ಯಾವ ಕಲೆಗಾರನ ಕುಂಚದ ಕುಡಿಯಿದು
ಕುಡಿನೋಟದಿಂದಲೆ ಕಲ್ಲು ಹೃದಯ
ಕೊಲ್ಲುವ ಕತ್ತಿಯ ಮೊನೆಯಿದು
ಸ್ನಿಗ್ಧ ಸೌಂದರ್ಯದ ಬಲೆಯಿದು॥
ಯಾರು ಜೀವಕಳೆ ತುಂಬಿದರು
ಚಿತ್ರಗಾರ ಡಾ ವಿಂಚಿಯ ಮೊನಾಲೀಸಾ !
ಮುಗ್ಧತೆಯ ಮಡಿಲು ಸೌಂದರ್ಯದ ಬೆಡಗು
ಬಂದಳು ಕುಂಬ ಮೇಳದ ರುದ್ರಾಕ್ಷಿ ಬಾಲೆಯಾಗಿ॥
ಯಾವ ಜಂಗಮವಾಣಿಯ ರಸಗವಳ
ಹೊಂಗನಸಿನ ಸಂಗೀತದ ಹೊಸರಾಗವಿದು।
ರಂಭೆ ಊರ್ವಸಿಯೂ ನಸುನಾಚುವಂತೆ
ಸೇರಹಿಡಿದ ಗೊಂಬೆಯ ಬಿಂಬವಿದು॥
ಯಾರು ಸೆರೆಹಿಡಿದು ತೇಲಿ ಬಿಟ್ಟರು
ಈ ಬ್ರಹ್ಮ ಗೀಚಿದ ಚಿತ್ರ ಬರಹ।
ಸಾವಿರ ಮನಸ್ಸುಗಳ ಸೂರೆಗೊಂಡು
ದೂರ ಉಳಿವ ಕೃಷ್ಣನ ಕೈಚಳಕವಿದು॥
ಯಾವ ಹಳ್ಳಿಯ ಹೈದನ
ತೋಟದಲ್ಲರಳಿದ ಚೆಂಗುಲಾಬಿಯಿದು ।
ಪರಿಮಳ ಸೂಸುವ ಮಲ್ಲಿಗೆಯು
ಸುರಿಯುತಿದೆ ಎಲ್ಲೆಲ್ಲೋ ಮುಂಗಾರು ಮಳೆ ॥
ಯಾವ ಪ್ರಕೃತಿಯು ನೀಡಿದ ಆಕೃತಿಯಿದು
ಬಣ್ಣವೆ ಬಡಿವಾರವೆಂದ ಬಂಡವಾಳವೆ ಬಯಲು।
ಬಣ್ಣಿಸುವ ಪದಗಳು ಬರಿದು ಮಾಡಿದವಳಿವಳು
ಆಶೆಗಣ್ಣಿಗೆ ಉಷ್ಣ ವೇರಸಿದ ಕೃಷ್ಣವೇಣಿಯಿವಳು॥
Super sir
ReplyDelete