Tuesday, August 31, 2021

* ಸಹಿಸಿ ಬೆಳೆಯಬೇಕಿಲ್ಲಿ*

ಕರೆಯೋಣ ಬನ್ನಿ ! ಕಲಿಯೋಣ ಬನ್ನಿ !
ಕನ್ನಡದ ಅಕ್ಷರ ಬರೆಯೋಣ ಬನ್ನಿ ! 
ಬಂಗಾರದ ಮಾತು ಹೇಳೋಣ ಬನ್ನಿ  
ಅನ್ಯರ ಭಾಷೆಗೆ ನನ್ನ ದ್ವೇಷ ಎಲ್ಲಿ ? 
ನಮ್ಮ ಪ್ರೀತಿಯ ಕಾಳಜಿ ಕನ್ನಡಕೆ ಎಂದರೆ ತಪ್ಪು ಎಲ್ಲಿ?
ಮುಪ್ಪು ಬಂದರು ಮರೆಯದು ಪ್ರೀತಿ 
ಉಪ್ಪು ತಿಂದು ಮರೆಯುವುದೇನು ಇಲ್ಲಿ ?
ಅನ್ನ ಉಣ್ಣುವುದಿಲ್ಲಿ .ಕುಡಿಯುವುದು ನೀರು 
ಕೃಷ್ಣೆ ಕಾವೇರಿಯಲ್ಲಿ, ಭಾಷೆಯಂಬ ದ್ವೇಷ 
ಬೆನ್ನಿ ಗಂಟಿ ಬಂದರೂ, ಬರಲಿ ಬಿಡು.
ಓಡು ನೀ ಕನ್ನಡಕೆ ಅಂಟಿ..... 
ಅದು ಬರಿ ಭಾಷೆಯಲ್ಲ ಸಂಸ್ಕೃತಿಯ ಸೊಗಡು ತಿಳಿಯಬೇಕು ಇಲ್ಲಿ..!
ಅತ್ತ ತಮಿಳು ಇತ್ತ ಕೇರಳ 
ಮತ್ತೆ ಮರಾಠಿ ಮೇಲೆ...
ಮುಂದೆ ತೆಲುಗು, ಹಿಂದೆ  ಬಿದ್ದಿದೆ 
ಹಿಂದಿಯ ಸವಾರಿ.. ಸುತ್ತ ಸುತ್ತಿ ತಿರುಗಲಿ ಬಿಡಿ... 
ಸಾವಿರ ವರುಷದ ಸರದಾರ ಸಾಗಿ
ನಡೆದು ಬೀಗಬೇಕು ಅಲ್ಲಿ.  
ಸವತಿಯಂತೆ ಉರಿಯದೆ
ಸಹಿಸಿ ಬೆಳೆಯಬೇಕು
ಭಾರತಾಂಭೆ ಮಡಿಲಲ್ಲಿ ..!
ದಹಿಸಿ ಭಾಷಾಂಧತೆ, ಉಳಿಸಬೇಕು ಏಕತೆ ಇಲ್ಲಿ. 
ಕರೆಯೋಣ ಬನ್ನಿ !ಕಲಿಯೋಣ ಬನ್ನಿ !
ಕನ್ನಡದ ಅಕ್ಷರ ಬರೆಯೋಣ ಬನ್ನಿ//

ಬಸನಗೌಡ ಗೌಡರ

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...