ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ
ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು
ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ
ಬಿಟ್ಟಿರಲಾಗದು ಸೋಕಿಯ ಚೌಕಟ್ಟೆನೊಳಗೆ
ಚಿನ್ನಿ ದಾಂಡು ಚೆನ್ನಾಗಿತ್ತು ಹಳ್ಳಿಯೊಳಗೆ
ಕಣ್ಣಸನ್ನೆ ಮಾಡಿದರೆ ಸಾಕು ನೂರು ಗೆಳೆಯರು
ಕುಣಿದು ಕುಪ್ಪಳಿಸಲಾಟಗಳಿಗೇನು ಬರ ಹಳ್ಳಿಯೊಳಗೆ.
ದಿನಾ ಬಿದ್ದಿರುವೆ ಮೊಬೈಲ್ ಮರಕೋತಿಯಾಟದೊಳಗೆ
ನಗರ ಸೇರಿ ಹಗುರಾಗಿ ಹಾರುವ ಕನಸು ಕಂಡೆ
ಹಗರು ಮಾಡಲಲ್ಲವೆ ನಗರ ಸಂಸ್ಕೃತಿಯ ಕೆಂಡ
ಉಡಿಯಲ್ಲಿಡೆ ಸುಡದೆ ಬಿಡುವುದೇನಿದು ಪಿಂಡ
ಕಡೆಗೆ ಹಳ್ಳಿಯ ಗುಡಿಯೇ ಸ್ವರ್ಗ ಭುವಿಯೊಳಗೆ
ತಂತ್ರಜ್ಞಾನ ವೊಂದೆ ಪರಮವಿಲ್ಲಿ
ಯಂತ್ರಗಳು ನಡೆಸುವವು ಬದುಕನೆಲ್ಲಾ
ಮಂತ್ರವೊಂದೆ ತಂತ್ರ, ಕುತಂತ್ರ,ಇಲ್ಲವೇ ಅತಂತ್ರ
ಮರೆತರೆ ಉಳಿಯಬೇಕು ಭೂತದ ಭಾವಿಯೊಳಗೆ