Monday, December 24, 2018

ವೇದನೆ

ತವರಿಗೆ ಬಾ ಅಂದೆ ತಾವರೆ
ಎಸಳೆಂದೇ  ತಾನಿಲ್ಲವೆಂದ
ತನುವೆಲ್ಲಿಂದ ತಡ ಮಾಡಬೇಡ
ತಾಳಿ ಸುಡಬೇಡ

ನಿನ್ನ ಮಾತು  ಮಲ್ಲಿಗೆ
ಮನಸು ಬಿಚ್ಚಿ ಮಾತಾಡಿ
ಮರೆಯಾಗಿ ನೀ ನಿಂತೆ
ಮನೆಯಲ್ಲ ಭೂತ ಸಂತೆ


ನೀನಿಟ್ಟ  ತಿಲಕ ನೀನುಟ್ಟ ಸೀರೆ
ಸಾಲುಗಟ್ಟೆ ಕಾಡತಾವು
ನೆನಪಿನ ಕದನ ನಾ ಸೋತೆ
ವೇದನೆ ಬಾರ ಸುಡತಾವು

ನನಗಿಲ್ಲ ನೂರು ದಾರಿ
ನಿನೊಂದೆ ರಹದಾರಿ
ಕಲ್ಲು ಮುಳ್ಳಿಲ್ಲ ಹೂವೆ
ಅದರ ತುಂಬೆಲ್ಲ

ನನ್ನ ಹೃದಯದ ಗೂಡು
ನೀನಿಲ್ಲದ  ಬರಿ ಸುಡುಗಾಡು
ನಿನ್ನನ್ನಲ್ಲದೆ ಇನ್ನಾರನ್ನ ಕಾಣೆ
ದೇವರಾಣೆ ನೀನೇ ಜಾಣೆ 

ನಿನ್ನ ನಾಸಿಕದ ಮೇಲೆ
ನರ್ತಿಸುವ ಕನ್ನಡಕ ನೋಡಿ
ನಾ ನಡುಗಲಿಲ್ಲವೇನು
ಮುತ್ತಿಟ್ಟು ಸಂತೈಸಲಿಲ್ಲವೇನು



          ಬಸನಗೌಡ ಗೌಡರ

No comments:

Post a Comment

ಕಾರು ಕಾರಬಾರು

ಕಟ್ಟಿ ಹಾಕಿದರೆನ್ನ ಈ ಪುಟ್ಟ ಮನೆಯೊಳಗೆ ಬೆಟ್ಟ ದಷ್ಟು ಆಶೆ ಗಟ್ಟಿ ದೇಹ ಕಟ್ಟುಬೇಕೆಂದು ಸುಟ್ಟು ಹಾಕಿದರೆನ್ನ ಬಾಲ್ಯ ಶ್ರೇಷ್ಠತೆಯೊಳಗೆ ಬಿಟ್ಟಿರಲಾಗದು ಸೋಕ...