ವಾಮಿಗಳು 1979 ರಲ್ಲಿ ಪೀಠಾಧ್ಯಕ್ಷರಾಗಿ ನೇಕಾರ ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುವುದಲ್ಲದೆ,ಮಾನವತ್ವದ ಸಾಕಾರ ಮೂರ್ತಿಯಾಗಿ ಸಕಲ ಜನಾಂಗದ ಪ್ರಗತಿಗೆ ಶ್ರಮಿಸುತ್ತಿದ್ದಾರೆ .
ಮರಡಿ ಮಠ :ಗುಳೇಗುಡ್ಡ ಮಧ್ಯ ಭಾಗದಲ್ಲಿರುವ ಈ ಮಠವು ತನ್ನ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಧಾರ್ಮಿಕ ಸಂಸ್ಕಾರ ಹಾಗೂ ಶ್ರಾವಣ  ಮಾಸದಲ್ಲಿ ಕೀರ್ತನೆ, ಸಾಮೂಹಿಕ ವಿವಾಹ ಮುಂತಾದ ಕಾರ್ಯಕ್ರಮ ಮಾಡುತ್ತದೆ.
ನೀಲಕಂಠೇಶ್ವರ ಮಠ : ಸಾ.ಶ.1937ರಲ್ಲಿ ಪ್ರಾರಂಭವಾದ ಈ ಮಠವು ದಸರಾ,ನವರಾತ್ರಿ ಉತ್ಸವದಲ್ಲಿ ದೇವಿಪುರಾಣ,ಕಾರ್ತಿಕೋತ್ಸವ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ.
ಅಕ್ಕಲಕೋಟ ಮಠ : ಗುಳೇಗುಡ್ಡ ದಲ್ಲಿ ಇಂಗ್ಲಿಷ ಹಾಗೂ ಸಂಸ್ಕೃತ ಶಿಕ್ಷಣ ಕ್ಕೆ ಆದ್ಯತೆ ನೀಡಿದ ಮಠಗಳಲ್ಲಿ ಇದು ಒಂದು ಈ ಮಠದ ಉದ್ದೇಶವೇ ಅದ್ವೈತ ಸಿದ್ಧಾಂತ ತತ್ವಗಳ ಪ್ರಚಾರವಾಗಿದೆ. 
ರಾಘವೇಂದ್ರ ಮಠ :1984 ರ ಅಕ್ಟೋಬರ 31 ರಲ್ಲಿ ಚೌಬಜಾರನಲ್ಲಿ ಸ್ಥಾಪನೆಯಾದ ಈ ಮಠವು ಬ್ರಾಹ್ಮಣರ ಆರಾಧ್ಯ ದೈವ ರಾಘವೇಂದ್ರ ಮಹಾಸ್ವಾಮಿಗಳದ್ದು.
ಒಪ್ಪತ್ತೇಶ್ವರ ಮಠ :ಹನ್ನೆರಡನೆಯ ಶತಮಾನದಲ್ಲಿ ಕಲ್ಯಾಣ ದಲ್ಲಿ ನೆಲೆಸಿದ್ದ ಶರಣರಲ್ಲಿ ಒಪ್ಪತ್ತೇಶ್ವರರು ಒಬ್ಬರು ಶ್ರೀ ಮ.ನ.ಪ್ರ.ಒಪ್ಪತ್ತೇಶ್ವರ ಶ್ರೀಗಳಿಂದ ಪ್ರಾರಂಭವಾಗಿ ಇಂದಿನ ಅಭಿನವ ಒಪ್ಪತ್ತೇಶ್ವರ ಶ್ರೀಗಳವರೆಗೆ ಗುಳೇಗುಡ್ಡ ಪರಿಸರದಲ್ಲಿ ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದೆ.
ಮಾರ್ವಡಿಗಳ ಬಾಲಾಜಿ ಗುಡಿ ಮತ್ತು ಜಗನ್ನಾಥ ದೇವಾಲಯ:
ಅಯೋದ್ಯೆಯಿಂದ ಆಗಮಿಸಿದ ಸನ್ಯಾಸಿಗಳಾದ ರಘುನಾಥ ದಾಸ ಈ ದೇವಾಲಯ ಸ್ಥಾಪನೆಯಲ್ಲಿ ಶ್ರಮಿಸಿದರು.ಇಲ್ಲಿ ರಾಮ ,ಲಕ್ಷ್ಮಣ ಸೀತೆಯರ ಪೂಜೆಯು ನಿರಂತರವಗಿ ನಡೆಯುತ್ತದೆ.ಮಹೇಶ್ವರಿ ಜನಾಂಗದವರು ಈ ಎರಡೂ ದೇವಾಲಯಗಳನ್ನು ನೋಡುವದರ ಜೊತೆಗೆ ಗೋಶಾಲೆ,ಮಹೇಶ್ವರಿ ವಿದ್ಯಾ ಪ್ರಸಾರಕ ಮಂಡಳಿ,ಹೆರಿಗೆ ಆಸ್ಪತ್ರೆಗಳನ್ನು ಸರಕಾರದ ಅನುದಾನವಿಲ್ಲದೆ ನಡೆಸಿಕೊಂಡು ಬರುತ್ತಿರುವುದು ಮಾರ್ವಾಡಿಗಳ ಹೆಗ್ಗಳಿಕೆ.
ಅಲ್ಲದೆ.ಸೋಮವಂಶ ಕ್ಷತ್ರೀಯ ಸಮಾಜದ ಅಂಭಾಭವಾನಿ ದೇವಾಲಯ, ರೇಣುಕಾಚಾರ್ಯ ರ ಮಠ, ಶ್ರೀ ಮಾರುತೇಶ್ವರ ಜಾತ್ರೆ ಸಾಲೇಶ್ವರ ಜಾತ್ರೆ,ಬನಶಂಕರಿ ಜಾತ್ರೆ,ಹಾದಿ ಬಸವೇಶ್ವರ ಜಾತ್ರೆ, ಮೂಕೇಶ್ವರಿ ಜಾತ್ರೆಗಳು ಗುಳೇಗುಡ್ಡ ಜನತೆಯಲ್ಲಿ ಸಾಮರಸ್ಯ ದ ಬೀಜವನ್ನು ಬಿತ್ತುವದರ ಜೊತೆಗೆ ಸಂಸ್ಕೃತಿಯ ವಾಹಕಗಳಾಗಿ ಭಾವೈಕ್ಯದ ಬೇರುಗಳನ್ನು ಭದ್ರ ಪಡಿಸುತ್ತಿವೆ.

ಸಾಹಿತ್ಯದ ಪಾತ್ರ :
ಗುಳೇಗುಡ್ಡ ನಗರವು  ಸಾಹಿತ್ಯ ಮತ್ತು ಸಾಂಸ್ಕೃತಿಯ ತವರೂರು, ಇಲ್ಲಿನ ಸಾಹಿತಿಗಳು ತಮ್ಮ ಪ್ರತಿಭೆಯಿಂದ ಸಾಹಿತ್ಯದ ಕಣಜವನ್ನು ಶ್ರೀಮಂತಗೊಳಿಸಿದ್ದಾರೆ ಅದರಲ್ಲಿ ನಾವು ಹೆಸರಿಸಬಹುದಾದ ಕೃತಿ ಎಂದರೆ "ಹಮ್ಮೀರ ಕಾವ್ಯ" ಇದನ್ನು ಮುರುಘಾರಾಜೇಂದ್ರ ಶ್ರೀಗಳು ರಚಿಸಿದರೆಂದು ಉಲ್ಲೇಖವಿದೆ. ಗುಳೇಗುಡ್ಡ ದ ಕವಿ ,ಬೆಂದ್ರೆಯವರ ಶಿಷ್ಯ ರಾದ ಡಾ.ಎಸ್.ಎಸ್.ಬಸುಪಟ್ಟದ ಈ ನೆಲದ ಅಪರೂಪದ ಕವಿ.ನಾನು ವಿಶ್ವ ಕನ್ನಡ ಕನ್ನಡ ಸಮ್ಮೇಳನಕ್ಕೆ ಬೆಳಗಾವಿಗೆ ಹೋದಾಗ ನಿತ್ಯೋತ್ಸವ ಕವಿ ನಿಸಾರ ಅಹ್ಮದ್ ರನ್ನು ಬೇಟಿಯಾದೆ ಆವಾಗ ಅವರು ನನ್ನನ್ನು ಯಾವ ಊರಿನವರು ಎಂದು ಕೇಳಿದರು ಆಗ ನಾನು ಗುಳೇಗುಡ್ಡ ದವನು ಎಂದಾಗ "ಎಸ್ ಎಸ್ ಬಸುಪಟ್ಟದ ಊರಾ ! ಎಂದರು, ಹೀಗೆ ಗುಳೇಗುಡ್ಡ ಕೀರ್ತಿಯನ್ನು ಸಾಹಿತ್ಯ ಕ್ಷೇತ್ರದಲ್ಲಿ ಪರಿಚಯಿಸಿದರು, ಇವರು ವೀಣಾನಾದ,ರತ್ನ ದೀಪ, ನಾವು ಸತ್ತವರಲ್ಲ, ಕೃತಿಗಳನ್ನು ನೀಡಿದ್ದಲ್ಲದೇ "ನಿಜಗುಣ ಶಿವಯೋಗಿಗಳ ಜೀವನ ಮತ್ತು ಕೃತಿಗಳು"  ಸಂಶೋಧನಾ ಗ್ರಂಥವನ್ನು ಬರೆದರು. 
ಭಂಡಾರಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ರಾದ ಡಾ.ಮಹಾದೇವ ಕಣವಿ ಕಾವ್ಯ, ಕಥೆ,ಕಾದಂಬರಿಯ ಮತ್ತು ವಿಮರ್ಶಾ ಕ್ಷೇತ್ರದಲ್ಲಿ ಪ್ರಸಿದ್ಧ ರಾದವರು.ತಾಯಿ ಬೇರು,ಮುಟ್ಟಲ ಮುರಕಿ
,ಕಲ್ಕಿ,ದೇವರ ಹೆಸರಿನ ಮೇಲೆ ಪ್ರಮಾಣ ಮಾಡಿ ಇವರ ಕೃತಿಗಳು.
ಮೂಲತಹ ವಾಣಿಜ್ಯದ ವಿದ್ಯಾರ್ಥಿಯಾಗಿದ್ದರೂ, ವಿಧಾನಸಭೆಯ ಸದಸ್ಯರಾಗಿ, ಕವಿಯಾಗಿ ಗುಳೇಗುಡ್ಡ ಪರಿಸರದಲ್ಲಿ ಮಲ್ಲಿಕಾರ್ಜುನ ಬನ್ನಿ, ಸಾಹಿತ್ಯ ಕ್ಷೇತ್ರದಲ್ಲಿನ ಇನ್ನೊಬ್ಬ ಅಪರೂಪದ ಪ್ರತಿಭೆ ಇವರು ಒಡಲಾಳದ ಬೆಂಕಿ, ಆರತಿ, ಸತ್ಯ ಪ್ಪನ ಸಾವಿನ ಸುತ್ತ, ಏಳು ಮಲ್ಲಿಗೆ ಕೃತಿಗಳನ್ನು ಬರೆದು ಗುಳೇಗುಡ್ಡ  ಸಾಹಿತ್ಯದ ಇತಿಹಾಸಕ್ಕೆ ತಮ್ಮ ಅಮೂಲ್ಯವಾದ ಕೊಡುಗೆ ನೀಡಿದ್ದಾರೆ .
ಡಾ.ಸಿ.ಎಮ್ ಜೋಶಿ ಗುಳೇಗುಡ್ಡದ ಅಪ್ರತಿಮ ಪ್ರತಿಭೆ ಮೂಲತಹ ಸಮಾಜ ಶಾಸ್ತ್ರ ದ ಪ್ರಾಧ್ಯಾಪಕ ಮತ್ತು ಸಮಾಜ ಶಾಸ್ತ್ರ ದ ಲೇಖಕ ರಾದರೂ ಸಾಹಿತ್ಯ ಕ್ಷೇತ್ರ ಮತ್ತು ನಾಟಕ  ಕ್ಷೇತ್ರದಲ್ಲಿನ ಅವರ ಕೊಡುಗೆ ಅವಿಸ್ಮರಣೀಯ, ಭಾವ ಸಂಗಮ, ಭಾವಾಂಜಲಿ ಅವರ  ಕವನ ಸಂಕಲನಗಳಾದರೆ,ಮೂಡದ ನೆರಳು (ನಾಟಕ) ಮತ್ತು ನಾಟಕ ಕಾರ ಭಸ್ಮೆ_ಒಂದು ಚಿಂತನೆ,ಸ್ವಾತಂತ್ರ್ಯ ಹೋರಾಟಗಾರ ಸಾಬಣ್ಣ ಸಿಂಧೆ,ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ವೀರಪುಲಿಕೇಶಿ ಪದವಿ ಮಹಾವಿದ್ಯಾಲಯದ ಕನ್ನಡದ ಪ್ರಾಧ್ಯಾಪಕ ಡಾ.ರಾಜಶೇಖರ ಬಸುಪಟ್ಟದ ಗುಳೇಗುಡ್ಡ ದ ಅನರ್ಘ್ಯ ರತ್ನ, ಸರಳ ,ಸತತ ಪರಿಶ್ರಮದ ನಿಷ್ಠುರು ಕವಿ .ಇವರು 'ನಿನ್ನೆ ನಾಳೆಗಳ ಮಧ್ಯೆ' ಕವನ ಸಂಕಲನ,ಬಯಲು ಬೆರಗು,ಮಡಿವಾಳಪ್ಪ ಪಟ್ಟಣಶೆಟ್ಟಿ ಜೀವನ ಚರಿತ್ರೆ.ವಿವೇಕ ಚಿಂತಾಮಣಿ,ಚಿತ್ತರಗಿ-ಇಲಕಲ್ ವಿಜಯ ಮಹಾಂತೇಶ ಸಂಸ್ಥಾನಮಠ-ಒಂದು ಸಾಂಸ್ಕೃತಿಕ ಅಧ್ಯಯನ ಮುಂತಾದ ಕೃತಿಗಳನ್ನು ಬರೆದಿದ್ದಾರೆ.
ರಂಗ ಸಾಹಿತ್ಯ ದಲ್ಲಿ ಹೆಸರು ಮಾಡಿರುವ ಡಾ.ಭೀಮನಗೌಡ ಪಾಟೀಲ, ಪ್ರೊ.ಜಿ.ಜಿ.ಹೂಗಾರ, ಡಾ.ಸುಭಾಷ ಪೊರೆ,ಡಾ. ವ್ಹಿ.ಎ.ಬೆನಕನಾಳ,ಕೆ.ಎನ್ ಯರಗಾ,ಮಹದೇವ ಜಗತಾಪ,ಡಾ.ಎಚ್ ಎಸ್ ಘಂಟಿ,ಡಾ.ಸಂಗಮೇಶ ಕಲ್ಯಾಣಿ, ಕೆ ಆರ್ ರಾಯಚೂರ,ಡಾ.ಪ್ರಕಾಶ ನರಗುಂದ,ಪ್ರೊ.ಎಸ್ ಐ.ರಾಜನಾಳ ,ಎಮ್ ಜಿ ಅಂಗಡಿ,ಶಿವಕುಮಾರ ಕರನಂದಿ ಮುಂತಾದ ಕವಿಗಳು ತಮ್ಮ ಕೃತಿಗಳನ್ನು ರಚಿಸಿ ಗುಳೇಗುಡ್ಡ ಸಾಹಿತ್ಯದ ಭಂಡಾರವನ್ನು ಶ್ರೀಮಂತಗೊಳಿಸಿದ್ದಾರೆ.

ಗುಳೇಗುಡ್ಡ ಇತಿಹಾಸ ನಿರ್ಮಾಣದಲ್ಲಿ ನೇಕಾರಿಕೆ ಪಾತ್ರ 

ಗುಳೇಗುಡ್ಡ ದಲ್ಲಿ ಎರಡು ರೀತಿಯ ನೇಕಾರರನ್ನು ಕಾಣಬಹುದು ಒಂದು ಜಾತಿಯಿಂದ ನೇಕಾರರಾದರೆ ಇನ್ನೊಬ್ಬರು ಉಪಜೀವನಕ್ಕಾಗಿ ವೃತ್ತಿ ನೇಕಾರರು. ಜಾತಿಯಿಂದ ನೇಕಾರೆಂದರೆ_ ದೇವಾಂಗ, ಪದ್ಮಸಾಲಿ,ಪಟ್ಟಸಾಲಿ ಸಕುಳಸಾಲಿ,ಕುರುಹಿನಶೆಟ್ಟಿ, ಶಿವಸೋಮಸಾಲಿ,ನೀಲಗಾರರು.ಇನ್ನು ಉಪಜೀವನಕ್ಕಾಗಿ ಜಂಗಮ,ಲಿಂಗಾಯಿತ, ಕಂಬಾರ,ಕಂಬಾರರು ಈ ವೃತ್ತಿಯನ್ನು ಮಾಡುತ್ತಿದ್ದಾರೆ.ಜಾತಿಯಿಂದ ನೇಕಾರರಿಗೆ ಬನಶಂಕರಿಯೇ ಕುಲದೇವತೆ ಮತ್ತು ಆರಾಧ್ಯ ದೈವ ಈ ಬನಶಂಕರಿ ದೇವಿ.ಬದಾಮಿ ಚಾಲುಕ್ಯರ ಕುಲದೇವತೆಯು ಬನಶಂಕರಿಯೇ ! ಹಾಗಾಗಿ ಗುಳೇಗುಡ್ಡ ನೇಕಾರಿಕೆ ಇತಿಹಾಸ ಚಾಲುಕ್ಯರ ಇತಿಹಾಸಕ್ಕೆ ಬಂದು ತಲುಪುತ್ತದೆ.
       ಬದಾಮಿ ಚಾಲುಕ್ಯರ ಇತಿಹಾಸ ಪ್ರಾರಂಭವಾಗುವದು ಆರನೇ ಶತಮಾನದಲ್ಲಿ.ಈ ಮನೆತನ ಜಯಸಿಂಹನಿಂದ ಪ್ರಾರಂಭವಾದರೂ ಐತಿಹಾಸಿಕ ಪುರುಷ ಒಂದನೆಯ ಪುಲಿಕೇಶಿಯಿಂದ ನಮಗೆ ಸ್ಪಷ್ಟ ವಾದ ಇತಿಹಾಸ ತಿಳಿಯುತ್ತದೆ.ಇವರ ಪ್ರಸಿದ್ಧ ಅರಸ ಎರಡನೆಯ ಪುಲಿಕೇಶಿಯು ಇಡಿ ದಕ್ಷಿಣ ಭಾರತವನ್ನಾಳಿ ದಕ್ಷಿಣಾ ಪಥೇಶ್ವರನೆಂದು ಬಿರುದಾಂಕಿತನಾಗಿದ್ದ ಆದರೆ ಪಲ್ಲವ ದೊರೆ 1 ನೇ ನರಸಿಂಹವರ್ಮನಿಂದ ಸೋತು ಹತನಾದಾಗ 13 ವರ್ಷ ಪಲ್ಲವರ ಆಡಳಿತಕ್ಕೆ ಬದಾಮಿ(ವಾತಾಪಿ) ಒಳಪಟ್ಟಿತ್ತು ಆಗ ಗುಳೇಗುಡ್ಡ ಆಡಳಿತದ ಮೇಲೆ ಪಲ್ಲವರ ಆಡಳಿತದ ಪರಿಣಾಮ ಬೀರಿತ್ತು.
          ಇಂದು ನೇಕಾರಿಕೆ ತೀವ್ರ ಸಂಕಷ್ಟ ದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು ಅದು ಗುಳೇಗುಡ್ಡದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯ ಮೇಲೆ ಬಹು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಇವತ್ತು ಗುಳೇಗುಡ್ಡ ತಾಲೂಕಾ ಕೇಂದ್ರವಾಗಿ ಘೋಷಣೆಯಾಗಿ ಕಾರ್ಯ ಪ್ರವೃತ್ತವಾಗಿದ್ದರೂ ಕೂಡಾ ಅದು ಪೂರ್ಣ ಪ್ರಮಾಣದಲ್ಲಿ ಆಡಳಿತವನ್ನು ಹೊಂದದಿರವುದು ಅದರ ಆರ್ಥಿಕ ಚಟುವಟಿಕೆಯ ಮೇಲೆ ಹಿನ್ನಡೆಯನ್ನು ಕಂಡಿದೆ.

ಶಿಕ್ಷಣ ಸಂಸ್ಥೆಗಳ ಪಾತ್ರ :
       ಸಾ.ಶ.1921 ರಲ್ಲಿ ಶ್ರೀ ಮ.ನಿ.ಪ್ರ. ಒಪ್ಪತ್ತೇಶ್ವರ ಶ್ರೀಗಳ ಅಮೃತ ಹಸ್ತದಿಂದ ಪ್ರಾರಂಭವಾದ  ಮುನ್ಸಿಪಲ್ ಹೈಸ್ಕೂಲ್ ಗುಳೇಗುಡ್ಡ ಶೈಕ್ಷಣಿಕ ಕ್ಷೇತ್ರದಲ್ಲಿ ಒಂದು ಮೈಲುಗಲ್ಲು ಇದು ಗುಳೇಗುಡ್ಡ ದಾನಿಗಳ ಅಭಯಹಸ್ತದಿಂದ ಪಾರಂಭ ವಾಗಿ ಗುಳೇಗುಡ್ಡ ಭಾಗದ ಅದೆಷ್ಟೋ ಜನರ ಜೀವನದ ಸಂಜೀವಿನಿಯಾಗಿದೆ ನಂತರ ಅದು ಸರ್ಕಾರಿ ಪ್ರೌಢ ಶಾಲೆ.ಬಾಲಕರ ಸ.ಪ.ಪೂ ಕಾಲೇಜಾಗಿದೆ ಇದೆ ಅಂಗಳದಲ್ಲಿ ಸರಕಾರಿ ಪದವಿ ಕಾಲೇಜು ಸ್ಥಾಪನೆಯಾಗಿ ಬಡವರ ಮಕ್ಕಳ ಆಶಾಕಿರಣವಾಗಿದೆ , ಇಲ್ಲಿ ಕಲಿತ ಅದೆಷ್ಟೋ ವಿದ್ಯಾರ್ಥಿಗಳು ಜಗತ್ತಿನ ವಿವಿಧ ಭಾಗಗಳಲ್ಲಿ ಉನ್ನತ ಸ್ಥಾನ ಮಾನ ಹೊಂದಿದ್ದಾರೆ. ಇದೆ ಸಂಸ್ಥೆಯಿಂದ ಬೇರ್ಪಟ್ಟ ಬಾಲಕಿಯರ ಪ್ರೌಢ ಶಾಲೆ, ನಂತರ ಪದವಿಪೂರ್ವ ಕಾಲೇಜಾಗಿದೆ. ಇದೆ ಸಂಸ್ಥೆಯಲ್ಲಿ ನಡೆದ ಪಿ.ಇ.ಟಿ ಟ್ರಸ್ಟಿನ ಭಂಡಾರಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಹಾಗೆಯೇ ಎಸ್ ಕೆ ರಾಠಿ ವಿಜ್ಞಾನ ಮಹಾವಿದ್ಯಾಲಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಗುಳೇಗುಡ್ಡ ಜನರ ಶಿಕ್ಷಣದ ಆಶಾಕಿರಣವಾಗಿದೆ ಇಲ್ಲಿ ಓದಿದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಹೆಸರು ಮಾಡಿದ್ದಾರೆ. ಇವುಗಳಲ್ಲದೆ. ಕಾಂಚನೇಶ್ವರಿ ಪ್ರೌಢ ಶಾಲೆ ,ಕಾಡಸಿದ್ಧೇಶ್ವರ ಪ್ರೌಢ ಶಾಲೆ, ಗುರುಸಿದ್ಧೇಶ್ವರ ಪ್ರೌಢ ಶಾಲೆ,ಮಹಿಳಾ ಶಿಕ್ಷಣ ಮಹಾವಿದ್ಯಾಲಯ,ವೆಂಕಟೇಶ್ವರ ಕನ್ನಡ ಮಾಧ್ಯಮ ಶಾಲೆ, ಮಹೇಶ್ವರಿ ಸಂಸ್ಥೆಯ  ಹೊಳಬಸು ಶೆಟ್ಟರವರ ಪ್ರಾಥಮಿಕ ಶಾಲೆಯಿಂದ ಪ.ಪೂ ಕಾಲೇಜು ವರೆಗೆ ಶಿಕ್ಷಣ ಸಂಸ್ಥೆಗಳು ಗುಳೇಗುಡ್ಡದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಅಮೂಲ್ಯವಾದ ಕೊಡುಗೆ ನೀಡಿವೆ.


 






 
 
       

.

Sunday, October 13, 2024

ಪರೀಕ್ಷೆ : ಮೇಲ್ವಿಚಾರಕರ ಕರ್ತವ್ಯ ಗಳು

ಪರೀಕ್ಷೆಯು ಪವಿತ್ರವಾದ ಕಾರ್ಯ ಪರೀಕ್ಷಕರಾಗಿರುವುದಕ್ಕೆ ಹೆಮ್ಮೆಪಡೋಣ. ಒಂದನೆಯ ಕಿರು ಪರೀಕ್ಷೆ ದಿನಾಂಕ 12.08.2024 ರಿಂದ ಪ್ರಾರಂಭವಾಗುತ್ತದೆ
ವೇಳೆ: ಒಂದನೆಯ ಅವಧಿ 9.15 ರಿಂದ 10.45
         ಎರಡನೆಯ ಅವಧಿ 11.15 ರಿಂದ 12.45
1) 9.00 ಗಂಟೆಗೆ ಪರೀಕ್ಷಾ ವಿಭಾಗಕ್ಕೆ ಹಾಜರಾಗಿ ತಮ್ಮ ಪರೀಕ್ಷೆಯ ಪರಿಕರಗಳನ್ನು ತೆಗೆದು ಕೊಳ್ಳಬೇಕು ಮತ್ತು ಆದು ನಿಮಗೆ  ಹಂಚಿಕೆಯಾದ ಕೊಠಡಿಯದು ಎನ್ನುವುದನ್ನು ಖಚಿತ ಪಡಿಸಿಕೊಂಡು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಎಣಿಸಿಕೊಳ್ಳಬೇಕು. 
2) ವಿದ್ಯಾರ್ಥಿಗಳು ಸರಿಯಾದ ಜಾಗದಲ್ಲಿ ಕುಳಿತು ಕೊಂಡ ದ್ದನ್ನು ಖಚಿತ ಪಡಿಸಿಕೊಳ್ಳಬೇಕು ನಂತರವೇ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗೆ ರುಜು ಹಾಕಬೇಕು
3) 9.10 ಕ್ಕೆ ಉತ್ತರ ಪತ್ರಿಕೆಗಳನ್ನು ಮೊದಲು ಪ್ರಥಮ ಪಿ ಯು ಸಿ ಗೆ ನೀಡಿ ನಂತರ ದ್ವಿತೀಯ  ಪಿ ಯು ಸಿ ಗೆ ನೀಡುವುದು.
4) 10.45 ಕ್ಕೆ ವಿದ್ಯಾರ್ಥಿಗಳಿಂದ ಪಡೆದು ಪರೀಕ್ಷೆಯ ವಿಭಾಗಕ್ಕೆ ತಲುಪಿಸುವುದು.
( ಉತ್ತರ ಪತ್ರಿಕೆಯನ್ನು ಪಡೆದುಕೊಳ್ಳುವ ಪ್ರಕಿಯೆ ಲೇಟಾದರೂ ನಂತರ ತೆಗೆದುಕೊಳ್ಳಲಾಗುವುದು. ಎರಡನೆಯ ಅವಧಿಗೆ ಅಂದರೆ 11.05 ಕ್ಕೆ ಪರೀಕ್ಷೆಯ ಕೊಠಡಿಯಲ್ಲಿದ್ದು.ಉತ್ತರ ಪತ್ರಿಕೆ ಮತ್ತು ಪ್ರಶ್ನೆ ಪತ್ರಿಕೆಯ ವಿತರಿಸಬೇಕು.

ಉತ್ತರ  ಪತ್ರಿಕೆಯ ಮೌಲ್ಯ ಮಾಪನದ ಕುರಿತು
1) ಭಾಷಾ ವಿಷಯಗಳನ್ನು ಹೊರತು ಪಡಿಸಿ ಉಳಿದ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳನ್ನು ನಾಲ್ಕು ದಿನಗಳಲ್ಲಿ ಮೌಲ್ಯ ಮಾಪನ ಮಾಡಿ ಉತ್ತರ ಪತ್ರಿಕೆ ಹಾಗೂ ಮಾರ್ಕ್ಸ್ ಲಿಸ್ಟಿಗಳನ್ನು ದಾಖಲಾತಿ ವಿಭಾಗಕ್ಕೆ ಸಲ್ಲಿಸಬೇಕು.
2) ಕನ್ನಡ ಮತ್ತು ಇಂಗ್ಲಿಷ್ ಉತ್ತರ ಪತ್ರಿಕೆಗಳನ್ನು 06 ದಿನಗಳಲ್ಲಿ ಮೌಲ್ಯ ಮಾಪನ ಮಾಡಿ ಉತ್ತರ ಪತ್ರಿಕೆ ಹಾಗೂ ಮಾರ್ಕ್ಸ್ ಲಿಸ್ಟಿಗಳನ್ನು ದಾಖಲಾತಿ ವಿಭಾಗಕ್ಕೆ ಸಲ್ಲಿಸಬೇಕು.
3)ಎಲ್ಲ ಅಂಕಗಳನ್ನುSATS ನಲ್ಲಿ ಹಾಕಬೇಕಾಗಿರುವದರಿಂದ ಅವುಗಳನ್ನು ಹಾಕಿದ ನಂತರ ಒಂದನೆ ಬಾರಿ ಪ್ರಿಂಟ್  ತೆಗೆದ ಮೇಲೆ ಅದನ್ನು ಎಲ್ಲಾ ಉಪನ್ಯಾಸಕರ ಗಮನಕ್ಕೆ ತರಲಾಗುವುದು ತಮ್ಮ ವಿಷಯದಲ್ಲಿ ತಪ್ಪೇನಾದರು ಆಗಿದ್ದರೆ ಅದನ್ನು ಸರಿಪಡಿಸಲಾಗುವುದು. ಒಂದು ವೇಳೆ ತಪ್ಪು ಮರುಕಳಿಸಿದರೆ(ಹಾಗೆ ಉಳಿದರೆ) ವಿಷಯದ ಉಪನ್ಯಾಸಕರ ಜವಾಬ್ದಾರಿಯು ಇರುತ್ತದೆ ಎನ್ನುವದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.


ಷಾಣ್ಮಾಸಿಕ ಪರೀಕ್ಷೆ 2024_25

ಪರೀಕ್ಷೆಯು ಪವಿತ್ರವಾದ ಕಾರ್ಯ ಪರೀಕ್ಷಕರಾಗಿರುವುದಕ್ಕೆ ಹೆಮ್ಮೆಪಡೋಣ.  ಷಾಣ್ಮಾಸಿಕ ಪರೀಕ್ಷೆ 2024_25 ದಿನಾಂಕ 22.10.2024 ರಿಂದ ಪ್ರಾರಂಭವಾಗುತ್ತದೆ
ವೇಳೆ: ಒಂದನೆಯ ಅವಧಿ 9.30.ರಿಂದ 12.30
         
1) 9.00 ಗಂಟೆಗೆ ಪರೀಕ್ಷಾ ವಿಭಾಗಕ್ಕೆ ಹಾಜರಾಗಿ ತಮ್ಮ ಪರೀಕ್ಷೆಯ ಪರಿಕರಗಳನ್ನು ತೆಗೆದು ಕೊಳ್ಳಬೇಕು ಮತ್ತು ಆದು ನಿಮಗೆ  ಹಂಚಿಕೆಯಾದ ಕೊಠಡಿಯದು ಎನ್ನುವುದನ್ನು ಖಚಿತ ಪಡಿಸಿಕೊಂಡು ಪ್ರಶ್ನೆ ಪತ್ರಿಕೆ ಮತ್ತು ಉತ್ತರ ಪತ್ರಿಕೆ ಎಣಿಸಿಕೊಳ್ಳಬೇಕು. 
2) ವಿದ್ಯಾರ್ಥಿಗಳು ಸರಿಯಾದ ಜಾಗದಲ್ಲಿ ಕುಳಿತು ಕೊಂಡದ್ದನ್ನು ಖಚಿತ ಪಡಿಸಿಕೊಳ್ಳಬೇಕು ನಂತರವೇ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗೆ ರುಜು ಹಾಕಬೇಕು
3) 9.30 ಕ್ಕೆ ಪ್ರಶ್ನೆ ಪತ್ರಿಕೆಯನ್ನು ನೀಡಬೇಕು.
4) 9.45 ಕ್ಕೆ ಉತ್ತರ ಪತ್ರಿಕೆಗಳನ್ನು ಮೊದಲು ಪ್ರಥಮ ಪಿ ಯು ಸಿ ಗೆ ನೀಡಿ ನಂತರ ದ್ವಿತೀಯ  ಪಿ ಯು ಸಿ ಗೆ ನೀಡುವುದು.
4) 12.30 ಕ್ಕೆ ವಿದ್ಯಾರ್ಥಿಗಳಿಂದ ಪಡೆದು ಪರೀಕ್ಷೆಯ ವಿಭಾಗಕ್ಕೆ ತಲುಪಿಸುವುದು.



ಉತ್ತರ  ಪತ್ರಿಕೆಯ ಮೌಲ್ಯ ಮಾಪನದ ಕುರಿತು
1) ಭಾಷಾ ವಿಷಯಗಳನ್ನು ಹೊರತು ಪಡಿಸಿ ಉಳಿದ ಎಲ್ಲ ವಿಷಯಗಳ ಉತ್ತರ ಪತ್ರಿಕೆಗಳನ್ನು ಆರು ದಿನ ಮೌಲ್ಯ ಮಾಪನ ಮಾಡಿ ಉತ್ತರ ಪತ್ರಿಕೆ ಹಾಗೂ ಮಾರ್ಕ್ಸ್ ಲಿಸ್ಟಿಗಳನ್ನು ದಾಖಲಾತಿ ವಿಭಾಗಕ್ಕೆ ಸಲ್ಲಿಸಬೇಕು.
2) ಕನ್ನಡ ಮತ್ತು ಇಂಗ್ಲಿಷ್ ಉತ್ತರ ಪತ್ರಿಕೆಗಳನ್ನು 07 ದಿನಗಳಲ್ಲಿ ಮೌಲ್ಯ ಮಾಪನ ಮಾಡಿ ಉತ್ತರ ಪತ್ರಿಕೆ ಹಾಗೂ ಮಾರ್ಕ್ಸ್ ಲಿಸ್ಟಿಗಳನ್ನು ದಾಖಲಾತಿ ವಿಭಾಗಕ್ಕೆ ಸಲ್ಲಿಸಬೇಕು.
3)ಎಲ್ಲ ಅಂಕಗಳನ್ನುSATS ನಲ್ಲಿ ಹಾಕಬೇಕಾಗಿರುವದರಿಂದ ಅವುಗಳನ್ನು ಹಾಕಿದ ನಂತರ ಒಂದನೆ ಬಾರಿ ಪ್ರಿಂಟ್  ತೆಗೆದ ಮೇಲೆ ಅದನ್ನು ಎಲ್ಲಾ ಉಪನ್ಯಾಸಕರ ಗಮನಕ್ಕೆ ತರಲಾಗುವುದು ತಮ್ಮ ವಿಷಯದಲ್ಲಿ ತಪ್ಪೇನಾದರು ಆಗಿದ್ದರೆ ಗಣಕ ಯಂತ್ರದ ಸಹಾಯಕರು ಹಾಗೂ ದಾಖಲಾತಿ ವಿಭಾಗದ ಮೂಲಕ ಅದನ್ನು ಸರಿಪಡಿಸಲಾಗುವುದು. ಒಂದು ವೇಳೆ ತಪ್ಪು ಮರುಕಳಿಸಿದರೆ(ಹಾಗೆ ಉಳಿದರೆ) ವಿಷಯದ ಉಪನ್ಯಾಸಕರ ಜವಾಬ್ದಾರಿಯು ಇರುತ್ತದೆ ಎನ್ನುವದನ್ನು ತಮ್ಮ ಗಮನಕ್ಕೆ ತರಬಯಸುತ್ತೇನೆ.

.

.

Saturday, October 12, 2024

ಕನ್ನಡದ ಕಂದ

ಕನ್ನಡದ ಮಾಧುರ್ಯ ಕಂದನ 
ಬಾಯಲ್ಲಿ, ಕದಳಿಯ ಎಲೆ 
ಗಾಳಿಗೆ ಸುಳಿದಾಂಗ ।।

ಕನ್ನಡದ ವಾಣಿ, ಕಟ್ಟಿದರೆ 
ಕರಿಮಣಿ, ಇಟ್ಟರೆ ಚೂಡಾಮಣಿ
ಬೆಟ್ಟಕ್ಕೆ ಬೆಳಕಿನ ಕಿರಣದಾಂಗ।।

ಪದಗಳ ಜೊತೆಗೆ ಹದವಾಗಿ
ಓಡುವಳು, ವಾದಗಳಲ್ಲಿಯೂ  
ವೇದನಾದ, ವೇದಾಂತಿಯಾಂಗ॥

ಪರಭಾಷೆಗೆ ನೀಡವ ಗೌರವ
ಅರಿವಿಗೆ, ಕನ್ನಡ ಭಾಷೆಯ ಪರ
ಹೊರೆಯಾಗದ ಹಿರಿತನದಾಂಗ॥

ಮಾಗಿದ ಮಾತುಗಳು,ತೂಗುವಳು
ತತ್ವಜ್ಞಾನ, ನುಡಿ ಉಡಿತುಂಬ 
ಮುತೈದಿಯ ಎಲೆಯಡಕಿಯಾಂಗ॥

ಭಾಷೆಯಲ್ಲಿ ಬೀಸುವಳು ಸಂಸ್ಕಾರದ
ಬೀಜ,ಸಂಸ್ಕೃತಿ ವಾರಸದಾರಳಿವಳು
ಹೊಸತನಕ್ಕೂ ಬೇಕಿವಳು ಕಳಸದಂಗ॥






Thursday, October 10, 2024

ವೃತ್ತಿಯ ಗೌರವ ಹೆಚ್ಚಿಸಿದವರು

              ಅಂದು ದಿನಾಂಕ 10.10.2024, ನಮ್ಮ ಕಾಲೇಜಿನ ಪ್ರಭಾರ ಪ್ರಾಚಾರ್ಯ ವಿಠ್ಠಲ ಕಳಸಾ ರವರ ವಾಟ್ಸ ಪ್ ಸಂದೇಶ "ಆತ್ಮೀಯರೇ ತಮಗೆಲ್ಲರಿಗೂ ತಿಳಿದ ಹಾಗೆ ನಾಳೆ ನಾಗಮ್ಮ ಅಕ್ಕ *peon* ಹುದ್ದೆಯಿಂದ ** *ಎಸ್ ಡಿ ಎ* ಹುದ್ದೆಗೆ ಲಾಯದಗುಂದಿ ಸರ್ಕಾರಿ ಪ್ರೌಢಶಾಲೆಗೆ ಹಾಜರಾಗುತ್ತಿದ್ದಾರೆ.  ಈ ಶುಭ ಸಮಾರಂಭಕ್ಕೆ ಸಾಕ್ಷಿಯಾಗಲು ತಮ್ಮೆಲ್ಲರನ್ನು ಆಮಂತ್ರಿಸಿದ್ದಾಳೆ. ದಯಮಾಡಿ ಎಲ್ಲರೂ ಬೆಳಿಗ್ಗೆ 11 ಗಂಟೆಗೆ ಹಾಜರಾಗಿ ಅಕ್ಕನಿಗೆ ಬಿಳ್ಕೊಟ್ಟು ಶುಭಕೋರೋಣ,ಬನ್ನಿ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸೋಣ" ನೋಡಿ, ನಾಗಮ್ಮ ನ ಕರ್ತವ್ಯ ಬದ್ಧತ,  ಕಾರ್ಯ ತತ್ಪರತೆ ಒಂದು ಕ್ಷಣ ಮನಪಟಲದ ಮೇಲೆ ಸುಳಿದು ಹೋದವು.22 ವರ್ಷದ ಅವಳ ಸುದೀರ್ಘ ಸೇವೆಯಲ್ಲಿ ತನ್ನ ವೃತ್ತಿ ಗೌರವ ಎತ್ತರಿಸಿದ ರೀತಿ ಇಂದು ನನ್ನನ್ನು ತಲೆ ಭಾಗುವಂತೆ ಮಾಡಿತು. ಗಾಂಧೀಜಿಯವರನ್ನು ಯಾರೋ ಒಬ್ಬರು ಕೇಳಿದರಂತೆ "ಸರ್  ಒಂದು ವೇಳೆ ನೀವು ಸಪಾಯಿ ಕರ್ಮಚಾರಿಯಾದರೆ ಏನು ಮಾಡುತ್ತೀರಿ " ಎಂದು, ಆಗ ಗಾಂಧೀಜಿಯವರ ಹೇಳಿದರಂತೆ  " ನಾನು ನನಗೆ ವಹಿಸಿದ ಓಣಿಯನ್ನು  ಇತರೆಲ್ಲ ಓಣಿಗಿಂತ ಸ್ವಚ್ಛ ವಾಗಿ ಇಟ್ಟುಕೊಳ್ಳಲು ಬಯಸುತ್ತೇನೆ' ಎಂದರಂತೆ.ಪ್ರಾಯಶ: ಈ ಮಾತು ನಾಗಮ್ಮ ಅಕ್ಕನಿಗೂ ಆನ್ವಯಿಸುತ್ತೊ ಏನೂ.? ಸರಿಯಾಗಿ 11.00 ಗಂಟೆಗೆ ಸುಮಾರಿಗೆ ಹಾಜರ ಪಡಿಸಲು ಬಂದ ಗಣ್ಯ ವ್ಯಕ್ತಿ ಗಳೇ ಇದಕ್ಕೆಲ್ಲ ಸಾಕ್ಷಿ.ನಿವೃತ್ತ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಮೇಶ ದಡ್ಡಿ, ಹಾಲಿ ತೋಗುಣಸಿ ಮುಖ್ಯೋಪಾಧ್ಯಾಯ ಬಿ.ಎಸ್ ಕವಿಶೆಟ್ಟಿ, ಬಾಲಕಿಯರ ಸರ್ಕಾರ ಪ.ಪೂ.ಕಾಲೇಜಿನ ಉಪಪ್ರಾಚಾರ್ಯ, ಎಮ್ ಪಿ ಮಾಗಿ, ಹಳದೂರು ಸರ್ಕಾರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿಯರಾದ ಶಾರದಾ ಪಂಚಾಕ್ಷರಿಮಠ, ನಿವೃತ್ತ ಮುಖ್ಯೋಪಾಧ್ಯಾಯರಾದ ಎಚ್ ಎನ್ ಗುರಿಕಾರ, ನಿವೃತ್ತ ಉಪನ್ಯಾಸಕರಾದ ನಾಗಯ್ಯ ಹಿರೇಮಠ,  ಕಟಗೆರಿ ಪ.ಪೂ.ಕಾಲೇಜಿನ ಉಪನ್ಯಾಸಕ ಲೋಕಪುರ ಸರ್, ದೈಹಿಕ ಶಿಕ್ಷಕ ಚವ್ಹಾಣ ಸರ್,ಅಲ್ಲದೆ ನಮ್ಮ ಸಂಸ್ಥೆಯ ಪ್ರಾಚಾರ್ಯ ವಿಠ್ಠಲ ಕಳಸಾ ಉಪಪ್ರಾಚಾರ್ಯ ಮುದುಕವಿ ಸರ್,ಅಲ್ಲದೆ ಕಾಲೇಜಿನ ಉಪನ್ಯಾಸಕ ಬಳಗ,ಶಿಕ್ಷಕ ವೃಂದ,ಬೋಧಕೇತರ ಸಿಬ್ಬಂದಿ, ಭಾಗವಹಿಸಿದ, ಆ ಹಾಜರಾಗುವ ಸನ್ನಿವೇಶ, ಹಬ್ಬದ  ರಜೆಯ ಅವಧಿಯಲ್ಲಯೂ ಹಬ್ಬದ ವಾತಾವರಣ ಸೃಷ್ಟಿಸಿದ ರೀತಿಯು ನಿಜವಾಗಿಯೂ ನಾಗಮ್ಮ ಅಕ್ಕನ ಕರ್ತವ್ಯ ಬದ್ಧತೆಗೆ,ಸೇವಾ ನಿಷ್ಠೆಗೆ ಹಿಡಿದ ಕೈಗನ್ನಡಿ.ಈ ನಾಗಮ್ಮ ನ ಕರ್ತವ್ಯ ಪ್ರಾರಂಭ ವಾಗುವುದು ಮುಂಜಾನೆ ಎಂಟು ಗಂಟೆಗೆ, ಅವಳು ಮನೆಗೆ ಹೋಗುವುದು ಸಂಜೆ ಏಳರಿಂದ ಎಂಟರವರೆಗೆ.ಒಂದು ವೇಳೆ ಸಂಸ್ಥೆಯ ಉದ್ಯೋಗಿಗಳು ಬೈಕ ಹಚ್ಚಿ ಆಫೀಸಿನ ಕೆಲಸ ಅಥವಾ ವೈಯಕ್ತಿಕ ಕೆಲಸಕ್ಕೆ ಹೋಗಿ ಲೇಟಾಗಿ ಬಂದರೆ ! ಕಾಲೇಜಿನ ಗೇಟಿ ಲಾಕ ಆಗಿರುತ್ತದೆ  ಆ ಸನ್ನಿವೇಶ ದಲ್ಲಿಯೂ ಪೋನ್ ಹಚ್ಚಿದರೆ ಬೇಸರವಿಲ್ಲದೆ ಮನೆಯಿಂದ ಬಂದು ಗೇಟಿನ ಬಾಗಿಲು ತಗೆಯುವ ಅವಳ ಉದಾರಗುಣ ನಿಜವಾಗಿಯೂ ಮೆಚ್ಚಲೇ ಬೇಕು.ನಾಗಮ್ಮ ಪ್ರೌಢ ವಿಭಾಗದ ಪ್ಯೂನ ಆಗಿದ್ದರೂ ಪದವಿ ಪೂರ್ವ ಕಾಲೇಜಿನಲ್ಲಿ ಪ್ಯೂನ ಇಲ್ಲದಾಗ ಎರಡೂ ವಿಭಾಗದ ಕಾರ್ಯ ನಿರ್ವಹಿಸಿದ ರೀತಿ,  ಅದಕ್ಕಾಗಿ ಕಾಲೇಜಿನಿಂದ ಯಾವುದೆ ನೀರಿಕ್ಷೆ ಇಲ್ಲದೆ ನಿಸ್ವಾರ್ಥ ಸೇವೆ ಸಲ್ಲಿಸಿದ ಅವಳ ಸೇವ ಸ್ಮರಿಸುವುದಾದರೂ ಹೇಗೆ ? ಇಷ್ಟೆಲ್ಲ ಸಲ್ಲಿಸಿದ ನಾಗಮ್ಮನಿಗೆ ಇವತ್ತಿನ ಗಣ್ಯರು ತೋರಿದ ಆತ್ಮೀಯತೆ, ಪ್ರೀತಿಯ ಮುಂದೆ ಯಾವ ಪ್ರಶಸ್ತಿಯು ಸಮನಾಗಲಾರದು ಎನ್ನುವುದು ನನ್ನ ಭಾವನೆ.ಇದು ಪ.ಪೂ.ಕಾಲೇಜಿನ ಕಾಲೇಜಿನ ಜೊತೆ ನಾಗಮ್ಮ ನ ಒಡನಾಟ ವಾದರೆ ತಮ್ಮದೆ ಸಂಸ್ಥೆಗೆ ಅವಳು ಸಲ್ಲಿಸಿದ ಸೇವೆ ಅದು ಅಮೋಘ ವಾದುದು ಕಲವೇ ದಿನಗಳ ಹಿಂದೆ ಪ್ರೌಢ ವಿಭಾಗಕ್ಕೆ ಉಪಪ್ರಾಚಾರ್ಯ ರಾಗಿ ಆಗಮಿಸಿದ ಮುದಕವಿ ಸರ್, ನಾಗಮ್ಮ ನಮ್ಮ ಸಂಸ್ಥೆಯಿಂದ ಹೋಗಿದ್ದು ನನ್ನ  ಬಲ ತೋಳು ಹೋದಂತೆ ಆಗಿದೆ  ಎನ್ನುವ ಅವರ ಮಾತು ಅಕ್ಷರಶಃ ಸತ್ಯ. ಅನ್ನ ಆಗಿದೆ ಎಂದು ನೋಡಲು ಪಾತ್ರೆಯ ಎಲ್ಲಾ ಅಗಳು ನೋಡಬೇಕಿಲ್ಲ ಒಂದಗಳೆ ಸಾಕು. ಇಡಿ ಸಂಸ್ಥೆಯ ಅಂಕಿ ಸಂಖ್ಯೆಗಳು ಅವಳ ಬಾಯಲ್ಲಿ ಪಾಟಾ ಪಟ್,ನೂರು ವರ್ಷದ ದಾಖಲೆಗಳನ್ನು ಕೆಲವು ಸಮಯದಲ್ಲಿ ಹಿಡಿದು ತರಬಲ್ಲಳು ಇಂತಹ ನೌಕರಳು ಸಂಸ್ಥೆಯಿಂದ  ಹೊರಹೋಗುತ್ತಾಳೆಂದರೇನು !, ಉಪಪ್ರಾಚಾರ್ಯರ ಉದ್ಘಾರ ಅತಿಶಯೋಕ್ತಿಯೇನಲ್ಲ.
ಅವಳ ಕಾರ್ಯ ಗುಣಗಾನ ಮಾಡಿದವರು ಒಬ್ಬಿಬ್ಬರಲ್ಲ.ಹಿರಿಯ ಶಿಕ್ಷಕ ರಾಜಶೇಖರ ಪಾಗಿ ಬಿ.ಎಸ್.ಕವಿಶೆಟ್ಟಿ,ಮುಖ್ಯೋಪಾಧ್ಯಾಯಿನಿಯರಾದ ಪಂಚಾಕ್ಷರಿಮಠ ಮೇಡಂ, ನಿವೃತ್ತ ಉಪನ್ಯಾಸಕರಾದ ರಮೇಶ ದಡ್ಡಿ.ಇತ್ಯಾದಿ.ಈ ಸಂದರ್ಭ ದಲ್ಲಿ ಗೆಳೆಯ ಕವಿಶೆಟ್ಟಿ ನೀವು ಒಂದೆರಡು ಮಾತನಾಡಿದ್ದಾರೆ ಎನ್ನಬೇಕೆ ? ಪ್ರಾಯಶ ಅವರು ನಾವು 1994 ರಲ್ಲಿ ಪ್ರೌಢಶಾಲೆಯ ಸಹ ಶಿಕ್ಷಕರಾಗಿ ಸೇವೆಗೆ ಸೇರಿದ್ದು ಎನ್ನುವುದು ಒಂದು ಕಾರಣವಾದರೆ ಇನ್ನೂಂದು ದೀರ್ಘ ಅವಧಿಯಲ್ಲಿನ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದು ಇನ್ನೂಂದು ಕಾರಣ .ಇರಲಿ ಇಲ್ಲಿ ಈಗಾಗಲೆ ನಮ್ಮ ಸಂಸ್ಥೆಯ ಮುಖ್ಯಸ್ಥರು ಮಾತನಾಡಿದ್ದಾರೆ. ಬಹುತೇಕರು ಸಂಸ್ಥೆಯ ಮುಖ್ಯಸ್ಥರಾಗಿ ಮಾತನಾಡಲು ಅವಕಾಶ ನೀಡಿದ್ದು ಸಮಯೋಚಿತವಾಗಿತ್ತು ಹಾಗಾಗಿ ನಾನು ನನ್ನ ಅಭಿಪ್ರಾಯ ಹಂಚಿಕೊಳ್ಳಲಿಲ್ಲ ಈಗ ಹಂಚಿಕೊಳ್ಳುವ ಮನಸ್ಸಾಯಿತು ಹೀಗಾಗಿ ಹಂಚಿಕೊಂಡೆ. ಇದೆ ರೀತಿಯಲ್ಲಿ  ಅಭಿಪ್ರಾಯವನ್ನು  ಅಂದು ನಾನು ಮೂಡಲಗಿ ಪಿ.ಯು ಕಾಲೇಜಿಗೆ ಜಾಗೃತಾದಳದ ಸದಸ್ಯ ನಾಗಿ ಹೋದಾಗ SS ಪಾಂಡು ಎನ್ನುವ ಪ್ಯೂನ ಕುರಿತು ವೃತ್ತಿ ಗೌರವ ಎತ್ತರಿಸಿದವರು ಎನ್ನುವ ಶಿರ್ಷಿಕೆಯಲ್ಲಿ ಬರೆದಿದ್ದೆ. ಆವಾಗ ನಾನು ನಾಗಮ್ಮ ಳನ್ನು ನೆನೆಪು ಮಾಡಿಕೊಂಡಿದ್ದೆ ಸಹ.ಇವತ್ತಿನ ದಿವಸ ನಾಗಮ್ಮನಂತೆ ವೃತ್ತಿ ಗೌರವ ಎತ್ತರಿಸುವವರ ಸಂಖ್ಯೆಯು ಹೆಚ್ಚಾಗಬೇಕಾಗಿದೆ ಆ ಕಾರಣಕ್ಕಾಗಿ ಈ ಬರವಣಿಗೆ.ಏನೆ ಆಗಲಿ ದ್ವಿತೀಯ ದರ್ಜೆಯ ಸಹಾಯಕರಾಗಿ ಬಡ್ತಿ ಹೊಂದಿದ ನಾಗಮ್ಮ ಅಲ್ಲಿಯೂ ಇದೆ ರೀತಿಯ ಹೆಸರು ಮಾಡಿ ಹುದ್ದೆಯ ಗೌರವ ಹೆಚ್ಚಿಸಲಿ ಮತ್ತು ಅವರಗೆ  ದೇವರು ಆಯುರಾರೋಗ್ಯ ಕೊಟ್ಟು ದಯಪಾಲಿಸಲಿ ಎಂದು ಹಾರಿಸುವೆ.

Monday, October 7, 2024

ಹತಭಾಗ್ಯರು

ಸತ್ಯವರಿಯದೆ ನಿತ್ಯ ತಿರುಗುವ
ಬೆತ್ತಲೆಯ ಜಗದ ಹತಬಾಗ್ಯರು
ಗೊತ್ತು ಮಾಡಿಕೊಳ್ಳುವ ಕಾಲವಿದು 
ಬಿತ್ತಬೇಕು ಸುಜ್ಞಾನದ ಬೀಜ ಮನದೊಳು॥

ಗೌರವ ಬೇಡಿ ಪಡೆಯುವ ಸರಕಲ್ಲ
ದೊರಕುವಂತೆ ನಡೆಯಬೇಕು ಅನುದಿನ 
ಹರಕು ಮಾತಿನಿಂದ ದೊರಕದು ಸಿರಿತನ
ಹೊರೆಯಾಗದ ಬದುಕಿರಲಿ ಜಗದೊಳು॥

ಉಚ್ಚ ನೀಚ ಬಚ್ಚಲಿನ ಬಾಳು
ನೆಚ್ಚಿ ಬದುಕುವ ಜನರಿಂದಿರು ದೂರ
ಸ್ವಚ್ಛ ಜನರೆ ಹಾರ, ಬಿಚ್ಚಿ ನಡೆಯಬೇಕು
ಕಚ್ಚುವ ತಿಗಣಿಗಳುಂಟು ಜಲದೊಳು॥

ಗತವರಿಯುವ ಸುತರು ಮಿತಿಯಲಿರಲು
ಮತಿಯ ನೆರಳು ಮೀರಿ ನಡೆಯಲಾಗದು
ಕಥನ ಬರೆಯುವ ಹಿತ ಶತ್ರುಗಳಿಹರು
ಜೊತೆ ನಡೆದರೆ ಘಾತ ಕೊನೆಯೊಳು॥

ಕಟ್ಟು ಕಥೆ ಇಟ್ಟು ವಾದದಲ್ಲಿವರ ಪಟ್ಟು
ಬಿಟ್ಟು ಸಾಗದಿರು ಇತಿಹಾಸದ ಗುಟ್ಟು
ಒಟ್ಟುಗೂಡಿ ಹೋಗೋಣವೆಂದವನ
ಹೆಣ ಸಾಗುವುದು ನಾಮದ ಮಸಣದೊಳು॥



Thursday, October 3, 2024

ಎನ್ ಎಸ್ ಎಸ್ ದಿನಾಚರಣೆ.

               ಮತ್ತೆ, ಆ ನಾಲ್ಕು ವರ್ಷಗಳ NSS ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ದಿನಗಳು ಮನಪಟಲದ ಮೇಲೆ ಸುಳಿದು ಹೋಗಿ ಪುಳಕಗೊಂಡ ದಿನವಿಂದು, ಅದಕ್ಕೆ ನೀರೆರೆದವರೆ ಭಂಡಾರಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ NSS ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಂಜಣ್ಣ ಪಿ ಮತ್ತು ಡಾ.ನಾಗೇಂದ್ರರಾವ್. ನಿನ್ನೆ ದಿನ ನನಗೊಂದು ಪೋನ ಕಾಲ್ ಮಾಡಿ ಸರ್ ನಾಳೆ ದಿನ ನೀವು ನಮ್ಮ ಕಾಲೇಜಿಗೆ ಮುಖ್ಯ ಅತಿಥಿಯಾಗಿ ಬರಬೇಕೆಂದರು.ಆವಾಗಲೆ ನನಗೆ ಅರಿವಾಗಿದ್ದು ಸಪ್ಟಂಬರ 24 ಎನ್.ಎಸ್.ದಿನಾಚರಣೆ ಎಂದು.ಸರಿ , ಸುಲಭವಾಗಿ ಒಪ್ಪಲಾಗದು .ಕಾರಣ ಇಷ್ಟೆ ನಾನು ನನ್ನ ಕಾಲೇಜಿನ ಚೌಕಟ್ಟಿನಲ್ಲಿ ಇದ್ದವನು. ಅಂದರೆ ಪ್ರಾಚಾರ್ಯ ರ ಅಧೀನ ದಲ್ಲಿ ಕರ್ತವ್ಯ ನಿರ್ವಹಿಸುವವನು.ಪ್ರಾಚಾರ್ಯರ ಅನುಮತಿ ಸಿಕ್ಕರೆ ಮಾತ್ರ ಹೋಗಲು ಸಾಧ್ಯ! ಹೀಗಿರುವಾಗ ಕಾಲೇಜು ಅವಧಿಯಲ್ಲಿ ಒಪ್ಪುವುದಾದರೂ ಹೇಗೆ?.ಪ್ರಾಚಾರ್ಯರಿಗೆ ಮನವಿ ಮಾಡಲು ತಿಳಿಸಿದೆ.ತಾವು ಒಪ್ಪಿದರೆ ಅನುಮತಿಯನ್ನು ಪಡೆಯುತ್ತವೆ ಎಂದು ಕಾಲ್ ಕಟ್ಟಾಯಿತು ಒಂದು ಗಂಟೆಯಲ್ಲಿ ಆಹ್ವಾನ ಪತ್ರಿಕೆಯನ್ನು ಹೊತ್ತ ವಾಟ್ಸ್ ಆಪ್ ಕಾರ್ಯ ಕ್ರಮಕ್ಕೆ  ಮಾನಸಿಕವಾಗಿ ಸಿದ್ಧರಾಗುವಂತೆ ಮಾಡಿತು.ದಿನಾಂಕ 24.09.24 ರಂದು 11.00 ಗಂಟೆಗೆ ಕಾರ್ಯಕ್ರಮ, ಹಾಗಾಗಿ 10.00 ರಿಂದ11.00 ಗಂಟೆಯ ಅವಧಿಯಲ್ಲಿನ ಎರಡನೆಯ ಅವಧಿ ಪಾಠ ಮುಗಿಸಿ ಬೈಕ್ ಮೇಲೆ ಹೋಗಬೇಕೆಂದಿದ್ದೆ ಅವರೆ ಕಾರು ಕಳುಹಿಸಬೇಕೆ.! ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು ಹಾಗೂ ನಿವೃತ್ತ ಪ್ರಾಂಶುಪಾಲರೂ ಆದ ನಾಯನೇಗಲಿ ಉದ್ಘಾಟಕರಾಗಿ ಆಗಮಿಸಿ ವೇದಿಕೆಯ ಕಡೆ ದಾಪುಗಾಲು ಹಾಕುತ್ತಿದ್ದದ್ದನ್ನು ಕಂಡು ಮತ್ತೆ NSS ನ ಮೌಲ್ಯವಾದ ಶಿಸ್ತಿಗೆ ತಲೆ ಬಾಗಿದೆ. ಇದೇ ಅಲ್ಲವೆ ಎನ್ ಎಸ್ ಧ್ಯೇಯ !(ವೇಳೆಯ ಮಹತ್ವ )ಎಂದು ಮನಸ್ಸಿನಲ್ಲಿ ಉದ್ಘಾರ ತೆಗೆದು ಹಿರಿಯರೊಂದಿಗೆ ಕುಶಲೋಪರಿಯಲ್ಲಿ ತೊಡಗಿದೆ .ಕಾರ್ಯಕ್ರಮದ ವೇದಿಕೆಗೆ  ಹೋದಾಗ , ಆ ವೇದಿಕೆಯ ಮುಂಭಾಗದಲ್ಲಿ ಕುಳಿತ ಸ್ವಯಂಸೇವಕರನ್ನು ನೋಡಿ ಬಹಳ ಸಂತೋಷವಾಯಿತು ಕಾರಣವಿಷ್ಟೆ ಪ್ರತಿಫಲ ನಿರೀಕ್ಷಿಸದ ಪರಿಸರಕ್ಕೆ ಬೇಕಾದ ಮಾನವ ಸಂಪನ್ಮೂಲ !.ಉದ್ಘಾಟನೆಯ ನಂತರ ಕಾರ್ಯಕ್ರಮದ ಉದ್ಘಾಟಕರ ಮಾತು ನಂತರ ನನ್ನ ಸರದಿ.

        ಇತಿಹಾಸ  
       ಸ್ವಾತಂತ್ರ್ಯಾನಂತರ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ ಬೆಳೆಸುವ ಮತ್ತು ಅವರನ್ನು ರಾಷ್ಟ್ರದ ಏಕೀಕರಣದಲ್ಲಿ ತೊಡಗಿಸಲು ಸೇವಾ ಸಂಘಟನೆಯ ಅಗತ್ಯತೆಯನ್ನು ಅರಿತು ರಾಷ್ಟ್ರೀಯ  ನಾಯಕರು ಚಿಂತನ ಮಂಥನ ನಡೆಸಿದರು. ಅವರುಗಳಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣ ರಿಂದ ಹಿಡಿದು ನೆಹರೂರವರೆಗೆ ಮತ್ತು ಕೋಠಾರಿ ಆಯೋಗದ ಶಿಫಾರಸಿನವರೆಗೆ ಪ್ರಯತ್ನಗಳಾದವು.ಆ ಪ್ರಯತ್ನದ ಫಲಶೃತಿ  ಮೇ 1969 ರಂದು ಶಿಕ್ಷಣ ಸಚಿವಾಲಯ ಹಾಗೂ ವಿಶ್ವ ವಿದ್ಯಾಲಯ ದನಸಹಾಯ ಆಯೋಗ ವಿದ್ಯಾರ್ಥಿಗಳ ಪ್ರತಿನಿಧಿಗಳ ಸಮ್ಮೇಳನ ಕರೆಯಿತು. ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯ ಭಾವನೆ ಮತ್ತು ರಾಷ್ಟ್ರ ದ ಏಕೀಕರಣಕ್ಕೆ ರಾಷ್ಟ್ರೀಯ ಸೇವಾ ಯೋಜನೆಯ ಇರಬೇಕೆಂದು ಸರ್ವಾನುಮತದ ತೀರ್ಮಾನ ಕೈಗೊಂಡರು.ನಾಲ್ಕನೆಯ ಪಂಚವಾರ್ಷಿಕ ಯೋಜನೆಯಲ್ಲಿ ರಾಷ್ಟ್ರೀಯ ಯೋಜನಾ ಆಯೋಗ 5 ಕೋಟಿ ರೂಪಾಯಿ ಬಿಡುಗಡೆ ಮಾಡಿತು ಮತ್ತು ಇದೊಂದು ರಾಷ್ಟ್ರೀಯ  ಯೋಜನೆಯಾಗಿ ವಿಶ್ವ ವಿದ್ಯಾಲಯ  ಹಾಗೂ ಆಯ್ದ ಶಿಕ್ಷಣ  ಸಂಸ್ಥೆಗಳಲ್ಲಿ ಜಾರಿಗೆ ಬರುವಂತೆ ತೀರ್ಮಾನವಾಯಿತು. ಆದರೆ ಅದು ನಿಜವಾಗಿ ಜಾರಿಗೆ ಬಂದದ್ದು ಗಾಂಧೀಜಿಯವರ ಶತಮಾನೋತ್ಸವದ ವರ್ಷ ವಾದ 1969 ರ ಸೆಪ್ಟೆಂಬರ 24 ರಂದು, ಅಂದಿನ ಕೇಂದ್ರ ಶಿಕ್ಷಣ ಮಂತ್ರಿಯಾಗಿದ್ದ ವಿ.ಕೆ.ಆರ್ ವ್ಹಿ ರಾವ್  ದೇಶದ 37 ವಿಶ್ವ ವಿದ್ಯಾಲಯಗಳಲ್ಲಿ ಇದನ್ನು ಬಿಡುಗಡೆ ಮಾಡಿದರು ನಂತರ ರಾಜ್ಯದ ಸ್ನಾತಕೋತ್ತರ ಕೇಂದ್ರ, ಪದವಿ, ಪದವಿ ಪೂರ್ವ ಕಾಲೇಜುಗಳಲ್ಲಿ ವಿಸ್ತಾರ ಹೊಂದಿತು.

ಉದ್ದೇಶ  
         ರಾಷ್ಟ್ರೀಯ ಸೇವಾ ಯೋಜನೆಯ ಉದ್ದೇಶ " NOT ME BUT YOU " ನನಗಲ್ಲ ನಿನಗೆ.ಅಂದರೆ ಸೇವೆಯೇ ಇದರ ಧರ್ಮ, ಗಾಂಧೀಜಿಯವರ ಗ್ರಾಮೋದ್ದಾರ ಇದರ ತಳಪಾಯ, ಸಮಾನತೆಯೇ ಇದರ ಜೀವಾಳ,ರಾಷ್ಟ್ರದ ಏಕತೆ ಇದರ ಕಿರಿಟ .ಇದರ ಬ್ಯಾಡ್ಜನ್ನು ಕೊನಾರ್ಕ್ ಸೂರ್ಯ ದೇವಾಲಯದಿಂದ ತೆಗೆದುಕೊಳ್ಳಲಾಗಿದೆ. ಇದು 8 ಅಲಗುಗಳನ್ನ ಹೊಂದಿದ್ದು ಪ್ರತಿ ಅಲಗು ಮೂರು ತಾಸುಗಳನ್ನು ,ಒಟ್ಟಾರೆ ದಿನದ 24 ಗಂಟೆ ಸೂಚಿಸುತ್ತದೆ ಮತ್ತು ಇದು ಚಲನಶೀಲತೆ ಸಂಕೇತ ಹಾಗೂ ಸ್ವಯಂಸೇವಕರು 24 ಗಂಟೆ ಸೇವೆಗೆ ಸಿದ್ಧ ಎನ್ನುವುದನ್ನು ಬಿಂಬಿಸುತ್ತದೆ.ಈ ಬ್ಯಾಡ್ಜ ಹೆಮ್ಮೆಯ ಸಂಕೇತ ವಾಗಿದೆ.ಅದರಲ್ಲಿರುವ ಕೆಂಪು ತ್ಯಾಗದ,ಬಿಳಿ ಶಾಂತಿಯ,ಮತ್ತು ನೀಲಿ ಸಮೃದ್ಧಿಯ ಸಂಕೇತವಾಗಿದೆ.

ಲಾಭ
   ವ್ಯವಹಾರದ ಬದುಕಿಗೆ ಅಂಟಿಕೊಂಡವರಿಗೆ ರಾಷ್ಟ್ರೀಯ ಯೋಜನೆಯ ಲಾಭ ಅರ್ಥವಾಗಲಾರದು ಅದರಾಚೆ ಬಂದು ನೋಡಿದಾಗ ನಿಜವಾದ ಲಾಭದ ಮಹತ್ವ ಅರಿವಾಗದೆ ಇರದು,  ಶಿಸ್ತು, ಸಮಯದ ಪ್ರಜ್ಞೆ, ಸಹಬಾಳ್ವೆ,ಸಹಜೀವನ, ವ್ಯಕ್ತಿತ್ವ ವಿಕಸನ, ನಾಯಕತ್ವದಗುಣ,ತಾನಾಗಿ ಇದರಿಂದ ಬೆಳದು ಬರುತ್ತವೆ. 
ವೇದಿಕೆಯ ಕಂಪನ ಮರೆಯಾಗುವುದಲ್ಲದೆ ನಮ್ಮ ಪ್ರತಿಭೆಯ ಅನಾವರಣಗೊಳಿಸಲು ಇದೊಂದು ಅಮೂಲ್ಯವಾದ ವೇದಿಕೆಯಾಗಿದೆ.

ಕಾರ್ಯ ಗಳು
     N.S.S ಮೂಲಕ ಪರಿಸರ ಕಾಳಜಿ,ಪ್ರಕೃತಿ ವಿಕೋಪಗಳ ಪರಿಹಾರ, ಪ್ರಾಚ್ಯವಸ್ತು ಸಂರಕ್ಷಣೆಯ ಕಾರ್ಯ ಮುಂತಾದ ವು ಇಲ್ಲಿ ನಡೆಯುತ್ತವೆ.ಹಳ್ಳಿಗಳ ಉದ್ದಾರ ದೇಶದ ಉದ್ಧಾರ  ಸುಮಾರು ಏಳು ಲಕ್ಷ ಕ್ಕಿಂತ ಹೆಚ್ಚಿನ ಹಳ್ಳಿಗಳು ಭಾರತ ದೇಶದಲ್ಲಿವೆ ಅವಗಳ ಉದ್ದಾರವೆ ದೇಶದ ಉದ್ಧಾರ ಗಾಂಧೀಜಿಯವರ ಸರ್ವೋದಯ ಕನಸು ನನಸಾಗಲು ಇಂದು ಯುವಕರು ಹಳ್ಳಿಯ ಕಡೆ ನಡೆಯಬೇಕಿದೆ ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸುವಾಗ ಕೇವಲ ಹಳ್ಳಿಯವರು ಮಾತ್ರ ಇರದೆ ನಗರ ಪಟ್ಟಣದ ಯುವಕರು ಇದರಲ್ಲಿ ಸೇರಿರರುತ್ತಾರೆ ಇವರೆಲ್ಲರ  ಮಿಶ್ರಣ ಭವ್ಯ ಭಾರತದ ಭಾವೈಕ್ಯದ ಹೂರಣ,ಇದು ಭವಿಷ್ಯ ತ್ತಿನ ಹೋಳಿಗೆಯಾಗಬೇಕಾಗಿದೆ .ಪ್ರತಿಯೊಬ್ಬರು ಬಿಳಿಕಾಲರಿನ ಕೆಲಸ ಕೇಳಿದರೆ ತರುವುದಾದರೂ ಎಲ್ಲಿಂದ ? ಹಳ್ಳಿಯನ್ನು ದಿಲ್ಲಿಯನ್ನಾಗಿ ಮಾಡುವ ತಾಕತ್ತು ಯುವಕರಿಗೆ ಮಾತ್ರ ಸಾಧ್ಯ ಅದು ಹಳ್ಳಿಯ ಚರಂಡಿಯ ಮಲಿನತೆಯನ್ನು ಮಾತ್ರ ಹೋಗಲಾಡಿಸದೆ ಅಲ್ಲಿರುವ ಕೆಲವು ಜನರ ಮಲಿನತೆಯನ್ನೂ ಹೋಗಲಾಡಿಸುತ್ತದೆ.ಅಂದರೆ ಜಾಗೃತಿ ಅಂತಹ ಜಾಗೃತಿಗೊಳಿಸುವ ಏಕೈಕ ಮಹತ್ವದ ವೇದಿಕೆ. ರಾಷ್ಟ್ರೀಯ ಸೇವಾಯೋಜನೆಯಾಗಿದೆ ನೀವು ಸೇರಿದ್ದೀರಿ ಇನ್ನೂಬ್ಬರನ್ನು ಸೇರಲು ಪ್ರೆರೇಪಿಸಿ.


ಸ್ವಾತಂತ್ರ್ಯ ದಿನಾಚರಣೆ

      ತಮಗೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು,       ವೇದಿಕೆಯ ಮೇಲೆ ಆಶೀನರಾಗಿರುವ ಗಣ್ಯ ಮಾನ್ಯರೆ ಹಾಗೂ ಪ್ರೀತಿಯ ವಿದ್ಯಾರ್ಥಿಗಳೆ, ಗುಳೇಗುಡ್ಡ ನಾಗರಿಕರ...