Monday, February 28, 2022

* ಶಿವರಾತ್ರಿಯ ಶಿವಧ್ಯಾನ *

ಶಿವಧ್ಯಾನ ಮಾಡೋಣ 
ಬಾರೋ ಅಣ್ಣ 
ಶಿವರಾತ್ರಿ ಇಂದು, ಅನ್ನ ನೀರು ಬಿಟ್ಟು 
ಅರಿಷಡ್ವರ್ಗಗಳನ್ನು nಸುಟ್ಟು   
ಶಿವ ಧ್ಯಾನ ಮಾಡೋಣ ಅಣ್ಣ //
ಯುಗ ಮುಗಿದ ಯುಗಾದಿ  
ಬರಲು ಮುಂದೆ 
ಹಗೆತನವ ಕಳೆದು ಹರಗೋಣ ಜಾಗ 
ಬಿತ್ತೋಣ ಪ್ರೀತಿಯ ಬೀಜವಣ್ಣ //
ಹುಲ್ಲು ಕಸಕಡ್ಡ ಕಳೆ ತೆಗೆದು 
ಹುಲಸಾಗಿ ಬಾಳಿನ ಫಸಲು 
ಬೆಳೆಯೋಣ ಬಾರೊ ಅಣ್ಣ // 
ಧನಿದ ದೇಹಕ್ಕೆ ದ್ವನಿಯಾಗಿ 
ನಿಲ್ಲೋನವಣ್ಣ
ಮನಬಾರದ ಅನ್ನ ಸುರುವಿ 
ಹೆಣವಾಗುವ ಮುನ್ನ 
ಧ್ಯಾನದ ಗಣಿಯಾಗೋಣ 
ಬಾರೊ ಅಣ್ಣ// 
ಹೆಣ್ಣು ಮಣ್ಣುಗಳ ಹುಣ್ಣು ಹತ್ತಿ 
ಸುಣ್ಣದಂತೆ ಕರಗುವ ಮುನ್ನ
ಶಿವಧ್ಯಾನ ಮಾಡೋಣ 
ಬಾರೊ ಅಣ್ಣ //
ಶಿವನೆಂಬ ಭಾವ ಮನದಲ್ಲಿ 
ಮೊಳೆತರೆ ಮನೆಯೊಂದು 
ಸುಂದರವಾದ ಉದ್ಯಾನವನ ಅಣ್ಣ//
ಹಾರುವ ಬೂದಿಯ ಮೆತ್ತಿದ 
ಹರನನ್ನು ನೆನೆದರೆ ಹಾರಿ 
ಹೋಗುವದು ಜಾರತನದ 
ಭಾವವಣ್ಣ//
ಶಿವ ಧ್ಯಾನ ಮಾಡೋಣ 
ಬಾರೊ ಅಣ್ಣ, ಶಿವಧ್ಯಾನ 
ಮಾಡೋಣ ಬಾರೋ ಅಣ್ಣ//

Saturday, February 26, 2022

ರವಿವಾರ ರಗಳೆ ಚಿಂತನೆ

* ಪಟ್ಟ *

ಇಲ್ಲಿ ಕೋಳಿಗಳೆ ಕೂಗುವವು 
ಹುಂಜದ್ದೇನಿದ್ದರು ಬರಿ ಕರ್ತವ್ಯ. 
ಕಾಣುವುದು ಸತ್ಯ ಎನ್ನ ಲಾದೀತೆ ? 
ಮಣ್ಣು ಹೊತ್ತವರು ಮಣ್ಣಿನಲ್ಲಿಯೇ 
ಹೂತು ಹೋದರು ಖಡ್ಗ ಹಿಡಿದವರೆ 
ಕಟ್ಟಿದರೆಂದು ಹೊಗಿಳಿದೆವು  
ಕೋಳಿಗಳದೇನು ಮಹಾ ಬಿಡಿ.
ಇದನ್ನೆ ಉರು ಹೊಡೆದು ಜ್ಞಾನಿಗಳಾಗಿಲ್ಲವೆ?  
ದರ್ಪದಿಂದ ಓಣಿ ತಿರುಗಿದ ಹುಂಜ
ತಿಪ್ಪಿ ಕೆದರಿ ಕಾಲುಕೆದರಿದ್ದೆ ಬಂತು 
ಪಟ್ಟ ಕಟ್ಟುವುದು ಮೃದುವಾಗಿ ಮುತ್ತಟ್ಟರಿಗೆ ಮಾತ್ರ ,ಅಲ್ಲವೆ..?.ಇಲ್ಲ ಕೆಲವರು 
ಮೊಟ್ಟೆ ಇಟ್ಟದ್ದಕ್ಕೆ ಎಂದರೆ  
ಬೇಡ ಎನ್ನಲಾದೀತೆ ?  ಏನು ಮಾಡಲಾಗುವುದಿಲ್ಲ, 
ಕಣ್ಣಿದ್ದವರೆ  ಹೇಳಿದ್ದಾರಲ್ಲವೆ. 
ಬಹುಜನರು ಒಪ್ಪಿದರೆ ಅದೆ ಪ್ರಜಾಪ್ರಭುತ್ವ , 
ಅದುವೆ ಸರಿ, ಬಹುಪರಾಕ ಹೇಳಲೇ ಬೇಕು 
ಅಂದರೆ ನಂಬಲೇ ಬೇಕು  
ನಮ್ಮೂರ ನರಸಮ್ಮ ಆರು ಕೋಳಿ 
ಏಳು ಹುಂಜ ಸಾಕಿದ್ದಳು. 
ವಾರದ ಹಿಂದೆ ಆರು ಹುಂಜವೆ ಮಾಯ... 
ಕೇಳಿದೆ... ಅಜ್ಜಿ ಆರು ಹುಂಜ ?  
ಅಜ್ಜಿ ಹೇಳಿತು  " ಯಾವ 
ದಾಬಾದ ಒಲೆಯ ಮೇಲೆ, 
ಚಪ್ಪರಿಸುವವರ ನಾಲಿಗೆ ಮೇಲೆ 
ನಲಿದಾಡಿದೆ ಏನೊ.. ಎಚ್ಚರಿಸಿದವರಿಗೆ 
ಇದೆ ಗತಿ ಎನ್ನಬೇಕೆ !

Friday, February 25, 2022

* ವರ್ತಮಾನದ ಗಾಡಿ *

* ವರ್ತಮಾನದ ಗಾಡಿ *

ಇದು ಕರ್ತಾರನ ವರ್ತಮಾನದ
ಗಾಡಿ,ಇದಕ್ಕೆ ಜೋಡಿಸಿದರು
ಸಿಲಿಕಾನ್ ಚಕ್ರದ ಗಾಲಿ
ನಡೆಸಿವರು ಸುಡುಗಾಡ ದಾರಿ !  
ಕಡಿವಾಣ ವಿಲ್ಲದ ಕುದುರೆ
ಓಡುತಿದೆ ಕಣ್ಣಿಗೆ ಪಟ್ಟಿಯ ಕಟ್ಟಿ 
ಕಾಲನ ಕತ್ತಿ, ಮೇಲೆ ಭಿತ್ತಿ  /
ಯಾರ ಕುತ್ತಿಗೆಗೆ ಸುತ್ತುವುದು
ಯಾರು ಬಲ್ಲ ,ಅರಿಯದೆ ತಿರುಗಿದೆ
ಗಿರಗಿರನೆ ಮೇಲೆ ಕೆಳಗೆ,
ಕ್ರಮಿಸುವುದು ದೂರ....
ಮೇಲೆ ಹೋದರೆ ಕೆಳಗೆ ಇಳಿಯುವಾಶೆ
ಕೆಳಗಿಳಿದರೆ ಮೇಲೇರುವಾಶೆ //
ಬಯಕೆಗಳು ಹೊದ್ದು ಮಲಗಿವೆ
ನಿದ್ದೆ ಮಾಡಲು ಇಲ್ಲಿ ಇಲ್ಲ ಪುರಸೊತ್ತು 
ಮುಂದೆ ಹೋಗುವುದೇ ಎಲ್ಲರ ಚಿತ್ತ /
ಅರೆಗುಂಜಿ ಹೀರುವ ಇರುವೆಗೂ
ಹಿರಿಯಾಶೆ ಆರು ತಿಂಗಳ ಅನ್ನ
ತನ್ನದಾಗಿಸುವಾಸೆ, ಮೂರೆ  ತಿಂಗಳಿಗೆ
ಮುಗಿಯುವುದು ಅದರ ಸಂತೆ //
ಹೆಕ್ಕಿ ಕಟ್ಟುವ ಹುತ್ತ ಹೆರವರದು.
ಹತ್ತಿ ಹತ್ತಿ ನೋಡುವುದೆ
ಅದರ ಭ್ರಮಣದ ಸಂಭ್ರಮ/
ಹಾವುಗಳು ವಾಸಮಾಡುವವು
ಎನ್ನುವುದು ಅದಕೇನು ಗೊತ್ತು  //
ಹಾರುವ ಹಕ್ಕಿಗಳ ಮೇಲೆ
ಉರಿಯುವ ಅಸ್ತ್ರಗಳು,
ಯಾರ ದೀಪ ಆರಿದರೇನು ?
ದಾರಿ ನನ್ನದೆ ಆಗಬೇಕು !
ನಿನ್ನ ದಾರಿ ಕತ್ತಲಾದ ಮೇಲೆಯೇ
ಗೊತ್ತಾಗುವುದು ಕರ್ತಾರನ
ವರ್ತಮಾನದ ಗಾಡಿ  // 

Sunday, February 20, 2022

* ಕನ್ನಡದ ಕನಸುಗಾರ *

🌹🌹🌹🌹🌹🌹🌹🌹
ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ ಧಾರವಾಡ ಮತ್ತು ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ

ಕನ್ನಡದ ಮೇರು ಕವಿ ಶ್ರೀ ಚನ್ನವೀರ ಕಣವಿ ಅವರಿಗೆ ಶ್ರದ್ಧಾಂಜಲಿ ನುಡಿನಮನ 
ಸ್ಫರ್ಧೆಗಾಗಿ ಕವನದ  ಧ್ವನಿ ಮುದ್ರಣ 

* ಕನ್ನಡದ ಕನಸುಗಾರ *

ಸಾಹಿತ್ಯ ಕಣವಿಯಲಿ ಸಾವಿರ 
ಮರ ಬೆಳದ ಕಾವಲುಗಾರ.
ಚಿನ್ನದಂತ ಚನ್ನವೀರ ನೀವೆನ್ನ 
ಕನ್ನಡ ಕಣಜ ಕಟ್ಟಿದ
ಕನಸುಗಾರ.//

ಭಾವಗಳಿಗೆ ಜೀವ ನೀಡುವ 
ಭವದ ಭಾಗ್ಯದ ಬಳೆಗಾರ 
ಹೊಂಬಳದಿ ನಂಬಿ ಬೆಳೆದ 
ಹೊಂಬೆಳಕಿನ ತುಂಬಾ ಸವಿಗಾರ//

ಬೆಂಬೆಳಕು ನೀಡಿ ಬೆಳೆದ 
ಸುನೀತಗಳ  ಸಾಮ್ರಾಟ್ .
ರಟ್ಟಿಗೂ ಗಟ್ಟಿ ಕಳೆ ನೀಡಿದ  
ಪಟ್ಟಿ ಕಿರಿಟದ ಪೇಟಗಾರ//

ನೀವಿಟ್ಟ ಹೆಜ್ಜೆಯ ಗುರುತು 
ಜ್ಞಾನ ಕಾಶಿಯಲಿ  ಸಂಚಾರ 
ನಾಡೆಲ್ಲ ಹಾಲು ಜೇನಾಗಿಸಿದ
ನವ್ಯಕಾವ್ಯ ಮನ್ವಂತರಗಾರ.//

ಮಾನವೀಯ ಮೌಲ್ಯಗಳ 
ವಿನಯದ ವಿಶಾಲ ಗುಣವಂತ .
ಕಾಣದಂತೆ ಮರೆಯಾದ  
ಸಂಸ್ಕಾರದ ಹೃದಯವಂತ.//

ಕನ್ನಡದ ತೇರು ಮುನ್ನಡೆಸಲು 
ನೀವೀರಬೇಕಿತ್ತು ಜೊತೆಗಾರ. 
ಕಾಣದ ಕರವೊಂದು ಕರೆದು  
ಕಣ್ಮುಂದೆ ಆದೆ ಮಾಯಗಾರ.//


 

Wednesday, February 16, 2022

ಬೆಳದಿಂಗಳ ಕಾವ್ಯಾನುಸಂಧಾನ ಸರಣಿ 4

ದಿನಾಂಕ 17.02.2022 ರಂದು ಶ್ರೀ ಚಂದ್ರ ಶೇಖರ
ಹೆಗಡೆ ಯವರ ಮನೆ ಅಂಗಳದಲ್ಲಿ ಭಾರತ ಹುಣ್ಣಿಮೆಯ ಹಬ್ಬದ ರಸದೌತಣ, ಬೆಳದಿಂಗಳ ಕಾವ್ಯನುಸಂದಾನ ಸರಣಿ 04 ರ ಸಂಭ್ರಮ. ಇಂದು ಇದು ವಿಶೇಷವಾಗಿ ಜರುಗಿದ ಕಾರ್ಯಕ್ರಮ ಯಾಕೆಂದರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದರ ಹಿರೇಮಠರು ನೀಡಿದ  ಅಲ್ಲಮಪ್ರಭುಗಳ "ನಿಜ ಮಾಯಾ ಜ್ಯೋತಿಯ ಆಯಾಮ ದರ್ಶನ ". ಕಲ್ಯಾಣದ ಶರಣರ ಅನುಭವ ಮಂಟಪ ನಾನು ನೋಡಿಲ್ಲ, ಆದರೆ ಅದರ   ಅನುಭಾವದ ಅನುಭೂತಿ ನಾ ಕಂಡೆ.ಶ್ರೀ ಜಗದ್ಗುರ ಪಟ್ಟಾದಾರ್ಯ 108 ಬಸವರಾಜ ಮಹಾಸ್ವಾಮಿಗಳ ಸಾನಿದ್ಯ , ಕನ್ನಡ ಕಲಿಸಿದ ಗುರುಗಳಾದ ಪ್ರೊ ಎಸ್ ಐ ರಾಜನಾಳ ಸರ್ ಅವರ ಅಲ್ಲಮನ ನೆಲೆಯಲ್ಲಿ ಬಂದ  ಆಧ್ಯಾತ್ಮಿಕ ಅನುಸಂದಾನ, ಶಿಕ್ಷಣ ಶಾಸ್ತ್ರ ಬೋಧಿಸಿದ ಡಾ ವಿ ಎ ಬೆನಕನಾಳ ಸರ್ ರ ತಾತ್ವಿಕವಾದ ಚಿಂತನೆಯ ಮಂಥನ ,ಎನ್ನ ಮನದಲ್ಲಿ ಮೂಡಿದ ಸಣ್ಣ ಸಂಶಯಗಳ ಸಂಹಾರ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ  ಹೆಗ್ಗುರುತು ಮೂಡಿಸಿ ಸದ್ಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಸಿದ್ದಲಿಂಗಪ್ಪ ಬರಗುಂಡಿ ಸರ್ ರಂತಹ ದಿಗ್ಗಜರ ಮಧ್ಯೆ ನಾನೊಬ್ಬ ಪೆದ್ದ, ಎದ್ದು ಬಿದ್ದು ಕವನ ಓದಿದೆ ಎನ್ನುವುದಿಕ್ಕಿಂತ ಸದ್ಯ ಅವರ ಮಧ್ಯ ನನಗೂ ಒಂದು ಅವಕಾಶ ಸಿಕ್ಕಿತು ಎನ್ನುವುದು ನನ್ನ ಸಮಾಧಾನದ ಸಂಗತಿ .ಹೆಗಡೆಯವರ ಮನೆಯಂಗಳದಲ್ಲಿ ಚನ್ನವೀರ ಕಣವಿಯವರ ನುಡಿ ನಮನ, ಅವರು ನಮ್ಮನ್ನು ಅಗಲಿದ ದುಃಖ ನಡುವೆಯೂ ಅಲ್ಲಮನ ಆದರ್ಶ ದರ್ಶನ ಮಾಡಿಸಿದ  ಹೆಗಡೆ ಕುಟುಂಬ ವರ್ಗಕ್ಕೆ ನನ್ನ ದೊಂದ ದೀರ್ಘ ದಂಡ ನಮಸ್ಕಾರ. 

ಅನಿಸಿಕೆ :-

ಆಧುನಿಕ ಅಲ್ಲಮರ  ಅಪರಾವತಾರ  
ಅನುಭಾವಿಗಳ ನೆಲದಲ್ಲಿ ಬಂದು 
ಸೇರಿದೇವು ನಾವೆಲ್ಲ /
ಚಂದ್ರ...ಶೇಖರನ ಬಯಲು 
ಮನೆಯಂಗಳ 
ಹಿಟ್ಟು ಚೆಲ್ಲಿದಂತ
ಭಾರತ ಹುಣ್ಣಿಮೆ ಬೆಳದಿಂಗಳ /
ವಚನ  - ಕಾವ್ಯಗಳ 
ಅನುಸಂಧಾನದ ಮಂಗಳ
ಅದು ನಮಗೊ ನಿಮಗೊ 
ಎತ್ತಿಕೊಂಡವರ ಆಲಿಂಗನ/
ನಡೆದಷ್ಟು ದಾರಿಯಲ್ಲಿ  
ಪಡೆದಷ್ಟು ಭಾಗ್ಯ ,
ಮರೆತವನೆ ಮಂಗ/
ಬಸವನ ನೆಲದಲ್ಲಿ ಹಸಿವು ಹಿಂಗಿತ್ತು .
ಶರಣ ಅಲ್ಲಮರ  ವಚನಗಳ 
ಬೇವು ಬೆಲ್ಲ, 
ಅನುಭವಿಗಳ ಅನುಭಾವದಿಂದ 
ನಮಗಾಯಿತು ಜ್ಞಾನ ವೃದ್ದಿ /
ಎನ್ನ ಮನದಂಗಳದಲ್ಲಿ 
ಕನ್ನಡ ಸಾಹಿತ್ಯ ಸಮೃದ್ಧಿ //

Monday, February 14, 2022

*ಪ್ರೀತಿಸಲು ಒಂದು ದಿನ ಬೇಕೆ?*

ಪ್ರೀತಿಯಿಲ್ಲದ ಮೇಲೆ ಯಾತರ ಬದುಕು 
ಪ್ರೀತಿಸಲು ಒಂದು ದಿನ ಬೇಕೆ ?  
ಹುಚ್ಚ ಒಂದೆ ದಿನ ಸಾಕೆ ..!
ಪ್ರೀತಿಯ ಹಾದಿ ತುಳಿದ ಮ್ಯಾಲೆ 
ಚೌಕಾಸಿ ಯಾಕೆ, ಚೌಕಾಸಿ ಯಾಕೆ. //

ಪ್ರೀತಿ ಎಂಬ ಎರಡಕ್ಷರಕಾಗಿ 
ಸೋತು ಶರಣಾದವರು ಸಾವಿರ 
ಸಾವಿರವುಂಟು, ಬಿಟ್ಟು ಗೆದ್ದವರುಂಟೆ 
ಹುಚ್ಚಾ  ಹೆದರಿ ಸಾಯೋದ್ಯಾಕೆ, 
ಸಾಯೋದ್ಯಾಕೆ //

ಪ್ರೀತಿಗಾಗಿ ಕೊಂದವರ ಕಂಡೆ 
ನೊಂದವರ ಕಂಡೆ ಕಣ್ಣಿದ್ದು 
ಕುರುಡಾದವರ ಕಂಡೆ ಇದ್ದದ್ದು 
ಹೇಳಲು ತಡವರಿಸುವದು ಯಾಕೆ 
ತಡವರಿಸೋದೇಕೆ//

ಪ್ರೀತಿಯೆಂದರೆ ವ್ಯಾಮೋಹವಲ್ಲ
ಹಿಡಿದ ಪಾತ್ರದ ಮೇಲಿನ ಭಕ್ತಿ 
ಅಂತರಾತ್ಮದ ಮೂಲ ಶಕ್ತಿ 
ಸತ್ಪಾತ್ರ ಜಾಲದ ಉಕ್ತಿ, ಅರಿಯದೆ 
ಹುಚ್ಚರಂತೆ ತಿರಗತಿ ಯಾಕೆ//

ಪ್ರೀತಿಗಾಗಿಯೇ ಶಿಕ್ಷಣ ಐತಿ 
ಗುರುವಿನ ಮೇಲೈತಿ, ಶಿಷ್ಯರ ಮೇಲೈತಿ 
ಆಯ್ಕೆ ಮಾಡಿದ ವಿಷಯದ ಮೇಲೈತಿ
ಗುರುಮಂದಿರದ ಮೇಲೈತಿ,ಅದು ನಿನಗೆ 
ಗೊಂದಲ ಯಾಕೈತಿ ಗೊಂದಲ ಯಾಕೈತಿ //

ಹಾನಾಪೂರದಲ್ಲೊಂದು ನಕ್ಷತ್ರ

  "ಪ್ರತಿಭೆಗಳು ಗುಡಿಸಲುಗಳಲ್ಲಿ ಅರಳುತ್ತವೆ ಎನ್ನುವ ಮಾತೊಂದಿದೆ" ಅದು ಅಕ್ಷರಶಃ ಸತ್ಯ ಎನ್ನುವುದು ಈಗ  ಹಾನಾಪೂರ ಗ್ರಾಮದ ಕರಿಯಪ್ಪ ಮಾದರ ಎನ್ನುವ ಹುಡುಗ ಮಾ...